Vande Metro: ದೇಶದ ಮೊದಲ 'ವಂದೇ ಭಾರತ್ ಮೆಟ್ರೋ ರೈಲು' ಕಾರ್ಯಾಚರಣೆ ಅಪ್ಡೇಟ್
ನವದೆಹಲಿ, ಮೇ 07: ಭಾರತವು ರೈಲು ಸಾರಿಗೆಯಲ್ಲಿ ಮಹತ್ವದ ಯೋಜನೆಗಳನ್ನು ತರುತ್ತಲೇ ಇದೆ. ಹೊಸ ರೈಲುಗಳು ಪರಿಚಯಿಸುತ್ತಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ದೇಶದ ಮೊದಲ 'ವಂದೇ ಭಾರತ್ ಮೆಟ್ರೋ ರೈಲುಗಳು' (Vande Bharat Metro Rail) ಈ ವರ್ಷಾಂತ್ಯಕ್ಕೆ ಆರಂಭಗೊಳ್ಳವ ಸಾಧ್ಯತೆ ಇದೆ.
ವಂದೇ ಭಾರತ್ ಮೆಟ್ರೋ ರೈಲು ಯೋಜನೆಯಡಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಕೊಟ್ಟ ಮಾಹಿತಿ ಪ್ರಕಾರ, ಭಾರತೀಯ ರೈಲ್ವೇಸ್‌ನ ಕಪುರ್ತಲಾ ರೈಲು ಕೋಚ್ ಫ್ಯಾಕ್ಟರಿಯಿಂದ ಈ ರೈಲುಗಳು ಡಿಸೆಂಬರ್ ನಲ್ಲಿ ಹೊರಡುವ ಸಾಧ್ಯತೆ ಇದೆ. ರೈಲಿನ ಮೂಲಮಾದರಿಯು ಪ್ರಯೋಗ ನಡೆಸಲು ಇಲಾಖೆ ಸಜ್ಜಾಗಿದೆ ಎಂದು ಹೇಳಿದರು.

12ರಿಂದ 6 ಕೋಚ್‌ಗಳಿಗೆ ವಿಸ್ತರಣೆ
ಈ ವಂದೇ ಭಾರತ್ ಮೆಟ್ರೋ ರೈಲುಗಳು ಅಂತರ-ನಗರ ಮತ್ತು ಉಪನಗರ ಮಾರ್ಗಗಳಲ್ಲಿ ಸೇವೆ ನೀಡಲಿವೆ. ಇವುಗಳು ವೇಗದ ರೈಲುಗಳಾಗಿದ್ದು, 12-ಕೋಚ್ ಗಳ ಈ ರೈಲುಗಳನ್ನು ಅಗತ್ಯ ಬಿದ್ದಲ್ಲಿ 16 ಕೋಚ್‌ಗಳಿಗೆ ವಿಸ್ತರಣೆ ಮಾಡಲಾಗುವುದು ಎಂದರು.
ಹೊಸ ರೈಲುಗಳ ಮೂಲ ಮಾದರಿಗೆ ಸರ್ಕಾರ ಅನುಮೋದನೆ ನೀಡಿದೆ. ಹಲವು ಪರೀಕ್ಷೆಗಳು ನಡೆಯುತ್ತಿದ್ದು, ದೇಶದ ವಿವಿಧ ಕಡೆಗಳಲ್ಲಿ ಒಟ್ಟು 50 ರೈಲುಗಳನ್ನು ಪರಿಚಯಿಸುವ ಗುರಿ ಕೇಂದ್ರ ಸರ್ಕಾರ ಹೊಂದಿದೆ.
ಮೇಡ್-ಇನ್-ಇಂಡಿಯಾದ ಈ ವಂದೇ ಭಾರತ್ ಮೆಟ್ರೋ ರೈಲುಗಳ ಪರಿಚಯದಿಂದ 'ಯುರೋಪ್, ಚೀನಾ, ದಕ್ಷಿಣ ಕೊರಿಯಾ ಮತ್ತು ಕೆನಡಾ ದೇಶಗಳ ಪ್ರಾಬಲ್ಯ ಹೊಂದಿರುವ ಮೆಟ್ರೋ ರೈಲು ರೋಲಿಂಗ್ ಸ್ಟಾಕ್ ತಯಾರಕರ ಆಯ್ದ ಜಾಗತಿಕ ಕ್ಲಬ್‌ಗೆ ಭಾರತ ಸೇರಲಿದೆ.

