ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ ಸರ್ಕಾರಕ್ಕೆ ಆಘಾತ: ಕೆಟ್ಟ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ಯುಪಿ ನಂ.1

|
Google Oneindia Kannada News

ಲಕ್ನೋ, ನವೆಂಬರ್ 4: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಆಘಾತ ನೀಡುವಂತಹ ವರದಿಯೊಂದು ಹೊರ ಬಿದ್ದಿದೆ. ದೇಶದಲ್ಲಿ ಅತ್ಯಂತ ಕೆಟ್ಟ ಆಡಳಿತವನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಇದೇ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಇತ್ತೀಚಿನ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದ ಪ್ರಕಾರ, ಬೆಂಗಳೂರು ಮೂಲದ ಥಿಂಕ್-ಟ್ಯಾಂಕ್ ಸಾರ್ವಜನಿಕ ವ್ಯವಹಾರಗಳ ಕೇಂದ್ರವು ಸಿದ್ಧಪಡಿಸಿದ ರಾಜ್ಯಗಳ ಆಡಳಿತದ ಅಳತೆಗೋಲಿನ ಪ್ರಕಾರ, ಕಳಪೆ ಗುಣಮಟ್ಟದ ಆಡಳಿತದಿಂದಾಗಿ ಉತ್ತರ ಪ್ರದೇಶವು ಪಟ್ಟಿಯಲ್ಲಿ ಕೊನೆಯ(18ನೇ) ಸ್ಥಾನವನ್ನು ಪಡೆದುಕೊಂಡಿದೆ.

ಉತ್ತರ ಪ್ರದೇಶದಲ್ಲಿ ಹೊತ್ತಿಕೊಂಡ ಮೈತ್ರಿ ಕಿಡಿಯ ಹಿಂದೆ ವಿಮಾನ ಪ್ರಯಾಣದ ಕಥೆ!ಉತ್ತರ ಪ್ರದೇಶದಲ್ಲಿ ಹೊತ್ತಿಕೊಂಡ ಮೈತ್ರಿ ಕಿಡಿಯ ಹಿಂದೆ ವಿಮಾನ ಪ್ರಯಾಣದ ಕಥೆ!

ಈ ಸೂಚ್ಯಂಕವು ಮೂರು ವಿಶಾಲ ಅಂಶಗಳನ್ನು ಹೊಂದಿದ್ದು, ರಾಜ್ಯದ ಅಭಿವೃದ್ಧಿ, ನ್ಯಾಯ ಮತ್ತು ಸುಸ್ಥಿರತೆಯನ್ನು ಆಧರಿಸಿದ 43 ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಲಾಗಿದೆ. ಐದು ವರ್ಷಗಳ ಹಿಂದೆ PAC ಸೂಚ್ಯಂಕವನ್ನು ಪ್ರಕಟಿಸಲು ಪ್ರಾರಂಭಿಸಿದ್ದು, ಕೇರಳವು ಮತ್ತೊಮ್ಮೆ ಅತ್ಯುತ್ತಮ ಆಡಳಿತವನ್ನು ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

Uttar Pradesh Yogis Govt is Worst, Kerala is Best: Here Look out Bengaluru Think Tank Report

ಉತ್ತರ ಪ್ರದೇಶದಲ್ಲಿ ಕೆಟ್ಟ ಆಡಳಿತದ ಅವಧಿ:

ಈ ಮೊದಲು ಉತ್ತರ ಪ್ರದೇಶವು ಯಾವಾಗಲೂ ಆಡಳಿತ ಕೋಷ್ಟಕದ ಕೆಳಭಾಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಕಳೆದ 2016ರಲ್ಲಿ, PAC ಶ್ರೇಯಾಂಕಗಳ ಮೊದಲ ಆವೃತ್ತಿಯನ್ನು ಪ್ರಾರಂಭಿಸಿದಾಗ ಉತ್ತರ ಪ್ರದೇಶವು 12ನೇ ಸ್ಥಾನದಲ್ಲಿತ್ತು. ಆ ಸಮಯದಲ್ಲಿ PAC ತಮ್ಮ ವಿಶ್ಲೇಷಣೆಯಲ್ಲಿ ತೆಲಂಗಾಣವನ್ನು ಸೇರಿಸಿರಲಿಲ್ಲ. ಆಗ ಉತ್ತರ ಪ್ರದೇಶ ಸರ್ಕಾರದ ಅಂಕಗಳು ಮಧ್ಯಪ್ರದೇಶ, ಅಸ್ಸಾಂ, ಒಡಿಶಾ, ಜಾರ್ಖಂಡ್ ಮತ್ತು ಬಿಹಾರಕ್ಕಿಂತ ಉತ್ತಮವಾಗಿತ್ತು.

