ಫ್ಯಾಷನ್, ಸಿನಿಮಾ, ಕ್ರಿಕೆಟ್ ನಿಂದ ಕ್ರಿಸ್ ಮಸ್ ವರೆಗೆ...

Posted By:
Subscribe to Oneindia Kannada

ಕ್ರಿಸ್ ಮಸ್ ಗೆ ಇನ್ನು ವಾರವಷ್ಟೇ ಇದೆ. ಶಾಪಿಂಗ್, ವಿವಿಧ ಆಚರಣೆಗೆ ಚಾಲನೆ ಸಿಕ್ಕಿಹೋಗಿದೆ. ಬೆಂಗಳೂರಿನ ಸಾಹಿತ್ಯ ಹಬ್ಬಕ್ಕೆ ಬಂದಿದ್ದ ರಜನೀಕಾಂತ್ ಮಗಳು, ಧನುಷ್ ಪತ್ನಿ, ಲೇಖಕಿ-ಸಿನಿಮಾ ನಿರ್ದೇಶಕಿ ಐಶ್ವರ್ಯಾ ಅವರು ತಮ್ಮ ಹೊಸ ಪುಸ್ತಕದ ಬಗ್ಗೆ ಮಾತನಾಡಿದರು. ಜತೆಗೆ ರಜನೀಕಾಂತ್, ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ನಲ್ಲಿ ಒಂದು ರನ್ ನಿಂದ ದ್ವಿಶತಕ ತಪ್ಪಿಸಿಕೊಂಡ ಕೆ.ಎಲ್.ರಾಹುಲ್ ದೊಡ್ಡ ಅವಕಾಶದಿಂದ ತಪ್ಪಿಸಿಕೊಂಡಿದ್ದು ಹೌದು. ಮತ್ತೊಂದು ಕಡೆ ಲಖನೌನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಜೂನಿಯರ್ ಹಾಕಿ ವರ್ಲ್ಡ್ ಕಪ್ ನಲ್ಲಿ ಭಾರತ ವಿಶ್ವ ವಿಜೇತವಾಗಿದೆ.

ಇನ್ನು ಬೆಂಗಳೂರಿನಲ್ಲಿ ನಡೆದ ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಯುವತಿಯರ ಮಾರ್ಜಾಲ ನಡಿಗೆ ಗಮನ ಸೆಳೆಯಿತು. ಒಟ್ಟಾರೆ ಸಿನಿಮಾ, ಕ್ರೀಡೆ, ಫ್ಯಾಷನ್ ಲೋಕದ ಸುದ್ದಿ ಫೋಟೋಗಳಲ್ಲಿ ಹರಡಿಕೊಂಡಿವೆ. ಇದರ ಜತೆಗೆ ವರ್ಷದ ಕೊನೆಯ ತಿಂಗಳ ಹದಿನೈದು ದಿನ ಕಳೆದುಹೋಗಿದ್ದು, ಕ್ರಿಸ್ ಮಸ್ ಸಂಭ್ರಮ ನಿಧಾನಕ್ಕೆ ರೆಕ್ಕಿ ಬಿಚ್ಚಿಕೊಂಡಿದೆ.

ಐಶ್ವರ್ಯಾ ಲಹರಿ

ಐಶ್ವರ್ಯಾ ಲಹರಿ

ಬೆಂಗಳೂರು ಸಾಹಿತ್ಯ ಹಬ್ಬದಲ್ಲಿ ಭಾಗಿಯಾಗಿದ್ದ ಸಿನಿಮಾ ನಿರ್ದೇಶಕಿ, ಲೇಖಕಿ ಐಶ್ವರ್ಯಾ ರಜನೀಕಾಂತ್ ಧನುಷ್ ಗೋಷ್ಠಿಯೊಂದರಲ್ಲಿ ಮಾತನಾಡಿದರು. ತಮ್ಮ ಹೊಸ ಪುಸ್ತಕ, ತಂದೆ ರಜನೀಕಾಂತ್ ಹಾಗೂ ಸಿನಿಮಾಗಳ ಬಗ್ಗೆ ಖುಲ್ಲಂಖುಲ್ಲ ವಿಚಾರಗಳನ್ನು ತೆರೆದಿಟ್ಟ ಗೋಷ್ಠಿಯಲ್ಲಿ ಐಶ್ವರ್ಯಾ ಕಾಣಿಸಿಕೊಂಡಿದ್ದು ಹೀಗೆ.

ಫ್ಯಾಷನ್ ಟೂರ್

ಫ್ಯಾಷನ್ ಟೂರ್

ಬೆಂಗಳೂರಿನಲ್ಲಿ ನಡೆದ ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಫಲ್ಗುಣಿ ಮತ್ತು ಶೇನ್ ಪಿಕಾಕ್ ರೂಪಿಸಿದ ದಿರಿಸು ತೊಟ್ಟ ಯುವತಿಯರು ಕಂಡಿದ್ದು ಹೀಗೆ.

ಕ್ರಿಸ್ ಮಸ್ ಆಚರಣೆ

ಕ್ರಿಸ್ ಮಸ್ ಆಚರಣೆ

ಕ್ರಿಸ್ ಮಸ್ ಆಚರಣೆಯ ಸಂಭ್ರಮ ಅದಾಗಲೇ ಆರಂಭವಾಗಿದೆ. ಕೋಲ್ಕತ್ತಾದಲ್ಲಿ ಅಂಥದೇ ಆಚರಣೆ ನಡೆಯುವಾಗ ಕ್ರೈಸ್ತರು, ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡರು.

ರಾಹುಲ್ ಬೇಸರ

ರಾಹುಲ್ ಬೇಸರ

ಚೆನ್ನೈನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ನಲ್ಲಿ ಒಂದು ರನ್ ನಿಂದ ದ್ವಿಶತಕ ತಪ್ಪಿಸಿಕೊಂಡ ಕೆ.ಎಲ್.ರಾಹುಲ್ ಬೇಸರದಿಂದ ತಲೆ ತಗ್ಗಿಸಿ ಕೂತಿದ್ದು ಹೀಗೆ.

ಮಾರ್ಜಾಲ ನಡಿಗೆ

ಮಾರ್ಜಾಲ ನಡಿಗೆ

ಬೆಂಗಳೂರಿನಲ್ಲಿ ನಡೆದ ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಫಲ್ಗುಣಿ ಮತ್ತು ಶೇನ್ ಪಿಕಾಕ್ ರೂಪಿಸಿದ ದಿರಿಸು ತೊಟ್ಟ ಯುವತಿಯ ಮಾರ್ಜಾಲ ನಡಿಗೆ.

ವಿಶ್ವ ವಿಜೇತ

ವಿಶ್ವ ವಿಜೇತ

ಲಖನೌದಲ್ಲಿ ಬೆಲ್ಜಿಯಂ ವಿರುದ್ಧ ಗೆದ್ದು, ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಭಾರತ ಜೂನಿಯರ್ ಹಾಕಿ ತಂಡದ ನಾಯಕ ಹರ್ಜೀತ್ ಸಿಂಗ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Various events from Fashion to Cricket happend in India represent through PTI photos.
Please Wait while comments are loading...