ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಪಘಾತ- ಗುಜರಾತ್‌ ನಿಲ್ದಾಣದ ಬಳಿ ಹಸುವಿಗೆ ರೈಲು ಡಿಕ್ಕಿ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಪಘಾತ ಸಂಭವಿಸಿದ್ದು ಗುಜರಾತ್‌ನ ವಲ್ಸಾದ್‌ನ ಅತುಲ್ ನಿಲ್ದಾಣದ ಬಳಿ ಹಸುವಿಗೆ ರೈಲು ಡಿಕ್ಕಿಯಾಗಿದೆ. ಇದರಿಂದಾಗಿ ರೈಲಿನ ಮುಂಭಾಗ ಹಾನಿಗೊಳಗಾಗಿದೆ. ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶನಿವಾರ ಅಪಘಾತಕ್ಕೀಡಾದ ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ. ಅಪಘಾತದಿಂದ ಯಾವುದೇ ಕಾರ್ಯಾಚರಣೆಗೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಹಾರಾಷ್ಟ್ರದ ಮುಂಬೈನಿಂದ ಗುಜರಾತ್‌ನ ಗಾಂಧಿನಗರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 30 ರಂದು ಉದ್ಘಾಟನೆಗೊಂಡ ನಂತರ ಇದು ಮೂರನೇ ಬಾರಿಗೆ ಜಾನುವಾರು ಅಪಘಾತಕ್ಕೆ ಒಳಗಾಗಿದೆ.

ಚೆನ್ನೈನ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳು ತಯಾರಾಗುತ್ತಿವೆ. ವಂದೇ ಭಾರತ್ ರೈಲು ಗರಿಷ್ಠ 160 ಕಿ. ಮೀ. ವೇಗದಲ್ಲಿ ಸಂಚರಿಸುತ್ತವೆ. ಶತಾಬ್ದಿಯಷ್ಟೇ ವೇಗವಾಗಿ ಸಂಚರಿಸುತ್ತವಾದರೂ ಪ್ರಯಾಣದ ಅನುಭವ ಚೆನ್ನಾಗಿರುತ್ತದೆ. ಇತರ ರೈಲುಗಳಿಗೆ ಹೋಲಿಸಿದರೆ ಪ್ರಯಾಣದ ಅವಧಿ ಶೇ. 45ರಷ್ಟು ಕಡಿತ ಆಗುತ್ತದೆ.

ಎಲ್ಲಾ ಕೋಚ್‌ಗಳಲ್ಲೂ ಆಟೋ ಮ್ಯಾಟಿಕ್ ಡೋರ್‌ಗಳು ಇರುತ್ತವೆ. ಜಿಪಿಎಸ್ ಆಧಾರಿತ ಆಡಿಯೋ ವಿಶ್ಯುಯಲ್ಸ್ ಪ್ರಯಾಣಿಕ ಮಾಹಿತಿ ವ್ಯವಸ್ಥೆ ಇದ್ದು ಉಚಿತ ವೈಫೈ ವ್ಯವಸ್ಥೆ ಇರುತ್ತದೆ. ಸೀಟ್‌ಗಳು ಆರಾಮದಾಯವಾಗಿ ಇರುವುದು ಮಾತ್ರವಲ್ಲದೆ ಟಾಯ್ಲೆಟ್‌ಗಳು ಬಯೋ ವ್ಯಾಕ್ಯೂಮ್ ತಂತ್ರಜ್ಞಾನ ಆಧಾರಿತವಾಗಿರುತ್ತವೆ. ಪ್ರತಿ ಸೀಟ್‌ಗೂ ಪ್ರತ್ಯೇಕ ಲೈಟ್ ವ್ಯವಸ್ಥೆ ಇರುತ್ತದೆ. ಪ್ರತಿ ಕೋಚ್‌ನಲ್ಲೂ ಪ್ಯಾಂಟ್ರಿ ಇರುತ್ತದೆ. ಪ್ರಯಾಣಿಕರಿಗೆ ಬಿಸಿ ಬಿಸಿ ಆಹಾರ ವಿತರಣೆ ಮಾಡಲಾಗುತ್ತದೆ. ಬಿಸಿ ಹಾಗೂ ತಂಪು ಪಾನೀಯಗಳು ಲಭ್ಯವಾಗುತ್ತವೆ. ರೈಲು ಸಾಗುವಾಗ ಪ್ರಯಾಣಿಕರಿಗೆ ಹೆಚ್ಚಿನ ಶಬ್ದ ಕೇಳಿ ಬರೋದಿಲ್ಲ.

Vande Bharat Express train accident: Train collides with cow near Atul station in Gujarat

ಪ್ರತಿಯೊಂದು ವಂದೇ ಭಾರತ್ ರೈಲಿನಲ್ಲಿ 1,128 ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ.ಎಲ್ಲಕ್ಕಿಂತಾ ಹೆಚ್ಚಾಗಿ ವಂದೇ ಭಾರತ್ ರೈಲಿನಲ್ಲಿ ಅಪಘಾತ ತಡೆ ವ್ಯವಸ್ಥೆಗೆ ತುಂಬಾನೇ ಸುಧಾರಿತ ತಂತ್ರಜ್ಞಾನ ಬಳಸಲಾಗಿದೆ. ಪ್ರತಿ ಕೋಚ್‌ನಲ್ಲೂ ತುರ್ತು ನಿರ್ಗಮನ ಕಿಟಕಿ ಇರುತ್ತದೆ. ಪ್ರತಿ ಕೋಚ್‌ನಲ್ಲೂ ಸಿಸಿಟಿವಿ ಕ್ಯಾಮರಾ ಇರುತ್ತದೆ. ಅಗ್ನಿ ಅನಾಹುತ ತಡೆಯುವ ವ್ಯವಸ್ಥೆ ಕೂಡಾ ಸುಧಾರಿತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+