2017ರಲ್ಲಿ ಉತ್ತರ ಪ್ರದೇಶವು ಪಟ್ಟಿಯಲ್ಲಿ 14ನೇ ಸ್ಥಾನಕ್ಕೆ ಕುಸಿಯಿತು. 2018 ರಲ್ಲಿ ಅದೇ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿತ್ತು. ಆದರೆ 2019ರಲ್ಲಿ ಉತ್ತರ ಪ್ರದೇಶ 17ನೇ ಸ್ಥಾನದಲ್ಲಿದ್ದಾಗ ಒಡಿಶಾಕ್ಕಿಂತ ಸ್ವಲ್ಪ ಮುಂದಿರುವಾಗ ಅದು ಮತ್ತೆ ಕುಸಿಯಿತು. 2020ರಿಂದ ಉತ್ತರ ಪ್ರದೇಶವು ಕೊನೆಯ ಸ್ಥಾನದಲ್ಲೇ ಗುರುತಿಸಿಕೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಡಿ ಉತ್ತರ ಪ್ರದೇಶವು ಅಭಿವೃದ್ಧಿಗೊಂಡಿದೆ ಎಂದು ಬಿಜೆಪಿಯು ಬಿಂಬಿಸಲು ಹೊರಟಿರುವ ಸಂದರ್ಭದಲ್ಲಿಯೇ ಈ ವರದಿ ಹೊರ ಬಂದಿದೆ.

ಉತ್ತರ ಪ್ರದೇಶ ಸರ್ಕಾರ ಏಕೆ ಕೆಟ್ಟದಾಗಿದೆ?

ಮೊದಲ ವರದಿ ಬಂದ ನಂತರ PACಯು ರಾಜ್ಯಗಳಿಗೆ ಶ್ರೇಯಾಂಕ ನೀಡುವ ವಿಧಾನವನ್ನು ಬದಲಿಸಿಕೊಂಡಿತು. 2016ರಲ್ಲಿ ವರದಿಯು 10 ವಿಷಯಗಳ ಆಧಾರದಲ್ಲಿ ಗುರುತಿಸಲಾದ 68 ಸೂಚಕಗಳ ಮೇಲೆ ನಿರ್ಧಾರವಾಗಿದ್ದು, ತದನಂತರದಲ್ಲಿ ಅದನ್ನು ಮೂರು ಆಧಾರ ಸ್ತಂಭಗಳಾದ ವಿಶಾಲ ಅಂಶಗಳ 43 ಸೂಚಕಗಳ ಮೇಲೆ ನಿರ್ಧರಿಸಲು ತೀರ್ಮಾನಿಸಲಾಯಿತು.

ಈ ಹಿಂದೆ 2016 ರಲ್ಲಿ, ಉತ್ತರ ಪ್ರದೇಶವು ಹಣಕಾಸಿನ ನಿರ್ವಹಣೆಯಲ್ಲಿ ನಂಬರ್ 1 ಸ್ಥಾನವನ್ನು ಪಡೆದಿತ್ತು. ಅದು ಒಂದು ರಾಜ್ಯವು ಅಭಿವೃದ್ಧಿಗೆ (ತಲಾವಾರು) ಹೇಗೆ ಖರ್ಚು ಮಾಡಿದೆ. ಹಣಕಾಸಿನ ಕೊರತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತಹ ಹಣಕಾಸಿನ ಕಾರ್ಯಕ್ಷಮತೆಯನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಆಧರಿಸಿತ್ತು. ಅಗತ್ಯ ಮೂಲಸೌಕರ್ಯ, ಸಾಮಾಜಿಕ ರಕ್ಷಣೆ, ನ್ಯಾಯದ ವಿತರಣೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿರುವ ರಾಜ್ಯವು ಟಾಪ್ 10ರಲ್ಲಿ ಸ್ಥಾನ ಪಡೆದಿತ್ತು.

PAC ಮಾನದಂಡದಲ್ಲಿ ಬದಲಾವಣೆ:

2019 ರಿಂದ ಸೂಚ್ಯಂಕವು ಅಭಿವೃದ್ಧಿ, ನ್ಯಾಯ ಮತ್ತು ಸುಸ್ಥಿರತೆ ಎಂಬ ಮೂರು ವಿಶಾಲ ಅಂಶಗಳನ್ನು ಕೇಂದ್ರೀಕರಿಸುವುದಕ್ಕೆ ಪ್ರಾರಂಭಿಸಿತು. ನ್ಯಾಯ ಮತ್ತು ಸುಸ್ಥಿರತೆಯ ನಿಯತ ಅಂಕಗಳಲ್ಲಿ ದೊಡ್ಡ ರಾಜ್ಯ ಎನಿಸಿರುವ ಉತ್ತರ ಪ್ರದೇಶವು ಈ ವರ್ಷ ಕೊನೆಯ ಸ್ಥಾನದಲ್ಲಿದೆ.

ಪ್ರತಿ ರಾಜ್ಯಗಳಿಗೆ ನ್ಯಾಯ ಅಂಕಗಳು ಐದು ವಿಷಯಗಳ ಮೇಲೆ ಆಧಾರಿತವಾಗಿವೆ. ಧ್ವನಿ ಮತ್ತು ಹೊಣೆಗಾರಿಕೆಯ ಸಾಮಾಜಿಕ ರಕ್ಷಣೆ, ಅಪೌಷ್ಟಿಕತೆ, ಅಧಿಕಾರದಲ್ಲಿ ಮಹಿಳಾ ಪ್ರಾತಿನಿಧ್ಯ, ನೈಜ ವೇತನಗಳು ಮತ್ತು ಕೊಳೆಗೇರಿ ಜನಸಂಖ್ಯೆಯನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ಶಿಶು ಮರಣ ಪ್ರಮಾಣ, ಗ್ರಾಮೀಣ ಋಣಭಾರ, ಅಭಾವದ ಬಗ್ಗೆ ಸರ್ಕಾರದ ಪರಿಣಾಮಕಾರಿತ್ವ, ನರಹತ್ಯೆ, ಜೈಲುಗಳಲ್ಲಿ ಶಿಕ್ಷೆಯಿಲ್ಲದ ಬಂಧಿತರು, ಎಸ್‌ಸಿ, ಎಸ್‌ಟಿ, ಮಕ್ಕಳು ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳ ಮೇಲೆ ಕಾನೂನಿನ ನಿಯಮ, ನಿಯಂತ್ರಕ ಗುಣಮಟ್ಟ ಮತ್ತು ಭ್ರಷ್ಟಾಚಾರದ ಮೇಲಿನ ನಿಯಂತ್ರಣವನ್ನು ಪರಿಗಣಿಸಲಾಗುತ್ತದೆ.

ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ:

"ದೊಡ್ಡ ರಾಜ್ಯಗಳ ವಿಭಾಗದಲ್ಲಿ ಉತ್ತರ ಪ್ರದೇಶವು ವರ್ಷಗಳಿಂದ ಕೆಳಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯವಾಗಿ ಗುರುತಿಸಿಕೊಂಡಿದೆ. ರಾಜ್ಯವು ಎಸ್‌ಡಿಜಿಗಳು (ಸುಸ್ಥಿರ ಅಭಿವೃದ್ಧಿ ಗುರಿಗಳು) 5 (ಲಿಂಗ ಸಮಾನತೆ), 3 (ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ) ಮತ್ತು 10 (ಕಡಿಮೆಯಾದ ಅಸಮಾನತೆಗಳು) ಅಡಿಯಲ್ಲಿ ಶ್ರೇಯಾಂಕಗಳ ಕೆಳಭಾಗದಲ್ಲಿ ಸ್ಥಾನ ಪಡೆದಿದೆ, "ಎಂದು ವರದಿ ಹೇಳಿದೆ. ಉತ್ತರ ಪ್ರದೇಶದ ಶ್ರೇಯಾಂಕವನ್ನು ಕೊನೆಯಲ್ಲಿ ಗುರುತಿಸಿರುವದರ ಬಗ್ಗೆ ನಿರ್ದಿಷ್ಟ ಅಂಕಿಅಂಶಗಳನ್ನು ವಿವರವಾಗಿ ಬರೆಯಲಾಗಿದೆ.

