Uttar Pradesh: ಕೊಲೆಯಾಗುವ ಮುನ್ನ ಸೌರಭ್ ಪತ್ನಿ ಮಗಳೊಂದಿಗೆ ನೃತ್ಯ ಮಾಡಿದ ವಿಡಿಯೋ ವೈರಲ್
ಲಕ್ನೋ ಮಾರ್ಚ್ 21: ಯುಪಿಯ ಮೀರತ್‌ನಲ್ಲಿ ನಡೆದ ಸೌರಭ್ ರಜಪೂತ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸೌರಭ್ ಯಾರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದನೋ ಆ ಪ್ರೀತಿಗಾಗಿ ಪೋಷಕರನ್ನು ತೊರೆದಿದ್ದನು. ಆದರೆ ಆತನ ಪ್ರೇಯಸಿ ಮುಸ್ಕಾನ್ ಅವನ ಜೀವನದ ಶತ್ರುವಾಗಿ ಆತನನ್ನು ಕೊಂದು ಹಾಕಿದ್ದಾಳೆ. ಮುಸ್ಕಾನ್ ಇನ್ನೊಬ್ಬ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದು 15 ತುಂಡು ಮಾಡಿ ಪತಿಯನ್ನು ಕೊಂದು ಹಾಕಿ ವಿಕೃತಿ ಮೆರೆದಿದ್ದಾಳೆ. ಇದೀಗ ಸೌರಭ್ ರಜಪೂತ್ ಕೊಲೆಗೂ ಮುನ್ನ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು.... ಕೊಲೆಯಾದ ಸೌರಭ್ ರಜಪೂತ್ ನೇವಿ ಉದ್ಯೋಗಿಯಾಗಿದ್ದರು. ಮುಸ್ಕಾನ್ ರಸ್ತೋಗಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರಿಗೆ ಐದು ವರ್ಷ ಮಗಳಿದ್ದಾಳೆ. ಫೆಬ್ರವರಿ 28, 2025 ರಂದು, ಸೌರಭ್ ತನ್ನ ಮಗಳ ಹುಟ್ಟುಹಬ್ಬವನ್ನು ಆಚರಿಸಲು ಮೀರತ್‌ಗೆ ಬಂದರು. ಅದೇ ದಿನದ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಮುಸ್ಕಾನ್ ಮತ್ತು ಮಗಳು ಪಿಹು ಜೊತೆ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಆದರೆ ಈ ಸಂತೋಷದ ಕ್ಷಣಗಳು ಅವರ ಜೀವನದ ಕೊನೆಯ ಕ್ಷಣಗಳಾಗುತ್ತವೆ ಎಂದು ಅವರು ತಿಳಿದಿರಲಿಲ್ಲ.

ಪ್ರೀತಿ, ಮದುವೆ ನಂತರ ಕೊಲೆ
ಸೌರಭ್ ಮತ್ತು ಮುಸ್ಕಾನ್ ಮೊದಲ ಬಾರಿಗೆ 2015 ರಲ್ಲಿ ಭೇಟಿಯಾದರು. ಇಬ್ಬರು ಪರಸ್ಪರ ಪ್ರೀತಿಸಿ 2016 ರಲ್ಲಿ ವಿವಾಹವಾದರು. ಅವರಿಗೆ ಮುದ್ದಾದ ಮಗಳು ಇದ್ದಾಳೆ. ಅವಳು ಪ್ರಸ್ತುತ ಎರಡನೇ ತರಗತಿಯಲ್ಲಿ ಓದುತ್ತಿದ್ದಾಳೆ. ಸೌರಭ್ ಮರ್ಚೆಂಟ್ ನೇವಿಯ ಉದ್ಯೋಗಿ. ಸಮುದ್ರದಲ್ಲಿ ದೀರ್ಘಕಾಲ ಇರಬೇಕಾದ ಕಾರಣ ಮೀರತ್‌ಗೆ ಆಗಾಗ ಬಂದು ಹೋಗುತ್ತಿದ್ದರು. ಮುಸ್ಕಾನ್ ಮೀರತ್‌ನಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಮಗಳೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದರು. 2019 ರಲ್ಲಿ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಾಹಿಲ್, ಮುಸ್ಕಾನ್ ಅವರ ಜೀವನದಲ್ಲಿ ಪ್ರವೇಶಿಸಿದ. ಇವರಿಬ್ಬರ ನಡುವೆ ಇದ್ದ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿತು. ಸೌರಭ್ ಅನುಪಸ್ಥಿತಿಯಲ್ಲಿ ಸಾಹಿಲ್ ಮನೆಯ ಒಂದು ಭಾಗವಾದನು.
#Meerut: A video of Saurabh Kumar murder case has surfaced. In the video, accused #MuskanRastogi is seen dancing with her husband Saurabh. According to the information, this video is of their daughter's birthday.#UttarPradesh pic.twitter.com/KQ6vxjieZx
— Siraj Noorani (@sirajnoorani) March 20, 2025
ಇವರಿಬ್ಬರ ನಡುವಿನ ಪ್ರೀತಿ ಅದೆಷ್ಟು ಆಳವಾಗಿತ್ತು ಅಂದರೆ ಸೌರಭ್ ರಜಪೂತ್ ನನ್ನು ಕೊಲ್ಲುವಷ್ಟು. ಇದಕ್ಕಾಗಿ ಇವರಿಬ್ಬರು ಕೊಲೆ ಸಂಚು ರೂಪಿಸಿದರು. ತಮ್ಮ ಪ್ರೀತಿಗೆ ಸೌರಭ್ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ಸೌರಭ್ ಕೊಲೆಗೆ ಸಂಚು ರೂಪಿಸಿ ಕುಳಿತಿದ್ದರು.
