ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Vande Bharat Express: 8- 9 ಗಂಟೆಗಳಲ್ಲಿ 700 ಕಿಮೀ ಸಂಚಾರ, ದಕ್ಷಿಣ ಭಾರತದಲ್ಲಿ 2ನೇ ಸೆಮಿ-ಹೈ ಸ್ಪೀಡ್ ರೈಲು, ಮಾರ್ಗ ನೋಡಿ

|
Google Oneindia Kannada News

ನವದೆಹಲಿ, ಡಿಸೆಂಬರ್‌ 13: ದಕ್ಷಿಣ ಭಾರತದಲ್ಲಿ 2 ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ದೊರೆಯಲಿದೆ. ಶೀಘ್ರದಲ್ಲೇ, ಪ್ರಯಾಣಿಕರು ಸಿಕಂದರಾಬಾದ್‌ನಿಂದ ವಿಶಾಖಪಟ್ಟಣಂ ಅನ್ನು ಕೇವಲ 8 ರಿಂದ 9 ಗಂಟೆಗಳಲ್ಲಿ ತಲುಪಲು ಸಾಧ್ಯವಾಗುತ್ತದೆ. ಮುಂದಿನ ವಾರದ ನಂತರ ಅಂದರೆ ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ 8 ನೇ ಮತ್ತು ದಕ್ಷಿಣ ಭಾರತದ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ.

ಸೆಮಿ-ಹೈ-ಸ್ಪೀಡ್ ರೈಲು ಗಂಟೆಗೆ 160 ಕಿಮೀ ವೇಗವನ್ನು 140 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ತಲುಪುತ್ತದೆ. 8 ರಿಂದ 9 ಗಂಟೆಗಳಲ್ಲಿ ಸುಮಾರು 700 ಕಿಮೀ ಕ್ರಮಿಸುತ್ತದೆ. ಗುರುವಾರ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಿದ ನಂತರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಂತಿಮವಾಗಿ ವಿಜಯವಾಡ ಮೂಲಕ ವಿಶಾಖಪಟ್ಟಣಂ ಮತ್ತು ಸಿಕಂದರಾಬಾದ್ ನಡುವೆ ಓಡಲಿದೆ.

ಪ್ರಸ್ತುತ, ಎರಡು ನಗರಗಳ ನಡುವಿನ ವೇಗದ ರೈಲು ಡುರೊಂಟೊ ಎಕ್ಸ್‌ಪ್ರೆಸ್ ಆಗಿದ್ದು, ಇದು ಪ್ರಯಾಣಿಸಲು 10 ಗಂಟೆಗಳಿಗಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಜನಪ್ರಿಯ ಗೋದಾವರಿ ಎಕ್ಸ್‌ಪ್ರೆಸ್ ಸೇರಿದಂತೆ ಅಸ್ತಿತ್ವದಲ್ಲಿರುವ ರೈಲುಗಳಿಗೆ ಹೋಲಿಸಿದರೆ ವಂದೇ ಭಾರತ್ ಸುಮಾರು 3 ಗಂಟೆಗಳ ಪ್ರಯಾಣದ ಸಮಯವನ್ನು ಉಳಿಸುತ್ತದೆ.

Vande Bharat Express South India to get its 2nd semi-high speed train next week; check route

ಸಿಕಂದರಾಬಾದ್ ರೈಲು ನಿಲ್ದಾಣದಿಂದ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಅಥವಾ ವಂದೇ ಭಾರತ್ 2.0 ಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಸೆಕೆಂಡ್‌ ಜನರೇಷನ್‌ ರೈಲು ಫಸ್ಟ್‌ ಜನರೇಷನ್‌ ವಂದೇ ಭಾರತ್ ರೈಲಿಗಿಂತ ವೇಗವಾಗಿರುತ್ತದೆ. ಏಕೆಂದರೆ ಅದು ತನ್ನ ಗರಿಷ್ಠ ವೇಗವನ್ನು ತಲುಪಲು 5 ಸೆಕೆಂಡುಗಳು ಕಡಿಮೆ ತೆಗೆದುಕೊಳ್ಳುತ್ತದೆ.

ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್ ಮಾರ್ಗ

ಈ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್, ದಕ್ಷಿಣ ಭಾರತದ ಎರಡನೇ ಅಂತಹ ರೈಲಾಗಿದೆ. ವಾರಂಗಲ್, ಖಮ್ಮಂ, ವಿಜಯವಾಡ ಮತ್ತು ರಾಜಮಂಡ್ರಿ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲನ್ನು ಚೆನ್ನೈ-ಮೈಸೂರು ಮಾರ್ಗದಲ್ಲಿ ಪ್ರಾರಂಭಿಸಲಾಯಿತು. ಸೆಮಿ ಹೈಸ್ಪೀಡ್ ರೈಲಿನ ಖಾಲಿ ಡಬ್ಬಿಗಳು ಬುಧವಾರ ವಿಶಾಖಪಟ್ಟಣಂ ತಲುಪಿದೆ.

Vande Bharat Express South India to get its 2nd semi-high speed train next week; check route

ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಖ್ಯೆ, ಸಮಯ

ಸಿಕಂದರಾಬಾದ್ ವಿಜಯವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಖ್ಯೆಗಳು ಮತ್ತು ಸಮಯವನ್ನು ಭಾರತೀಯ ರೈಲ್ವೇ ಇನ್ನೂ ಪ್ರಕಟಿಸಿಲ್ಲ. ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಟಿಕೆಟ್ ದರವನ್ನು ಇನ್ನೂ ಘೋಷಿಸಲಾಗಿಲ್ಲ.

ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು

ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಆಗಸ್ಟ್ 2023 ರೊಳಗೆ ಕನಿಷ್ಠ 75 ವಂದೇ ಭಾರತ್ ರೈಲುಗಳನ್ನು ಓಡಿಸುವ ಗುರಿಯನ್ನು ಭಾರತೀಯ ರೈಲ್ವೇ ಹೊಂದಿದೆ. ಇದನ್ನು ಆಜಾದಿ ಕಾ ಅಮೃತ್ ಮಹೋತ್ಸವ ಸಲುವಾಗಿ ಕೈಗೊಳ್ಳಲಾಗಿದೆ. ಇದುವರೆಗೆ ಕೇವಲ 7 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಲಾಗಿದೆ. ಮತ್ತು ಎಂಟನೆಯದಕ್ಕೆ ಮುಂದಿನ ವಾರ ಚಾಲನೆ ದೊರೆಯಲಿದೆ.

Vande Bharat Express South India to get its 2nd semi-high speed train next week; check route

ಆಜಾದಿ ಕಾ ಅಮೃತ್ ಮಹೋತ್ಸವವು ಆಗಸ್ಟ್ 15 ರಂದು ಕೊನೆಗೊಳ್ಳಲಿದೆ. ಕೇವಲ 7 ತಿಂಗಳುಗಳು ಮಾತ್ರ ಉಳಿದಿವೆ. ಇದರರ್ಥ ರೈಲ್ವೆ ತನ್ನ ಗುರಿಯನ್ನು ಸಾಧಿಸಲು ಮುಂಬರುವ ತಿಂಗಳುಗಳಲ್ಲಿ ಇನ್ನೂ 67 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಬೇಕಿದೆ. ನಿಖರವಾಗಿ, ಆಗಸ್ಟ್ 15 ರೊಳಗೆ 75 ವಂದೇ ಭಾರತ್ ರೈಲುಗಳನ್ನು ಹೊಂದುವ ಈ ಗುರಿಯನ್ನು ಪೂರೈಸಬೇಕಾದರೆ, ರಾಷ್ಟ್ರೀಯ ಸಾರಿಗೆಯು ಸುಮಾರು 204 ದಿನಗಳಲ್ಲಿ ಅಂತಹ 67 ರೈಲುಗಳನ್ನು ಓಡಿಸಬೇಕಾಗುತ್ತದೆ. ಅಂದರೆ ಪ್ರತಿ 72 ಗಂಟೆಗಳಲ್ಲಿ ಒಂದು ರೈಲಿಗೆ ಚಾಲನೆ ನೀಡಬೇಕಿದೆ.

English summary
The 2nd Vande Bharat Express train will be launched in South India. Soon, passengers will be able to reach Visakhapatnam from Secunderabad in just 8 to 9 hours,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X