• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾರಣಾಸಿಯಲ್ಲಿ ಸತ್ತರೆ ಮುಕ್ತಿ ಸಿಗುವುದಂತೆ!

By ಮಲೆನಾಡಿಗ
|

ಜಗತ್ತಿನ ಅತ್ಯಂತ ಪುರಾತನ ನಗರಿ ವಾರಣಾಸಿ, ಜಗತ್ತಿನ ಅತ್ಯಂತ ಸಕ್ರಿಯ ಚಿತಾಗಾರವೂ ಹೌದು. ಒಂದೆಡೆ ವಿಶ್ವನಾಥನ ಆರಾಧನೆ, ಇನ್ನೊಂದೆಡೆ ಶವಗಳ ನಿರಂತರ ಸಂಸ್ಕಾರಕ್ಕೆ ಕಾಶಿ ಕ್ಷೇತ್ರ ಅನಾದಿ ಕಾಲದಿಂದಲೂ ಸಾಕ್ಷಿಯಾಗುತ್ತಾ ಬಂದಿದೆ. ಪರಮ ಪವಿತ್ರ ನದಿ ಗಂಗೆಯ ತಟದಲ್ಲಿ ನಿತ್ಯ ಆರತಿ, ಪೂಜೆ ಲೆಕ್ಕ ತಪ್ಪದ್ದಂತೆ ನಡೆಯುತ್ತಲೇ ಇರುತ್ತದೆ. ಆತ್ತ ನದಿಯಲ್ಲಿ ತೇಲಿ ಬರುವ ಹೆಣಗಳ ಲೆಕ್ಕ ಇಡಲು ಯಾರಿದ್ದಾರೋ ಗೊತ್ತಿಲ್ಲ. ಆದರೆ, ಈ ಪವಿತ್ರ ನಗರಿಯಲ್ಲಿ ಇಂತಿಷ್ಟೇ ದಿನದಲ್ಲಿ ಮುಕ್ತಿ ಕಾಣಲು ಬರುವವರ ಲೆಕ್ಕವಂತೂ ಸಿಗುತ್ತದೆ.

ಭಾರತದ ಆಧಾತ್ಮ ರಾಜಧಾನಿ ಎಂದು ಕರೆಸಿಕೊಳ್ಳುವ ವರುಣಾ ಹಾಗೂ ಅಸಿ ನದಿಗಳ ಊರು ವಾರಣಾಸಿ, ಹಿಂದೂಗಳ ಯಾತ್ರೆ ಕೈಗೊಳ್ಳುವ ಪವಿತ್ರ ನಗರಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲದೆ, ಪಂಚ ಕೋಶಿ ಯಾತ್ರೆ ಕೈಗೊಳ್ಳುವ ಹಾದಿಯಲ್ಲೇ ಕಾಶಿ ಇದೆ. ಹೀಗಾಗಿ ಹಿಂದೆಲ್ಲ ಈ ಯಾತ್ರೆ ಕೈಗೊಂಡು ಹಿಂತಿರುಗಿದರೆ ಅಥವಾ ಯಾತ್ರೆ ಸಂದರ್ಭದಲ್ಲಿ ಪವಿತ್ರ ನಗರಿಗಳಲ್ಲಿ ಮೃತರಾದರೆ ಭಗವಂತನ ಪಾದ ಸೇರಿದರು ಅರ್ಥಾತ್ ಮುಕ್ತಿ ಹೊಂದಿದರು ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ, ಈಗ ಮುಕ್ತಿ ಪಡೆಯಲೆಂದೇ ಕಾಶಿಯ 'ಸಾವಿನ ಮನೆ' ಬಾಗಿಲು ತಟ್ಟಲಾಗುತ್ತದೆ. [ಕಾಶಿಯಾತ್ರೆ ಎಂಬ ಸುಸಂಬದ್ಧ ಮದುವೆ ಸಂಪ್ರದಾಯ]

