ಉತ್ತರಾಖಂಡ ಕಾಡ್ಗಿಚ್ಚಿಗೆ ಮೂಲ ಕಾರಣ ಯಾರು?

Subscribe to Oneindia Kannada

ಡೆಹರಾಡೂನ್, ಮೇ, 02: ಬೇಸಿಗೆ ಧಗೆ ಏರುತ್ತಿದೆ. ಎಲ್ಲೆಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಅರಣ್ಯಗಳು ಬೆಂಕಿಗೆ ಆಹುತಿಯಾಗುತ್ತಿವೆ. ಕಾಡ್ಗಿಚ್ಚು ಆವರಿಸಿ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ನಾಶವಾಗುತ್ತಿದೆ.

ಆದರೆ ಈ ಎಲ್ಲ ಅವಘಡಗಳಿಗೆ ಕಾರಣ ಯಾರು? ಉತ್ತರ ಸರಳ, ನಮ್ಮ ದುರಾಸೆ. ಉತ್ತರಾಖಂಡದ ಅರಣ್ಯ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕಾಣಿಸಿಕೊಂಡಿರುವ ಕಾಡ್ಗಿಚ್ಚು ನಿಯಂತ್ರಣ ಮಾಡಲು ಭಾರತೀಯ ಸೇನೆ ಶ್ರಮಿಸುತ್ತಿದೆ.[ಸೈನ್ಯದ ಸಾಹಸ: ನಿಯಂತ್ರಣಕ್ಕೆ ಬಂದ ಉತ್ತರಾಖಂಡ ಕಾಡ್ಗಿಚ್ಚು]

ಕಾಡ್ಗಿಚ್ಚು ಕಾಣಿಸಿಕೊಳ್ಳಲು ಬೇಸಿಗೆ ಧಗೆ ಒಂದೇ ಕಾರಣವಲ್ಲ. ಇದರ ಮೂಲ ಇರುವುದು ಟಿಂಬರ್ ಮಾಫಿಯಾದಲ್ಲಿ. ಸಾಮಾಜಿಕ ಜಾಲತಾಣಗಳಲ್ಲೂ ಟಿಂಬರ್ ಮಾಫಿಯಾದ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

 ವಾರದಲ್ಲಿ 398 ಪ್ರಕರಣ

ವಾರದಲ್ಲಿ 398 ಪ್ರಕರಣ

ಕಳೆದ 7 ದಿನಗಳಲ್ಲಿ 398 ಕಡೆ ಬೆಂಕಿ ಕಾಣಿಸಿಕೊಂಡಿದೆ.ಅರಣ್ಯವನ್ನು ನಾಶ ಮಾಡುತ್ತಿರುವ ಬೆಂಕಿ ನಂದಿಸಲು ಸೇನೆ ಹರಸಾಹಸ ಮಾಡುತ್ತಿದೆ.

ಕಾಡು ಪ್ರಾಣಿಗಳ ಸಂತತಿ ನಾಶ

ಕಾಡು ಪ್ರಾಣಿಗಳ ಸಂತತಿ ನಾಶ

ಕಾಡು ಪ್ರಾಣಿಗಳ ಬದುಕಿಗೆ ಕೊಳ್ಳಿ ಇಟ್ಟಿರುವ ಬೆಂಕಿ ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡುತ್ತಲೇ ಸಾಗಿದೆ.

ಟಿಂಬರ್ ಮಾಫಿಯಾ

ಟಿಂಬರ್ ಮಾಫಿಯಾ

ಕಾಡಿನಲ್ಲಿ ಕಾಣಿಸಿಕೊಂಡ ಬೆಂಕಿ ಒಂದೆಡೆ ಮರ ಕಳ್ಳ ಸಾಗಣೆದಾರರಿಗೆ ವರವಾಗಿದೆ. ಒಂದೆಡೆ ಬೆಂಕಿ ವ್ಯಾಪಿಸುತ್ತಿದ್ದರೆ ಇನ್ನೊಂದೆಡೆ ಸಿಕ್ಕ ಸಿಕ್ಕ ಮರಗಳಿಗೆ ಕೊಡಲಿ ಏಟು ಬೀಳುತ್ತಿದ್ದು ಪುಡಿಗಾಸಿಗೆ ಮಾರಿಕೊಳ್ಳಲಾಗುತ್ತಿದೆ.

 ಮುನ್ನೆಚ್ಚರಿಕೆ ಕ್ರಮ ಇಲ್ಲ

ಮುನ್ನೆಚ್ಚರಿಕೆ ಕ್ರಮ ಇಲ್ಲ

ಸ್ಥಳೀಯ ಬಡ ಜನತೆಯನ್ನು ಬಳಸಿಕೊಳ್ಳುವ ಟಿಂಬರ್ ಮಾಫಿಯಾ ಮರ ಕಳ್ಳ ಸಾಗಣೆಯನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿದೆ. ಕಡಿದು ಉಳಿದ ಮರದ ದಿಮ್ಮಿಗಳು ಬೆಂಕಿ ಹೊತ್ತಿಕೊಳ್ಳಲು ಮೂಲ ಕಾರಣವಾದವು.

 ಅಂಕಿ ಅಂಶ

ಅಂಕಿ ಅಂಶ

398 ಬೆಂಕಿ ಪ್ರಕರಣದಲ್ಲಿ 674 ಹೆಕ್ಟೇರ್ ಅರಣ್ಯ ಸಂಪತ್ತು ನಾಶವಾಗಿದೆ. ಜನವಸತಿ ಪ್ರದೇಶಗಳಿಗೂ ಸಹ ಬೆಂಕಿ ವ್ಯಾಪಿಸಿದೆ.

ಪ್ರವಾಸೋದ್ಯಮಕ್ಕೂ ಹೊಡೆತ

ಪ್ರವಾಸೋದ್ಯಮಕ್ಕೂ ಹೊಡೆತ

ಉತ್ತರಾಖಂಡದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಕಾಡ್ಗಿಚ್ಚು ಆಘಾತ ನೀಡಿದ್ದು ಪ್ರವಾಸಿಗರು ಅನಿವಾರ್ಯವಾಗಿ ಹೆಜ್ಜೆ ಹಿಂದಕ್ಕೆ ಹಾಕುವಂತೆ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The forest fire in Uttarakhand was not natural. It was very much man-made. Amid climate changes and worrying environmental statistics, this situation adds on to the burden of nature conservers and naturalists. It all began when experts started digging into the 'natural' causes that may have caused the week-long fire building inside the forest. It is to be noticed here that a total of 398 cases have been reported in the past 7 days alone.
Please Wait while comments are loading...