ಬಾಲಿವುಡ್ ನ ಹಿರಿಯ ನಟಿ 'ಶಮ್ಮಿ ಆಂಟಿ' ನಿಧನ
ಮುಂಬೈ, ಮಾರ್ಚ್ 06: ಬಾಲಿವುಡ್ ನ ಹಿರಿಯ ನಟಿ, ಶಮ್ಮಿ ಆಂಟಿ ಎಂದೇ ಪ್ರಸಿದ್ಧರಾಗಿದ್ದ ನಟಿ ಶಮ್ಮಿ(89) ಇಂದು(ಮಾ.06)ಮುಂಬೈಯಲ್ಲಿ ವಿಧಿವಶರಾಗಿದ್ದಾರೆ.
ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಸಾವಿಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
'ಕೂಲಿ ನಂ.1', 'ಹಮ್', 'ಗೋಪಿ ಕಿಶನ್', 'ಹಮ್ ಸಾತ್ ಸಾತ್ ಹೆ' ಸೇರಿದಂತೆ 200 ಕ್ಕೂ ಗೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು. ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಅವರು, ಧಾರಾವಾಹಿಗಳಲ್ಲೂ ನಟಿಸುತ್ತಿದ್ದರು.
T 2735 - Shammi Aunty .. prolific actress, years of contribution to the Industry, dear family friend .. passes away ..!!
— Amitabh Bachchan (@SrBachchan) March 6, 2018
A long suffered illness, age ..
Sad .. slowly slowly they all go away .. pic.twitter.com/WYvdhZqo8X
ಅವರ ಸಾವಿಗೆ ಸಂತಾಪ ಸೂಚಿಸಿರುವ ಹಿರಿಯ ನಟ ಅಮಿತಾಬ್ ಬಚ್ಚನ್, 'ಅತ್ಯುತ್ತಮ ನಟಿ, ನಮ್ಮ ಕುಟುಂಬಕ್ಕೆ ಆಪ್ತೆಯಾಗದ್ದ ಶಮ್ಮಿ ಆಂಟಿ ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗಣನೀಯ. ಅವರಿಗೆ ನನ್ನ ಶ್ರದ್ಧಾಂಜಲಿ' ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications