ಉತ್ತರಪ್ರದೇಶ ಸರ್ವೇ: ಎಸ್ಪಿ-ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಕಷ್ಟಕಷ್ಟ

Posted By:
Subscribe to Oneindia Kannada

ಇದೇ ಫೆಬ್ರವರಿ ಹನ್ನೊಂದರಿಂದ ಆರಂಭವಾಗಲಿರುವ ಏಳು ಹಂತದ ಬಹು ನಿರೀಕ್ಷಿತ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಮುನ್ನ ಇಂಡಿಯಾ ಟುಡೇ ನಡೆಸಿದ ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ.

ಸಮೀಕ್ಷೆಯ ಪ್ರಕಾರ, ಯಾದವೀ ಕುಟುಂಬ ಕಲಹದಿಂದ 'ಮನೆಯೊಂದು ಮೂರು ಬಾಗಿಲಾ'ಗಿದ್ದ ಸಮಾಜವಾದಿ ಪಕ್ಷದ ಸ್ಥಿತಿ, ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ. (ಉತ್ತರಪ್ರದೇಶಕ್ಕೆ ಅಖಿಲೇಶ್ ಸೂಕ್ತ ಸಿಎಂ)

ಇತ್ತ ಎಸ್ಪಿ-ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿ ಮತ್ತು ಬಹುಜನ ಸಮಾಜಪಾರ್ಟಿಯ ಪರವಾಗಿದ್ದ ಜನರ ಒಲವು ಮೈತ್ರಿಕೂಟದತ್ತ ತಿರುಗುತ್ತಿರುವುದು ಸಮೀಕ್ಷೆಯ ವೇಳೆ ವ್ಯಕ್ತವಾದ ಜನಾಭಿಪ್ರಾಯ ಎಂದು ಇಂಡಿಯಾ ಟುಡೇ ಹೇಳಿದೆ.

ಇಂಡಿಯಾ ಟುಡೇ-ಆಕ್ಸಿಸ್-ಮೈ ಇಂಡಿಯಾ ಜಂಟಿಯಾಗಿ ಜನವರಿ 2017ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಸರಳ ಬಹುಮತ ಬಿಜೆಪಿಗೆ ಸಿಗುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತಿದ್ದ ಈ ಹಿಂದಿನ ಸಮೀಕ್ಷೆಗಳು, ಎಸ್ಪಿ - ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಕನಿಷ್ಠ 25 ಸೀಟು ನಷ್ಟವಾಗುವ ಸಾಧ್ಯತೆಯಿದೆ ಎಂದು ಹೇಳುತ್ತಿದೆ.

ಸಮೀಕ್ಷೆಯ ಪ್ರಕಾರ ಎಸ್ಪಿ-ಕಾಂಗ್ರೆಸ್ ಮೈತ್ರಿಯಿಂದ ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿಗೆ ನಷ್ಟವಾಗುತ್ತಿಲ್ಲ. ಆದರೆ, ಮೈತ್ರಿಯಿಂದ ಬಿಎಸ್ಪಿಗೆ ತೀವ್ರ ಏಟು ಬೀಳುವ ಸಾಧ್ಯತೆಯಿದೆ. ಸಮೀಕ್ಷೆಯ ಹೈಲೆಟ್ಸ್ ಮುಂದೆ ಓದಿ..

 ಶಿವಪಾಲ್ ಯಾದವ್ ಹೊಸ ಪಕ್ಷ

ಶಿವಪಾಲ್ ಯಾದವ್ ಹೊಸ ಪಕ್ಷ

ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಯಾದವ್ ಮಾರ್ಚ್ ಹನ್ನೊಂದರಂದು ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಅಖಿಲೇಶ್ ಅದು ಹೇಗೆ ಸರಕಾರ ರಚಿಸುತ್ತಾರೆ ನೋಡುತ್ತೇನೆಂದು ಸವಾಲೆಸೆದಿದ್ದಾರೆ. ಈ ಬೆಳವಣಿಗೆ ಸಮಾಜವಾದಿ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.