ಅಪರಾಧ ಕೃತ್ಯ, ವರದಕ್ಷಿಣೆ ಕಿರುಕುಳ:
"ಈ ಎಸ್‌ಡಿಜಿಗಳ ಹೊರತಾಗಿ, 2019ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 2410 ವರದಕ್ಷಿಣೆ ಕಿರುಕುಳ ಪ್ರಕರಣಗಳು ವರದಿಯಾದರೆ, ಈ ಪೈಕಿ 244 ಪ್ರಕರಣಗಳು ಉತ್ತರ ಪ್ರದೇಶ ರಾಜ್ಯವೊಂದರಲ್ಲೇ ವರದಿಯಾಗಿರುತ್ತವೆ. ಆದ್ದರಿಂದ ವರದಕ್ಷಿಣ ಕಿರುಕುಳಕ್ಕೆ ಸಂಬಂಧಿಸಿದಂತೆ ರಾಜ್ಯವು ಕೊನೆಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ರಾಜ್ಯದಲ್ಲಿ ಪರಿಶಿಷ್ಟ ವರ್ಗದವರ ವಿರುದ್ಧದ ಅಪರಾಧಗಳ ದರವು ಶೇ. 63.6% ರಷ್ಟು ದಾಖಲಾಗಿದೆ. ಶಿಶು ಮರಣವು ಶೇ.64ರಷ್ಟು ಹೆಚ್ಚಾಗಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ರಾಜ್ಯದ ಹೆಚ್ಚಿನ ಕುಂಠಿತ (46.3%), ಕ್ಷೀಣಿಸುವಿಕೆ (17.9%) ಮತ್ತು ಕಡಿಮೆ ತೂಕ (39.5%) ಇದಕ್ಕೆ ಕಾರಣವಾಗಿದೆ.

ನಿಯತಾಂಕಗಳ ಸ್ಕೋರ್ ಎಷ್ಟಿದೆ?:
ಘನ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಮಾಲಿನ್ಯ ಮತ್ತು ಭ್ರಷ್ಟಾಚಾರದ ಮೇಲಿನ ನಿಯಂತ್ರಣದ ಆಧಾರದ ಮೇಲೆ ನಿಯತಾಂಕಗಳನ್ನು ಸ್ಕೋರ್ ಮಾಡಲಾಗಿದೆ. "ಸುಸ್ಥಿರತೆಯ ಆಧಾರದಲ್ಲಿ ಉತ್ತರ ಪ್ರದೇಶವು ಕೊನೆಯ ಸ್ಥಾನದಲ್ಲಿದೆ. SDG 11 (ಸುಸ್ಥಿರ ನಗರಗಳು ಮತ್ತು ಸಮುದಾಯಗಳು)ನಲ್ಲಿ ಕೊನೆಯದಾಗಿ ಎರಡನೇ ಸ್ಥಾನದಲ್ಲಿದ್ದು, ಕಾರ್ಯಕ್ಷಮತೆ ಗಮನಾರ್ಹವಾಗಿ ಇಳಿಕೆಯಾಗಲು ಕಾರಣವಾಗಿದೆ," ಎಂದು ವರದಿ ಹೇಳುತ್ತದೆ.
ಎಸ್‌ಡಿಜಿ 11 ಮಾತ್ರ ರಾಜ್ಯದ ಕಾರ್ಯಕ್ಷಮತೆಯನ್ನು ಗಮನಾರ್ಹವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿ ಹೇಳಿದೆ. "ವಾರ್ಷಿಕ PM10 ಮಟ್ಟಗಳು 198, ವಾಯುಮಾಲಿನ್ಯವನ್ನು ಎದುರಿಸುವಲ್ಲಿ ಉತ್ತರ ಪ್ರದೇಶದ ಪ್ರಯತ್ನ ಹೆಚ್ಚು ಕಳವಳಕಾರಿ" ಎಂದು ಅದು ಹೇಳಿದೆ. ಉತ್ತರ ಪ್ರದೇಶವು ಬೆಳವಣಿಗೆಯ ನಿಯತಾಂಕದಲ್ಲಿ ನೆರೆಯ ಬಿಹಾರಕ್ಕಿಂತ ಒಂದು ಸ್ಥಾನ ಉತ್ತಮವಾಗಿದೆ. ಇದರ ಬೆಳವಣಿಗೆಯು ಹೆಚ್ಚಾಗಿ ಆರೋಗ್ಯ, ನೈರ್ಮಲ್ಯ, ಹಣಕಾಸಿನ ಕಾರ್ಯಕ್ಷಮತೆ ಮತ್ತು ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ಸರ್ಕಾರದ ವೆಚ್ಚವನ್ನು ಅವಲಂಬಿಸಿರುತ್ತದೆ.

English summary
Uttar Pradesh Yogi's Govt is Worst, Kerala is Best: Here Look out Bengaluru Think Tank Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X