Breaking; ಉತ್ತರಾಖಂಡ ಯಾತ್ರಾರ್ಥಿಗಳಿಗೆ ಹೊಸ ನಿಯಮ
ಡೆಹ್ರಾಡೂನ್, ಮೇ 01; ಉತ್ತರಾಖಂಡ ಸರ್ಕಾರ ವಿವಿಧ ಯಾತ್ರೆಗೆ ಆಗಮಿಸುವ ಭಕ್ತರಿಗೆ ಹೊಸ ನಿಯಮ ಜಾರಿಗೊಳಿಸಿದೆ. ವಿವಿಧ ದೇವಾಲಯಗಳಿಗೆ ಪ್ರತಿದಿನ ಭೇಟಿ ನೀಡುವ ಭಕ್ತರ ಸಂಖ್ಯೆಗೆ ಮಿತಿ ಹೇರಲಾಗಿದೆ.
ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಮುಂದಿನ 45 ದಿನಗಳ ಕಾಲ ಈ ಆದೇಶ ಜಾರಿಯಲ್ಲಿರುತ್ತದೆ. ಚಾರ್‌ಧಾಮ್, ಬದ್ರಿನಾಥ್, ಕೇದಾರನಾಥ್, ಗಂಗೋತ್ರಿ ಸೇರಿದಂತೆ ವಿವಿಧ ಯಾತ್ರಾ ಸ್ಥಳಗಳು ರಾಜ್ಯದಲ್ಲಿವೆ.
ಚಾರ್‌ಧಾಮ್ ಯಾತ್ರೆಗೆ ಪ್ರತಿದಿನ 15 ಸಾವಿರ, ಬದ್ರಿನಾಥ್ 12 ಸಾವಿರ, ಕೇದಾರನಾಥ್ 7 ಸಾವಿರ, ಗಂಗೋತ್ರಿ 4 ಸಾವಿರ ಮತ್ತು ಯಮುನೋತ್ರಿಗೆ ಸಹ 4 ಸಾವಿರ ಭಕ್ತರು ಭೇಟಿ ನೀಡಬಹುದಾಗಿದೆ.

ಬೇಸಿಗೆಯಿಂದ ಮಳೆಗಾಲ ಆರಂಭವಾಗುವ ತನಕ ಲಕ್ಷಾಂತರ ಭಕ್ತರು ಉತ್ತರಾಖಂಡ ಪ್ರವಾಸ ಕೈಗೊಳ್ಳುತ್ತಾರೆ. ರಾಜ್ಯದ ವಿವಿಧ ಯಾತ್ರಾಸ್ಥಳಗಳಿಗೆ ಭೇಟಿ ನೀಡುತ್ತಾರೆ.
ಚಾರ್‌ಧಾಮ್ ಯಾತ್ರೆಗೆ ಬಹಳ ಮಹತ್ವವಿದೆ. ದ್ವಾದಶ ಜ್ಯೋತಿರ್ಲಿಂಗ ಮತ್ತು ಶಕ್ತಿ ಪೀಠಗಳ ದರ್ಶನಕ್ಕಾಗಿ ಯಾತ್ರೆ ಕೈಗೊಳ್ಳುವುದು ಸಂಪ್ರದಾಯವಾಗಿದೆ. ಈ ಯಾತ್ರೆ ಬದುಕಿನ ಜೀವಮಾನದ ಭಾಗ ಎಂದು ಹಿಂದೂಗಳು ಪರಿಗಣಿಸುತ್ತಾರೆ.
ಈ ಯಾತ್ರೆ ಕೇವಲ ಪ್ರವಾಸವಲ್ಲ. ಭಾರತವನ್ನು ಜೋಡಿಸುವ ಜೀವಂತ ಸಂಪ್ರದಾಯ. ಹಲವು ಜನರು ಜೀವಮಾನದಲ್ಲೊಮ್ಮೆ ಚಾರ್‌ಧಾಮ್, ದ್ವಾದಶ ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಿ ಪವಿತ್ರ ಗಂಗಾ ಸ್ನಾನ ಮಾಡಲು ಇಚ್ಛಿಸುತ್ತಾರೆ.












Click it and Unblock the Notifications