 ಕಳೆದ ನಾಲ್ಕು ತಿಂಗಳಲ್ಲಾದ ಬದಲಾವಣೆಗಳು

ಕಳೆದ ನಾಲ್ಕು ತಿಂಗಳಲ್ಲಾದ ಬದಲಾವಣೆಗಳು

ಕಳೆದ ನಾಲ್ಕು ತಿಂಗಳಿನಿಂದ ನಡೆಸಿದ ಮೂರು ಸಮೀಕ್ಷೆಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಅದು ಹೀಗಿದೆ..

ಅಕ್ಟೋಬರ್ 16
ಬಿಜೆಪಿ : 170-183
ಎಸ್ಪಿ - ಕಾಂಗ್ರೆಸ್ : 102-115
ಬಿಎಸ್ಪಿ : 115-124

ಡಿಸೆಂಬರ್ 16
ಬಿಜೆಪಿ : 206-216
ಎಸ್ಪಿ - ಕಾಂಗ್ರೆಸ್ : 97-106
ಬಿಎಸ್ಪಿ : 79-85

ಜನವರಿ 17
ಬಿಜೆಪಿ : 180-191
ಎಸ್ಪಿ - ಕಾಂಗ್ರೆಸ್ : 168-178
ಬಿಎಸ್ಪಿ : 39-43

 ಯಾರು ಹಿತವರು ನಿಮಗೆ ಸಿಎಂ ಹುದ್ದೆಗೆ?

ಯಾರು ಹಿತವರು ನಿಮಗೆ ಸಿಎಂ ಹುದ್ದೆಗೆ?

ಅಖಿಲೇಶ್ ಯಾದವ್ - ಶೇ. 35
ರಾಜನಾಥ್ ಸಿಂಗ್ - ಶೇ. 21
ಮಾಯಾವತಿ - ಶೇ. 20
ಯೋಗಿ ಆದಿತ್ಯನಾಥ್ - ಶೇ. 14
ಕೆ ಪಿ ಮಲ್ರಿಯಾ- ಶೇ. 2
ಪ್ರಿಯಾಂಕ ಗಾಂಧಿ ವಾಧ್ರಾ - ಶೇ. 1

 ಶೇಕಡವಾರು ಬದಲಾವಣೆ

ಶೇಕಡವಾರು ಬದಲಾವಣೆ

ಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿಯ ನಂತರ, ಕಾಂಗ್ರೆಸ್ ಹೆಚ್ಚುವರಿ ಶೇ. 7 ಮತಗಳಿಸುವ ಸಾಧ್ಯತೆಯಿದೆ. ಜನವರಿಯಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಎಸ್ಪಿಗೆ ಶೇ. 26 ಮತಸಿಗುವ ಸಾಧ್ಯತೆಯಿದೆ. ಬಿಜೆಪಿಯ ಮತಗಳಿಕೆಯ ಪ್ರಮಾಣ ಶೇ. 33 ರಿಂದ ಶೇ. 34.8ರಷ್ಟು ಏರುವ ಸಾಧ್ಯತೆಯಿದೆ.

 ಮಾಯಾವತಿ ಪಕ್ಷಕ್ಕೆ ತೀವ್ರ ಹಿನ್ನಡೆ ಸಾಧ್ಯತೆ

ಮಾಯಾವತಿ ಪಕ್ಷಕ್ಕೆ ತೀವ್ರ ಹಿನ್ನಡೆ ಸಾಧ್ಯತೆ

ಅಖಿಲೇಶ್ - ರಾಹುಲ್ ಗಾಂಧಿ ಮೈತ್ರಿಯ ನಂತರ ಉತ್ತರಪ್ರದೇಶದ ಬಹುತೇಕ ಕಡೆ ಎಸ್ಪಿ- ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಾಗುವ ಸಾಧ್ಯತೆಯಿದ್ದು. ಮಾಯಾವತಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uttar Pradesh Assembly election: Samajwadi Party-Congress alliance closing gap with BJP, says India Today-Axis Opinion Poll conduted during January 2017.
Please Wait while comments are loading...