ಹೌದು, ಕಾಶಿಯಲ್ಲಿ ಮರಣ ಹೊಂದಿದರೆ ಮುಕ್ತಿ ಸಿಗುತ್ತದೆಯಂತೆ 'ಕಾಶ್ಯಂ ಮರಣಂ ಮುಕ್ತಿ' ಎಂಬ ಉಕ್ತಿ ಹಿಂದೂಗಳ ಅನಾದಿಗಳದ ನಂಬಿಕೆಯ ಬುನಾದಿ ಬೆಳೆದು ಬಂದಿದೆ. ದೆಹಲಿ ಹಾಗೂ ಕೋಲ್ಕತ್ತಾ ನಡುವಿನ ಗಂಗಾ ನದಿಕೊಳ್ಳದ ನಗರಿ ಕಾಶಿಯಲ್ಲಿ ಮುಕ್ತಿಗಾಗಿ ಸಾಯುವವರಿಗೂ ನಿಬಂಧನೆಗಳಿವೆ. ಪರಮಶಿವನ ಊರಾದ ಕಾಶಿಯ ಸಾವಿನ ಮನೆಗಳ ಸುತ್ತ ಒಂದು ಸುತ್ತು ಹೊಡೆಯೋಣ ಬನ್ನಿ...[ವಾರಣಾಸಿಯಲ್ಲಿ ನಾ ಬಿಟ್ಟ ನನಗಿಷ್ಟವಾದ ಜಹಾಂಗೀರ್]

ಪ್ರಾಚೀನ ಮಣಿಕರ್ಣಿಕಾ ಘಾಟ್ ನ ಸುತ್ತಾ

ಪ್ರಾಚೀನ ಮಣಿಕರ್ಣಿಕಾ ಘಾಟ್ ನ ಸುತ್ತಾ

ಕಾಶಿಯ ಪಶ್ಚಿಮ ಹಾಗೂ ಪೂರ್ವದ ನದಿ ತಟಗಳ ನಡುವೆ ಗಂಗೆ ಅವಿರತವಾಗಿ ಪಾಪ ನಾಶಿನಿಯಾಗಿ ಹರಿಯುತ್ತಲೇ ಇರುತ್ತಾಳೆ. ಪಶ್ಚಿಮ ನದಿ ತಟದಲ್ಲಿ ಕಾಣಸಿಗುವ ಮಣಿಕರ್ಣಿಕಾ ಘಾಟ್, ವಿಶ್ವದ ಆದಿ-ಅಂತ್ಯಗಳ ಸಾಕ್ಷಿಭೂತವಾಗಿರುವ ಘಟ್ಟ ಎಂದೇ ತಿಳಿಯಲಾಗಿದೆ. ಈ ಘಾಟ್ ನಲ್ಲಿ ಸಾವನ್ನಪ್ಪಿದ್ದರೆ 'ಮೋಕ್ಷ' ಖಚಿತವಂತೆ, ಅದೇ ಪೂರ್ವದ ಘಟ್ಟದಲ್ಲಿ ಸತ್ತರೆ ಮೋಕ್ಷ ಸಿಗುವುದಿಲ್ಲವಂತೆ, ಮತ್ತೆ ಹುಟ್ಟು-ಸಾವಿನ ಚಕ್ರದಲ್ಲಿ ಸಿಲುಕಿ ಪುನರ್ಜನ ಹೊಂದಲೇ ಬೇಕಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.

ಇದು ವಿಶ್ವದ ಅತಿ ದೊಡ್ಡ ಮಹಾ ಸ್ಮಶಾನ

ಇದು ವಿಶ್ವದ ಅತಿ ದೊಡ್ಡ ಮಹಾ ಸ್ಮಶಾನ

ಅದರಂತೆ, ಮಣಿಕರ್ಣಿಕಾ ಘಾಟ್ ನಲ್ಲಿ ಹಗಲು-ರಾತ್ರಿ, ಚಳಿ ಮಳೆ ಗಾಳಿ ಎನ್ನದೆ ಅಗ್ನಿಗೆ ಕಳೇಬರಗಳನ್ನು ಅರ್ಪಿಸುವ ದಹನ ಯಜ್ಞ ಸಾಗುತ್ತಲೇ ಇರುತ್ತದೆ. ಆ ಬದಿಯ ಹರಿಶ್ಚಂದ್ರ ಘಾಟ್ ನಲ್ಲಿದ್ದಂತೆ ಮಣಿಕರ್ಣಿಕ ಘಾಟ್ ನಲ್ಲಿ ವಿದ್ಯುತ್ ಚಿತಾಗರವಿಲ್ಲ, ಸೌದೆಯ ಚಿತೆಯಲ್ಲೇ ಶವಗಳು ಭಸ್ಮವಾಗುತ್ತವೆ. ಶಿವ ಅಥವಾ ಶಿವೆಯ ಕಿವಿಯೊಲೆ ಬಿದ್ದ ಜಾಗವೇ ಮಣಿಕರ್ಣಿಕಾ ಘಾಟ್, ಇಲ್ಲಿ ಸಾಯುವವರ ಕಿವಿಯಲ್ಲಿ ಸ್ವತಃ ಶಿವನೇ ತಾರಕ ಮಂತ್ರ ಪಠಿಸುತ್ತಾನೆ ಎಂಬ ಪ್ರತೀತಿ ಇದೆ. ಕಾಶಿಯಲ್ಲಿ ಸರಿ ಸುಮಾರು 80ಕ್ಕೂ ಅಧಿಕ ಘಾಟ್ ಗಳಿವೆ.

ಮೋಕ್ಷ ಸಾಧನೆಗೆ ಮಾರ್ಗ ಹಲವು, ನಿಯಮ?

ಮೋಕ್ಷ ಸಾಧನೆಗೆ ಮಾರ್ಗ ಹಲವು, ನಿಯಮ?

ಮೋಕ್ಷ ಹೊಂದಲು ನಿಯಮ: ಹಿಂದೂ ಧರ್ಮದವರಿಗೆ ಮೋಕ್ಷ ಸಾಧನೆಗೆ ಹಲವು ಮಾರ್ಗಗಳಿವೆ, ನಿಯಮಗಳಿವೆ. ಕಾಶಿಯಲ್ಲಿ ಬಂದು ಸಾವನ್ನಪ್ಪಿದ ತಕ್ಷಣ ಮುಕ್ತಿ ಸಿಗುವುದಿಲ್ಲ. ಪಾಪ ಪುಣ್ಯಗಳ ಲೆಕ್ಕಾಚಾರ ಚುಕ್ತಾವಾಗಿದ್ದರೂ ಮೋಕ್ಷ ಸುಲಭಕ್ಕೆ ದಕ್ಕುವುದಿಲ್ಲ. ಸಾಯುವ ಸಂದರ್ಭದಲ್ಲಿ ಸಾಯುವ ವ್ಯಕ್ತಿಯ ಮನಸ್ಥಿತಿ ಇಲ್ಲಿ ಮುಖ್ಯವಾಗುತ್ತದೆ. ಇದೇ ಆತನಿಗೆ ಎಷ್ಟು ಬೇಗ ಅಥವಾ ಯಾವ ಸ್ತರದಲ್ಲಿ ಮುಕ್ತಿ ಸಿಗಲಿದೆ ಎಂಬುದನ್ನು ನಿರ್ಧರಿಸುತ್ತದೆ. ಸಮಚಿತ್ತನಾಗದೆ ನಿಷ್ಕಲ್ಮಶ ಮನವಿಲ್ಲದವರು ಇನ್ನೂ ಒಂದಷ್ಟು ಜನ್ಮಗಳನ್ನೆತ್ತಿ ಹರಿ/ಹರನ ಪಾದ ಸೇರಬಹುದಾಗಿದೆ.

ಮೋಕ್ಷದ ನಾಲ್ಕು ಸ್ತರಗಳು ಯಾವುದು?

ಮೋಕ್ಷದ ನಾಲ್ಕು ಸ್ತರಗಳು ಯಾವುದು?

ಮೋಕ್ಷದ ನಾಲ್ಕು ಸ್ತರಗಳು: ದೇವರು ನೆಲೆಸಿರುವ ಲೋಕದಲ್ಲೇ ನೆಲೆಯಾಗಲು ಅವಕಾಶ ನೀಡುವ 'ಸಲೋಕ್ಯ', ದೇವರ ಹತ್ತಿರವೇ ಇರುವ ಅವಕಾಶ ನೀಡುವ 'ಸಾಮಿಪ್ಯ', ದೇವರ ಸ್ವರೂಪವನ್ನೇ ಹೊಂದುವ ಅವಕಾಶ ನೀಡುವ 'ಸ್ವರೂಪ್ಯ' ಹಾಗೂ ದೇವನೊಂದಿಗೆ ಮೋಕಾರ್ಥಿಯೂ ಐಕ್ಯಗೊಳ್ಳುವ 'ಸಾಯುಜ್ಯ'.

ಕಾಶಿಯಲ್ಲಿದೆ ಮೋಕ್ಷಾರ್ಥಿಗಳ ಅತಿಥಿ ಗೃಹಗಳು

ಕಾಶಿಯಲ್ಲಿದೆ ಮೋಕ್ಷಾರ್ಥಿಗಳ ಅತಿಥಿ ಗೃಹಗಳು

ಮೋಕ್ಷಾರ್ಥಿಗಳ ಅತಿಥಿ ಗೃಹಗಳು: ಮುಕ್ತಿಯನ್ನು ಅರಸಿ ಬರುವವರಿಗೆ ನೆಲೆ ನೀಡಲು ಬನಾರಸ್ ನಲ್ಲಿ ಅತಿಥಿ ಗೃಹಗಳಿವೆ. ಗಮನಿಸಿ ಇವು ಸಾಯಲು ಬರುವವರಿಗೆ ಬಾಗಿಲು ತೆರೆದುಕೊಂಡಿರುವ ಸಾವಿನ ಮನೆಗಳಲ್ಲ. ಅಲ್ಲಿರುವ ಪಾಲಕರು, ಅಲ್ಲಿಗೆ ಬರುವ ಮೋಕಾರ್ಥಿಗಳು ಸಾವು ಎಂಬ ಪದ ಬಳಸುವುದಿಲ್ಲ, 'ಮುಕ್ತಿ' ಎನ್ನುತ್ತಾರೆ. ಈ ಮುಕ್ತಿ ಮಾರ್ಗ ತೋರುವ ಗೆಸ್ಟ್ ಹೌಸ್ ಗಳು ಈಗೀಗ ಜನಪ್ರಿಯತೆ ಕಳೆದುಕೊಳ್ಳುತ್ತಿವೆ. ಆದರೆ, ಈ ಪೈಕಿ ಗಂಗಾ ಲಾಭ್ ಭವನ್ ಹಾಗೂ ಕಾಶಿ ಲಾಭ್ ಭವನ್ ಇಂದಿಗೂ ಮೋಕ್ಷಾರ್ಥಿಗಳಿಗೆ ಮುಕ್ತವಾಗಿವೆ.

ಪುರಾತನ 'ಮುಕ್ತಿ ಗೃಹ' ಗಂಗಾ ಲಾಭ್ ಭವನ

ಪುರಾತನ 'ಮುಕ್ತಿ ಗೃಹ' ಗಂಗಾ ಲಾಭ್ ಭವನ

ಮಣಿಕರ್ಣಿಕಾ ಘಾಟ್ ಗೆ ಹೊಂದಿಕೊಂಡಂತೆ ಇರುವ ಗಂಗಾ ಲಾಭ್ ಭವನ ಈ ಹಿಂದೆ ಮಣಿಕರ್ಣಿಕಾ ಪೊಲೀಸ್ ಠಾಣೆಯಾಗಿತ್ತಂತೆ. ಮೂರಸ್ತಂತಿನ ಕಟ್ಟಡ ನಿರ್ಮಾಣದ ಹಿಂದೆಯೂ ಕಥೆಯಿದೆ. ಶ್ರೀಮಂತ ಕುಟುಂಬದ ಅಜ್ಜಿಯೊಬ್ಬರು ಕಾಶಿ ಲಾಭ(ಅಂದರೆ, ಕಾಶಿಯಲ್ಲಿ ಮುಕ್ತಿ) ಪಡೆಯಲು ಬಂದಾಗ ಸರಿಯಾದ ನೆಲೆ ಸಿಗದೆ ಒದ್ದಾಡಿದ್ದರಂತೆ.

ಈ ರೀತಿ ಕಷ್ಟ ಆರ್ಥಿಕವಾಗಿ ಹಿಂದುಳಿದವರಿಗೆ ಬರಬಾರದು ಎಂಬ ಉದ್ದೇಶದಿಂದ ಈಗಿನ ಕಟ್ಟಡವನ್ನು ಭೋಗ್ಯಕ್ಕೆ ಪಡೆದು ಮುಕ್ತಿ ಹೊಂದುವವರಿಗೆ ನೆಲೆ ಒದಗಿಸಿದರಂತೆ. ಅಂದಿನಿಂದ ಇಂದಿನವರೆಗೂ ಗಂಗಾ ಲಾಭ್ ಭವನವೊಂದರಲ್ಲೇ ಸುಮಾರು 12 ಸಾವಿರ ಮಂದಿ ಸಾವನ್ನಪ್ಪಿದ್ದರೆ (ಅವರ ಪ್ರಕಾರ ಮುಕ್ತಿ ಹೊಂದಿದ್ದಾರೆ).

ದಾಲ್ಮಿಯಾ ಸಮೂಹದ ಮುಕ್ತಿ ಭವನ

ದಾಲ್ಮಿಯಾ ಸಮೂಹದ ಮುಕ್ತಿ ಭವನ

ಮತ್ತೊಂದು ಪ್ರಮುಖ ಭವನ, ಕಾಶಿ ಲಾಭ ಮುಕ್ತಿ ಭವನ, ದಾಲ್ಮಿಯ ಸಮೂಹ, ಟೈಮ್ಸ್ ಸಮೂಹ ನಿರ್ವಹಣೆ ಹೊಂದಿರುವ ಈ ಮುಕ್ತಿಭವನ ಮೊದಲಿಗೆ ಭಜನೆ, ಕೀರ್ತನೆಗಳನ್ನು ನಡೆಸುವ ಸತ್ಸಂಗ ಭವನವಾಗಿತ್ತು. ಆದರೆ, ಈಗ ಮೋಕ್ಷಾರ್ಥಿಗಳ ನೆಚ್ಚಿನ ಭವನವಾಗಿದೆ. ಮಣಿಕರ್ಣಿಕಾ ಘಾಟ್ ನಿಂದ ದೂರ, ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುವ ಈ ಭವನ ಕೂಡಾ ಗಂಗಾ ಲಾಭ್ ಭವನದಂತೆ ನಿಯಮಗಳನ್ನು ಪಾಲಿಸುತ್ತದೆ.

ಮುಕ್ತಿ ಹೊಂದಲು ಸೂಕ್ತ ವಾತವಾರಣ ಬೇಕು

ಮುಕ್ತಿ ಹೊಂದಲು ಸೂಕ್ತ ವಾತವಾರಣ ಬೇಕು

ಕಾಶಿ ಲಾಭ್ ಮುಕ್ತಿ ಭವನ ಮಣಿಕರ್ಣಿಕಾದಿಂದ ದೂರವಿದ್ದರೂ ಮೋಕ್ಷಾರ್ಥಿಗಳ ಮೆಚ್ಚುಗೆ ಗಳಿಸಿದೆ. ಮೊದಲಿಂದಲೂ ಸತ್ಸಂಗ ಭವನವಾಗಿ ಬೆಳೆದು ಬಂದಿರುವ ಕಾಶಿ ಲಾಭ್ ಮುಕ್ತಿ ಭವನದಲ್ಲಿ ನಿತ್ಯ ಪೂಜೆ, ಪುನಸ್ಕಾರ, ಭಜನೆ ನಡೆಯುತ್ತಲೆ ಇರುತ್ತದೆ. ಇದರಿಂದ ಮುಕ್ತಿ ಹೊಂದಲು ಬಂದಿರುವ ವ್ಯಕ್ತಿಗೆ ಸೂಕ್ತ ಆಧಾತ್ಮಿಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಜನ ನಂಬಿದ್ದಾರೆ. ಸಾಯುವ ಮುನ್ನ ಭಗವನ್ನಾಮ್ ಸ್ಮರಣೆ, ರಾಮಚರಿತಾ ಮಾನಸ ಕಿವಿಗೆ ಬೀಳುತ್ತಿದ್ದರೆ, ಮೋಕ್ಷಾರ್ಥಿಗಳಿಗೆ ಮೋಕ್ಷ ಖಚಿತ ಎನ್ನಲಾಗಿದೆ.

