ಮಹಿಳ ದೂರುದಾರರನ್ನು ಬಟ್ಟೆ ಬಿಚ್ಚಲು ಹೇಳಿದ ಯುಪಿ ಪೋಲೀಸ್, ಅಮಾನತು
ಉತ್ತರ ಪ್ರದೇಶ, ಮಾರ್ಚ್28: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲೆಯಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಮಹಿಳಾ ದೂರುದಾರರಿಗೆ ತನ್ನ ದೂರಿನ ಮೇಲೆ ಪೊಲೀಸ್ ಕ್ರಮ ಕೈಗೊಳ್ಳಬೇಕೆಂದರೆ, ಆಕೆಯ 'ಉಡುಪುಗಳನ್ನು ತೆಗೆದು' ಮತ್ತು 'ಎದೆಯನ್ನು ತೋರಿಸು' ಎಂದು ಪೋಲೀಸರು ಕೇಳಿರುವ ಆಶ್ಚರ್ಯಕರ ಘಟನೆ ನಡೆದಿದೆ.
ಜಿಲ್ಲೆಯ ಬಿಲ್ಹೌರ್ ಪ್ರದೇಶದ ಪೊಲೀಸ್ ಔಟ್‌ಪೋಸ್ಟ್‌ನ ಉಸ್ತುವಾರಿ ವಹಿಸಿದ್ದ ಮಹೇಂದ್ರ ಸಿಂಗ್ ಎಂದು ಪೊಲೀಸರು ಗುರುತಿಸಿದ್ದಾರೆ ಹಾಗೂ ಈ ತಪ್ಪು ಮಾಡಿರುವ ಪೊಲೀಸ್ ಅನ್ನು ಅಮಾನತುಗೊಳಿಸಲಾಗಿದೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ಮಂಗಳವಾರ ತಿಳಿದು ಬಂದಿದೆ.

ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಪೊಲೀಸರನ್ನು ಸಂಪರ್ಕಿಸಿದ್ದ ಮಹಿಳೆ, ಭಾನುವಾರ ಮಧ್ಯರಾತ್ರಿಯ ಸುಮಾರಿಗೆ ಪೊಲೀಸರು ತನಗೆ ಕರೆ ಮಾಡಿ ವಿಡಿಯೋ ಕಾಲ್ ಮಾಡುವುದಾಗಿ ಹೇಳಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ತನ್ನ ದೂರನ್ನು ಪರಿಹರಿಸಲು ಅವಳು ಬಯಸಿದರೆ 'ಉಡುಪುಗಳನ್ನು ತೆಗೆದು ಅವಳ 'ಎದೆ'ಯನ್ನು ಅವನಿಗೆ ತೋರಿಸಿದರೆ ಮಾತ್ರ ಆ ಮಹಿಳೆ ನೀಡಿರುವ ದೂರಿನ ಮೇಲೆ ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಬೇಡಿಕೆ ಮಾಡಿದ್ದಾನೆ ಎಂದು ಮಾಹಿತಿ ದೊರಕಿತು.
"ನಾನು ನಿಮಗೆ (ಮಹಿಳೆ) ವೀಡಿಯೊ ಕರೆ ಮಾಡಲಿದ್ದೇನೆ...... ನೀವು ನಿಮ್ಮ ಬಟ್ಟೆ ತೆಗೆದು ಎದೆಯನ್ನು ತೋರಿಸಿದರೆ ನಾನು ನೋಡಲು ಬಯಸುತ್ತೇನೆ, ಹೀಗೆ ಮಾಡಿದರೆ ಮಾತ್ರ ನಾನು ನಿಮ್ಮ ದೂರನ್ನು ತಕ್ಷಣವೇ ಪರಿಹರಿಸುತ್ತೇನೆ," ಎಂದು ಮಹಿಳೆ ದೂರುದಾರರಿಗೆ ಪೊಲೀಸರು ಸುಳ್ಳು ಆಶ್ವಾಸನೆ ನೀಡಿದ್ದಾರೆ.
ಈ ಮಹಿಳೆ ದೂರು ದಾಖಲಿಸಲು, ಪೊಲೀಸ್ ಠಾಣೆಗೆ ಬಂದಾಗ ಕೂಡ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇನ್ನೂ ಈ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಾನ್ಪುರದಲ್ಲಿ ಮಂಗಳವಾರ ತಿಳಿಸಿದ್ದಾರೆ. ಆರೋಪಗಳು ನಿಜವೆಂದು ಕಂಡುಬಂದರೆ ನಾವು ಪೊಲೀಸರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿ ಹೇಳಿದರು.
ಕೆಲವು ದಿನಗಳ ಹಿಂದೆ ಪೋಲಿಸ್ ಸಮವಸ್ತ್ರ ಧರಿಸಿದ್ದ ಮಹಿಳೆಯೊಂದಿಗೆ (ಪೊಲೀಸ್ ಅಲ್ಲ) ತಿರುಗಾಡುತ್ತಿರುವ ಛಾಯಾಚಿತ್ರವನ್ನು ನೋಡಿದ ನಂತರ ಮತ್ತೊಬ್ಬ ಹಿರಿಯ ಪೋಲೀಸರನ್ನು ಅಮಾನತುಗೊಳಿಸಲಾಗಿತ್ತು.












Click it and Unblock the Notifications