ದೇಶದ ವಿವಿಧ ಮಹಾನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರೋ ಕೋಚ್‌ಗಳು ಜಾಗತಿಕ ರೈಲು ತಯಾರಕರಿಂದ ಅಂದರೆ ವಿದೇಶಗಳಿಂದ ಬಂದಂತವುಗಳಾಗಿವೆ. ತಾಂತ್ರಿಕ ಒಪ್ಪಂದ, ವರ್ಗಾವಣೆ ಆಧಾರದಲ್ಲಿ ರೈಲು, ಕೋಚ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ.
ಸ್ವದೇಶಿ ನಿರ್ಮಾಣದಿಂದ ಖರ್ಚು ಇಳಿಕೆ
ಭಾರತೀಯ ರೈಲ್ವೇಯು ಬೃಹತ್ ಸಂಖ್ಯೆಯಲ್ಲಿ ಅಂದರೆ 400 ಕ್ಕೂ ಹೆಚ್ಚು ರೈಲುಗಳ ಆರ್ಡರ್ ಮಾಡಿದೆ. ಮುಂದಿನ ಕೆಲವು ವರ್ಷಗಳಲ್ಲಿ ರೈಲ್ವೆ ಉತ್ಪಾದನಾ ವಲಯದಲ್ಲಿ ₹50,000 ಕೋಟಿ ಮೌಲ್ಯದ ಹೂಡಿಕೆಯ ಅಗತ್ಯತೆ ಬೀಳಲಿದೆ. 12 ಬೋಗಿ ಇರುವ ವಂದೇ ಭಾರತ್ ಮೆಟ್ರೋ ರೈಲಿಗೆ ಸದ್ಯ ₹100-120 ಕೋಟಿ ವೆಚ್ಚ ತಗುಲಲಿದೆ. ಸ್ವದೇಶೀಯವಾಗಿ ಉತ್ಪಾದಿಸಿದರೆ ಈ ಹಣದಲ್ಲಿ ನಾಲ್ಕನೇ ಒಂದು ಭಾಗ ಮಾತ್ರ ತಗುಲುತ್ತದೆ ಎಂದು ರೈಲ್ವೆ ಇಲಾಖೆ ಅಂದಾಜಿಸಿದೆ.
ಗಂಟೆಗೆ 100-250 ಕಿಮೀ ವೇಗದ ಸಾಮರ್ಥ್ಯ
ಈ ಮೆಟ್ರೋ ರೈಲುಗಳನ್ನು ಪ್ರತಿ ಗಂಟೆಗೆ 100-250 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವಂತೆ ದೇಶೀಯ ಬಳಕೆಗಾಗಿ ಉತ್ಪಾದಿಸಲಾಗುತ್ತಿದೆ. ದೇಶದ 125 ನಗರಗಳಿಗೆ ಸಂಪರ್ಕ ಕಲ್ಪಿಸಲು ಯೋಚನೆ ಇದೆ. ಉತ್ಪಾದಿತ ಮೊದಲ ಸೆಟ್ (51 ರೈಲುಗಳು) ರೈಲುಗಳನ್ನು ಲಕ್ನೋ, ಕಾನ್ಪುರ, ವಾರಣಾಸಿ, ತಿರುಪತಿ, ಚೆನ್ನೈ ಆಗ್ರಾ, ಮಥುರಾ, ವಾರಣಾಸಿ, ಚೆನ್ನೈ ಮತ್ತು ತಿರುಪತಿ ಸೇರಿದಂತೆ 12 ಪ್ರಮುಖ ನಗರಗಳ ಮಧ್ಯೆ ಸೇವೆ ನೀಡಲಿವೆ.
ದೇಶಿಯ ಪೂರೈಕೆ ಬಳಿಕ ಈ ರೈಲುಗಳನ್ನು ರಫ್ತು ಮಾಡಲು ಸಹ ಭಾರತೀಯ ರೈಲ್ವೆಯು ಪ್ಲಾನ್ ಮಾಡಿಕೊಂಡಿದೆ. ಈ ರೈಲುಗಳು ಹಾಲಿ ಟಾಪ್ ರೈಲಿನಲ್ಲಿರುವ ಎಲ್ಲಾ ಆಧುನಿಕ ಮೂಲ ಸೌಲಭ್ಯಗಳನ್ನು ಹೊಂದಿರಲಿವೆ. ಪ್ರತಿ ಗಂಟೆಗೆ ಗರಿಷ್ಠ 120-160 ಕಿ.ಮೀ ವೇಗದಲ್ಲಿ ಸಂಚರಿಲಿದೆ. ವಂದೇ ಭಾರತ್‌ನ ಮೊದಲ ಆವೃತ್ತಿಯು 2019ರ ಫೆಬ್ರವರಿಯಲ್ಲಿ ಹೊರ ತರಲಾಯಿತು.












Click it and Unblock the Notifications