ಮಕ್ಕಳ ಭುಜದ ಮೇಲೆ ಬಿಜೆಪಿ ಅಭ್ಯರ್ಥಿ
ಜೈಪುರ್, ಮಾ.24: ಬಗ್ಗಿ ನಿಂತಿದ್ದ ಶಾಲಾ ಮಕ್ಕಳ ಭುಜದ ಮೇಲೆ ಬಿಜೆಪಿ ಅಭ್ಯರ್ಥಿಯೊಬ್ಬ ನಡೆದುಕೊಂಡು ಹೋಗಿರುವ ಪ್ರಸಂಗ ನಡೆದಿದೆ. ರಾಜ್ ಕೋಟ್ ನ ಬಿಜೆಪಿ ಅಭ್ಯರ್ಥಿ ಮೋಹನ್ ಕುಂದರಿಯಾ ಅವರ ಈ ನಡಿಗೆ ರಾಜಸ್ಥಾನದಲ್ಲಿ ಭಾರಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಎಲ್ಲೆಡೆ ಬಿಜೆಪಿ ನಾಯಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.
ಶಾಲಾ ಕಾರ್ಯಕ್ರಮವೊಂದರಲ್ಲಿ ಮೋಹನ್ ಕುಂದರಿಯಾ ವಿಶೇಷ ಆಹ್ವಾನಿತನಾಗಿದ್ದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಯೋಗದ ಬಗ್ಗೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸುಮಾರು 1 ಗಂಟೆಗೂ ಹೆಚ್ಚು ಕಾಲ ಯೋಗದ ಬಗ್ಗೆ ಉಪನ್ಯಾಸ ನೀಡಿದ ಕುಂದರಿಯಾ ನಂತರ ಮಕ್ಕಳನ್ನು ಸಾಲಾಗಿ ಬಗ್ಗಿ ನಿಲ್ಲುವಂತೆ ಸೂಚಿಸಿದರು. ಸಾಲಾಗಿ ಬಗ್ಗಿ ನಿಂತ ಶಾಲಾ ಮಕ್ಕಳ ಭುಜದ ಮೇಲೆ ಕುಂದರಿಯಾ ನಡೆದುಕೊಂಡು ಹೋಗಿದ್ದಾರೆ. ಹಿಮ್ಮೇಳದಲ್ಲಿ ವಂದೇ ಮಾತರಂ ಗೀತೆ ಮೊಳಗಿದೆ.

ರಾಜ್ ಕೋಟ್ ನ ಬಿಜೆಪಿ ಅಭ್ಯರ್ಥಿ ಮೋಹನ್ ಕುಂದರಿಯಾ ನಡಿಗೆ ವೀಡಿಯೋದಲ್ಲಿ ಚಿತ್ರೀಕರಣವಾಗಿದ್ದು, ಬಿಜೆಪಿ ಮತ್ತು ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಒತ್ತಾಯಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಯೋಗ ಹೇಳಿಕೊಡುವ ಉದ್ದೇಶದಿಂದ ಪಕ್ಷಾತೀತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಕ್ಕಳ ದೈಹಿಕ ಕ್ಷಮತೆ, ಶಕ್ತಿ ಬಗ್ಗೆ ಪರಿಚಯ ನೀಡಲು ಈ ರೀತಿ ನಡಿಗೆ ಹಮ್ಮಿಕೊಳ್ಳಲಾಗಿತ್ತು ಎಂದು ಸ್ಥಳೀಯ ಬಿಜೆಪಿ ಘಟಕ ಸಮರ್ಥಿಸಿಕೊಂಡಿದೆ. ವಂದೇ ಮಾತರಂ ಗೀತೆ ಹಿಮ್ಮೇಳ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದ ವೇಳೆಯಲ್ಲಿ ಬಿಜೆಪಿ ಅಭ್ಯರ್ಥಿ ಈ ರೀತಿ ನಡೆದುಕೊಂಡು ಹೋಗಿರುವುದು ಬಿಜೆಪಿಗೆ ಮುಳುವಾಗುವ ಸಾಧ್ಯತೆಗಳಿವೆ.ರಾಜ್ ಕೋಟ್ ನ ಬಿಜೆಪಿ ಅಭ್ಯರ್ಥಿ ಮೋಹನ್ ಕುಂದರಿಯಾ ನಡಿಗೆ ವೀಡಿಯೋ ಮುಂದೆ ನೋಡಿ...












Click it and Unblock the Notifications