ಮುಕ್ತಿ ಹೊಂದಲು ಸೂಕ್ತ ವಾತಾವರಣ ಬೇಕು

ಮುಕ್ತಿ ಹೊಂದಲು ಸೂಕ್ತ ವಾತಾವರಣ ಬೇಕು

ಕಾಶಿ ಲಾಭ್ ಮುಕ್ತಿ ಭವನ ಮಣಿಕರ್ಣಿಕಾದಿಂದ ದೂರವಿದ್ದರೂ ಮೋಕ್ಷಾರ್ಥಿಗಳ ಮೆಚ್ಚುಗೆ ಗಳಿಸಿದೆ. ಮೊದಲಿಂದಲೂ ಸತ್ಸಂಗ ಭವನವಾಗಿ ಬೆಳೆದು ಬಂದಿರುವ ಕಾಶಿ ಲಾಭ್ ಮುಕ್ತಿ ಭವನದಲ್ಲಿ ನಿತ್ಯ ಪೂಜೆ, ಪುನಸ್ಕಾರ, ಭಜನೆ ನಡೆಯುತ್ತಲೆ ಇರುತ್ತದೆ. ಇದರಿಂದ ಮುಕ್ತಿ ಹೊಂದಲು ಬಂದಿರುವ ವ್ಯಕ್ತಿಗೆ ಸೂಕ್ತ ಆಧಾತ್ಮಿಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಜನ ನಂಬಿದ್ದಾರೆ. ಸಾಯುವ ಮುನ್ನ ಭಗವನ್ನಾಮ್ ಸ್ಮರಣೆ, ರಾಮಚರಿತಾ ಮಾನಸ ಕಿವಿಗೆ ಬೀಳುತ್ತಿದ್ದರೆ, ಮೋಕ್ಷಾರ್ಥಿಗಳಿಗೆ ಮೋಕ್ಷ ಖಚಿತ ಎನ್ನಲಾಗಿದೆ.

ಈ ಮುಕ್ತಿ ಭವನಗಳಲ್ಲಿ ನೆಲೆಸಲು ನಿಯಮಗಳಿವೆ

ಈ ಮುಕ್ತಿ ಭವನಗಳಲ್ಲಿ ನೆಲೆಸಲು ನಿಯಮಗಳಿವೆ

* ಮರಣಶಯ್ಯೆಯಲ್ಲಿರುವ ಮೋಕ್ಷಾರ್ಥಿ ಹಾಗೂ ಆತನ ಕುಟುಂಬ ಗರಿಷ್ಠ 15 ದಿನಗಳ ಇಲ್ಲಿ ನೆಲೆಸಬಹುದು.

* ಅಸ್ಪೃಶ್ಯರು ಹಾಗೂ ಸಾಂಕ್ರಮಿಕ ರೋಗಗ್ರಸ್ತರಿಗೆ ನೆಲೆಸಲು ಅವಕಾಶವಿಲ್ಲ.

* ಅತಿಥಿ ಗೃಹದ ಇತರೆ ಸದಸ್ಯರು, ನಿರ್ವಹಕರೊಡನೆ ಅಸಭ್ಯವಾಗಿ ವರ್ತಿಸುವುದು, ಅನುಚಿತವಾಗಿ ನಡೆದುಕೊಳ್ಳುವಂತಿಲ್ಲ.

* ಸಂಬಂಧಿಕರು ಸೌದೆ ಒಲೆಯಲ್ಲಿ ಅಡಿಗೆ ಮಾಡಿಕೊಳ್ಳತಕ್ಕದ್ದು.

* ಮೋಕಾರ್ಥಿಯೂ ಮುಕ್ತಿ ಹೊಂದಿದ 24 ಗಂಟೆಗಳಲ್ಲಿ ಅವರ ಕುಟುಂಬಸ್ಥರು ಅತಿಥಿ ಗೃಹ ತೊರೆಯಬೇಕು.

ಕರ್ಮ ಕಳೆಯುವ ತನಕ ಮುಕ್ತಿ ಇಲ್ಲ

ಕರ್ಮ ಕಳೆಯುವ ತನಕ ಮುಕ್ತಿ ಇಲ್ಲ

ಸಾವಿನಲ್ಲೂ ಇಲ್ಲಿ ಸಮಾನತೆ ಇಲ್ಲ. ಕಾಶಿಯಲ್ಲಿ ಹಲವೆಡೆ ವರ್ಣಾಶ್ರಮಕ್ಕೆ ತಕ್ಕ ಪ್ರತ್ಯೇಕ ಘಾಟ್ ಗಳಿವೆ. ಕೆಲವು ಹಿಂದೂಗಳಿಗೆ ಸಾವಿನಲ್ಲೂ ಹೆಚ್ಚಿನ ಮರ್ಯಾದೆ ನೀಡಲಾಗುತ್ತದೆ ಎಂಬ ಕೂಗಿದೆ. ಆದರೆ. ಮೊದಲೇ ಹೇಳಿದಂತೆ ಮುಕ್ತಿ ಹೊಂದಲು ಸಾಯುವ ವ್ಯಕ್ತಿಯ ಮನಸ್ಥಿತಿ ಮುಖ್ಯವಾಗುತ್ತದೆ. ಜಾತಿ, ಧರ್ಮ, ಮತ, ಪಂಥ ಎಲ್ಲವನ್ನೂ ಮೀರಿದ್ದು ಸಾವು. ಅತಿಥಿ ಗೃಹಗಳು ಮೋಕ್ಷಾರ್ಥಿಯ ಕೊನೆ ನಿಲ್ದಾಣವಾಗಿ, ಹುಟ್ಟು ಸಾವಿನ ಚಕ್ರದಿಂದ ತಪ್ಪಿಸಿಕೊಳ್ಳಲು ಕಾಶಿಯಲ್ಲಿ ಮುಕ್ತಿ ಹೊಂದುವುದೇ ಮಾರ್ಗ ಎಂಬ ನಂಬಿಕೆ ಅಚಲವಾಗಿ ಇಂದಿಗೂ ಉಳಿದುಕೊಂಡು ಬಂದಿದೆ.

ಕಾಶಿಯಲ್ಲಿ ಸಾಯುವವರಿಗೆಲ್ಲ ಮುಕ್ತಿ?

ಕಾಶಿಯಲ್ಲಿ ಸಾಯುವವರಿಗೆಲ್ಲ ಮುಕ್ತಿ?

ಕಾಶಿಯಲ್ಲಿ ಸಾಯುವವರಿಗೆಲ್ಲ ಮುಕ್ತಿ ಸಿಗುವುದಿಲ್ಲ, ಮುಕ್ತಿ ಸಿಗಲು ಕಾಶಿಯಲ್ಲೇ ಸಾಯಬೇಕಾಗಿಲ್ಲ. ಕರ್ಮ ಕಳೆಯುವ ತನಕ ಮುಕ್ತಿ ಇಲ್ಲ ಎಂಬ ಮಾತಿದ್ದರೂ, ಹುಟ್ಟು ಸಾವಿನ ಮರ್ಮ ಅರಿತರೇ ಮೋಕ್ಷ ತಾನಾಗೇ ಲಭಿಸುತ್ತದೆ.

ಹೆಚ್ಚಿನ ಓದಿಗೆ ಭಗವದ್ಗೀತೆ, ರಾಮಚರಿತಾ ಮಾನಸ ಅಲ್ಲದೆ ಈ ಕೃತಿಗಳನ್ನು ಓದಬಹುದು:

* Death Hospices : Sarah Richardson,

* Death and Life - giving waters: cremation, caste and

cosmogony in karmic traditions -Oestigaard, Terje

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"Kasyam maranam mukti" means dying in holi land of kashi leads to liberation. A belief as old as kashi city itself. Dying in Varanasi is supposed to break the cycle of death and rebirth. Once one dies in Varanasi, he or she is never reborn, and thus attains salvation. Kashi Labh Mukti Bhawan is one such hospice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more