• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಲೈಟ್ ಬಲ್ಬ್ ಕದಿಯಲು ಕಾರಿನಲ್ಲಿ ಬಂದ ರಾಜಸ್ಥಾನ ಕಳ್ಳರು

|
Google Oneindia Kannada News

ಜೈಪುರ, ನವೆಂಬರ್‌ 9: ಕಾರಿನಲ್ಲಿ ಬಂದ ಕಳ್ಳರು ಲೈಟ್‌ ಬಲ್ಬ್ ಕದ್ದ ಘಟನೆ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ದೊಡ್ಡ ಜನರಂತೆ ಕಾಣಿಸಿಕೊಂಡು ಸಣ್ಣ ಕಳ್ಳತನಗಳನ್ನು ಮತ್ತು ದರೋಡೆಗಳನ್ನು ಮಾಡುವ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ.

ರಾಜಸ್ಥಾನದ ನವಲಗಢದಲ್ಲಿ ಲೈಟ್ ಬಲ್ಬ್ ಕದಿಯಲು ಕಾರಿನಲ್ಲಿ ಬಂದ ಕಳ್ಳರು ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. 1 ನಿಮಿಷ ಮತ್ತು 20-ಸೆಕೆಂಡ್‌ಗಳ ವಿಡಿಯೋವು ಬಲ್ಬ್‌ಗಳನ್ನು ಕದಿಯಲು ಇಬ್ಬರು ವ್ಯಕ್ತಿಗಳು ಬಿಳಿ ಆಲ್ಟೊ ಕಾರಿನಿಂದ ಇಳಿಯುವುದನ್ನು ತೋರಿಸುತ್ತದೆ. ಉಳಿದವರು ಕಾರಿನೊಳಗೆ ಕುಳಿತಿರುವುದು ಕಂಡುಬರುತ್ತದೆ.

ರಾಜಸ್ಥಾನದ ಬಿಕ್ಕಟ್ಟಿನ ಬೆನ್ನಲ್ಲೇ ಗೆಲುವಿನ ಮಂತ್ರ ಜಪಿಸಿದ ಸಚಿನ್ ಪೈಲಟ್!ರಾಜಸ್ಥಾನದ ಬಿಕ್ಕಟ್ಟಿನ ಬೆನ್ನಲ್ಲೇ ಗೆಲುವಿನ ಮಂತ್ರ ಜಪಿಸಿದ ಸಚಿನ್ ಪೈಲಟ್!

ಅಂಗಡಿಯಿಂದ ಬಲ್ಬ್‌ಗಳನ್ನು ದೋಚುವ ಮೊದಲ ಪ್ರಯತ್ನ ವಿಫಲವಾದಾಗ, ಕಳ್ಳರು ಮುಂದಿನ ಅಂಗಡಿಯತ್ತ ಸಾಗುತ್ತಾರೆ. ಅವರಲ್ಲಿ ಒಬ್ಬರು ಕುರ್ಚಿಯನ್ನು ಎತ್ತಿಕೊಂಡು, ಅದರ ಮೇಲೆ ನಿಂತು, ಬಲ್ಬ್ ಅನ್ನು ಕದಿಯುತ್ತಾರೆ. ರಾಜಸ್ಥಾನದ ಜುಂಜುನುವಿನ ನವಾಲ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲ್ಸಿಯಾ ಗ್ರಾಮದಲ್ಲಿ ಭಾನುವಾರ ನಸುಕಿನ 1:30 ರ ಸುಮಾರಿಗೆ ಈ ಘಟನೆ ನಡೆದಿದೆ.

ಕಳ್ಳರ ಸದ್ದು ಕೇಳಿದ ಅಂಗಡಿ ಮಾಲೀಕ ಮಹೇಂದ್ರ ದೂತ್ ನಿದ್ದೆಯಿಂದ ಎದ್ದಿದ್ದಾರೆ. ಶಬ್ದದ ಹಿಂದಿನ ಕಾರಣವನ್ನು ಕಂಡುಹಿಡಿಯಲು ಅವನು ಹೊರಗೆ ಬಂದಿದ್ದಾರೆ. ಅವರು ಹತ್ತಿರ ಬರುತ್ತಿರುವುದನ್ನು ಕಂಡು ಕಳ್ಳರು ಕಾರು ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿದ ದೂತ್, ಪಕ್ಕದ ಅಂಗಡಿಯ ಶಟರ್ ಅನ್ನು ಯಾರೋ ಒಡೆದು ಹಾಕಲು ಪ್ರಯತ್ನಿಸುತ್ತಿರುವುದನ್ನು ಕೇಳಿಸಿಕೊಂಡಿದ್ದೇನೆ. ಅದನ್ನು ಪರಿಶೀಲಿಸಲು ನನ್ನ ಕೋಣೆಯಿಂದ ಹೊರಬಂದೆ. ಅದೇ ಸಮಯದಲ್ಲಿ ನನ್ನ ಅಂಗಡಿಯ ಬಲ್ಬ್‌ಗಳನ್ನು ಕದಿಯುತ್ತಿರುವುದನ್ನು ನಾನು ನೋಡಿದೆ. ಕಳ್ಳರು ಇತರ ಅಂಗಡಿಗೆ ಕನ್ನ ಹಾಕಲು ಪ್ರಯತ್ನಿಸುತ್ತಿರುವುದಾಗಿ ನನಗೆ ಶಂಕೆ ವ್ಯಕ್ತವಾಯಿತು. ನಾನು ಕೂಡಲೆ ಪೊಲೀಸರಿಗೆ ಕರೆ ಮಾಡಿದೆ ಎಂದಿದ್ದಾರೆ.

ಬಲ್ಬ್ ಕದಿಯಲು ಮಾತ್ರ ಕಳ್ಳರು ಬಂದಿರುವ ಸಾಧ್ಯತೆ ಇದೆ. ಮುಖ್ಯರಸ್ತೆಯಲ್ಲಿ ಕತ್ತಲು ಮಾಡಿ ಸಮೀಪದ ಅಂಗಡಿಗಳ ಬೀಗ ಒಡೆದು ಎಲ್ಲ ಬಲ್ಬ್‌ಗಳನ್ನು ಕದಿಯಲು ಯತ್ನಿಸುತ್ತಿದ್ದಾರಾ ಎಂಬ ಊಹಾಪೋಹಗಳೂ ಕೇಳಿಬಂದಿವೆ. ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸ್‌ ದೂರು ದಾಖಲಾಗಿದೆ.

English summary
Thieves came in a car and stole a light bulb in Rajasthan. This video captured by CCTV camera.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X