ತಂದೆಯ ಶವವನ್ನು ಸೈಕಲ್ ನಲ್ಲಿ ಕೊಂಡೊಯ್ದ ಮಕ್ಕಳು!
ಬಾರಾಬಂಕಿ, ಮಾರ್ಚ್ 28: ಆರೋಗ್ಯ ಕೇಂದ್ರದ ಸಿಬ್ಬಂದಿ ವಾಹನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಕ್ಕಳೇ ತಮ್ಮ ತಂದೆಯ ಮೃತದೇಹವನ್ನು ಸೈಕಲ್ ಗಾಡಿಯಲ್ಲಿ ಕರೆತಂದ ಮನಕಲಕುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಎಂಬಲ್ಲಿ ನಡೆದಿದೆ.
ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಮನ್ಶರಾಂ ಎಂಬುವವರು ಮಾ.26 ರಂದು ಉತ್ತರ ಪ್ರದೇಶದ ತ್ರಿವೇದಿಗಂಜ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊನೆಯುಸಿರೆಳೆದಿದ್ದರು. ಅವರ ಅಂತಿಮ ವಿಧಿವಿಧಾನಗಳಿಗಾಗಿ ಶವವನ್ನು ಕೊಂಡೊಯ್ಯಲು ಅವರ ಇಬ್ಬರು ಮಕ್ಕಳು ಆಸ್ಪತ್ರೆ ಅಧಿಕಾರಿಗಳ ಬಳಿ ವಾಹನ ನೀಡುವಂತೆ ಕೇಳಿದ್ದರು. ಆದರೆ ಇದಕ್ಕೆ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ, ಸೈಕಲ್ ಗಾಡಿಯಲ್ಲೇ ಶವವನ್ನು ಕೊಂಡೊಯ್ಯುವಂತೆ ಹೇಳಿದ್ದಾರೆ.

ಇಡೀ ಜಿಲ್ಲೆಗೆ ಕೇವಲ ಶವ ಸಾಗಿಸುವ ಎರಡೇ ವಾಹನಗಳಿರುವುದರಿಂದ ಈ ಸಮಸ್ಯೆಯಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಸಮಜಾಯಿಷಿ ನೀಡಿದೆ.












Click it and Unblock the Notifications