ಭಯಾನಕ ಕೊಲೆ ಸಂಚು
ಸಾಹಿಲ್ ಸೌರಭ್ ನನ್ನು ಕೊಲ್ಲಲು ಮೊದಲೇ ಪ್ಲಾನ್ ಮಾಡಿದ್ದ. ಮಾರ್ಚ್ 3/4 ರ ರಾತ್ರಿ ಸಾಹಿಲ್ ಸೌರಭ್ ಸೇವಿಸುವ ಆಹಾರದಲ್ಲಿ ನಿದ್ರೆ ಮಾತ್ರೆಯನ್ನು ಹಾಕಿದ್ದನು. ರಾತ್ರಿ 1 ಗಂಟೆಗೆ ಪ್ರೇಮಿ ಸಾಹಿಲ್ ಮನೆಗೆ ಬಂದನು. ಬಳಿಕ ಇಬ್ಬರೂ ಸೇರಿ ಸೌರಭ್‌ನ ಎದೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ತಲೆ ಮತ್ತು ಎರಡೂ ಕೈಗಳನ್ನು ಕತ್ತರಿಸಿ ಚೀಲದಲ್ಲಿ ಹಾಕಿದ್ದಾರೆ. ಸೌರಭ್ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕಿ ಅದನ್ನು ಸಿಮೆಂಟ್‌ನಿಂದ ಮುಚ್ಚಿಟ್ಟಿದ್ದಾರೆ. ಕೊಲೆಯ ನಂತರ ಅವಳು ಸೌರಭ್‌ನ ಫೋನ್ ಬಳಸಿ ಎಲ್ಲರನ್ನೂ ದಾರಿ ತಪ್ಪಿಸಿದ್ದಾಳೆ. ಗಂಡನ ಕೊಲೆ ಮಾಡಿದ ಬಳಿಕ ಮುಸ್ಕಾನ್ ಹಿಮಾಚಲಕ್ಕೆ ಸಾಹಿಲ್‌ನೊಂದಿಗೆ ಪ್ರವಾಸ ಹೋಗಿದ್ದಾಳೆ.
ಸೌರಭ್ ಮಗಳಿಂದ ರಹಸ್ಯ ಬಯಲು
ಸೌರಭ್ ಮಗಳು ಪಿಹುಗೆ ಇನ್ನೂ ಐದು ವರ್ಷ ಮಾತ್ರ. ಆದರೆ ಈ ಪುಟ್ಟ ಮಗು ತನ್ನ ತಂದೆಯ ಕೊಲೆಯನ್ನು ಕಣ್ಣಾರೆ ನೋಡಿತ್ತು. ತನ್ನ ತಂದೆ ಎಲ್ಲಿ ಎಂದು ಸೌರಭ್ ತಾಯಿ ಕೇಳಿದಾಗ ಈ ಪುಟ್ಟ ಮಗು ಡ್ರಮ್‌ನತ್ತ ಕೈ ತೋರಿಸಿತ್ತು. ಅಲ್ಲದೆ ತನ್ನ ತಂದೆಯೊಂದಿಗೆ ಮಾತನಾಡಲು ಮುಸ್ಕಾನ್ ಬಳಿ ಹಠ ಮಾಡಿತ್ತು ಈ ಪುಟ್ಟ ಕಂದಮ್ಮ. ಆದರೆ ಮುಸ್ಕಾನ್ ಸುಳ್ಳು ಹೇಳುವ ಮೂಲಕ ಮಗಳ ಬಾಯಿ ಮುಚ್ಚಿಸುತ್ತಿದ್ದಳು. ಪಿಹುವಿನ ಅಳು, ಸನ್ನೆಗಳೆಲ್ಲವೂ ಸೌರಭ್ ಕುಟುಂಬಕ್ಕೆ ಅನುಮಾನ ಮೂಡಿಸಿದ್ದವು.
ಪೊಲೀಸರಿಗೆ ದೂರು
ಅನುಮಾನ ಬಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಮುಸ್ಕಾನ್ ಮತ್ತು ಸಾಹಿಲ್ ನನ್ನು ಬಂಧಿಸಿದ್ದಾರೆ. ವಿಚಾರಣೆ ಕಠಿಣವಾದಾಗ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಮೃತ ದೇಹವನ್ನು ಡ್ರಮ್‌ನಲ್ಲಿ ಅಡಗಿಸಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಡ್ರಮ್‌ನಲ್ಲಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರವ ಮಾಡಲಾಗಿದೆ. ಶವ ಕೊಳೆತು ಹೋಗಿದ್ದರಿಂದ ಕೊನೆ ಮುಖವನ್ನೂ ಕುಟುಂಬಸ್ಥರು ನೋಡಲು ಆಗಿಲ್ಲ. ಇದರಿಂದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಭಯಾನಕ ಅಂತ್ಯ
ಮುಸ್ಕಾನ್ ತನ್ನ ಮಗಳ ಹುಟ್ಟುಹಬ್ಬದಂದು ಸಂತೋಷದಿಂದ ನೃತ್ಯ ಮಾಡಿದ ಗಂಡನನ್ನು ತುಂಡುಗಳಾಗಿ ಕತ್ತರಿಸಿ ಕೊಂದಿದ್ದಾಳೆ. ಈ ಘಟನೆ ದಾಂಪತ್ಯ ದ್ರೋಹ, ದುರಾಸೆ ಮತ್ತು ಪಿತೂರಿಗಳು ಸಂತೋಷದ ಕುಟುಂಬವನ್ನು ಹೇಗೆ ನಾಶಮಾಡಿದವು ಎಂಬುದನ್ನು ತೋರಿಸುತ್ತದೆ. ಈಗ ಮುಸ್ಕಾನ್ ಮತ್ತು ಸಾಹಿಲ್ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications