ಪ್ರಿಯಾಂಕಾ ದೋಣಿ ವಿಹಾರ: ಶ್ರೇಯಸ್ಸು ತಮ್ಮದೆಂದು ಹೇಳಿಕೊಂಡ ಗಡ್ಕರಿ

ನವದೆಹಲಿ, ಮಾರ್ಚ್ 25: ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಅಲಹಾಬಾದ್-ವಾರಣಾಸಿ ಜಲಮಾರ್ಗ ನಿರ್ಮಾಣ ಆಗದೆ ಇದ್ದಿದ್ದರೆ ಪ್ರಿಯಾಂಕಾ ಗಾಂಧಿ ಅವರು ದೋಣಿ ವಿಹಾರ ನಡೆಸಲು ಸಾಧ್ಯವಾಗುತ್ತಿತ್ತೇ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಶ್ನಿಸಿದರು.

ಅಲಹಾಬಾದ್-ವಾರಣಾಸಿ ಜಲಮಾರ್ಗ ನಿರ್ಮಾಣದ ಶ್ರೇಯಸ್ಸನ್ನು ಅವರು ತಮ್ಮದೆಂದು ಹೇಳಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

'ಒಂದು ವೇಳೆ ನಾನು ಅಲಹಾಬಾದ್-ವಾರಣಾಸಿ ಜಲಮಾರ್ಗ ನಿರ್ಮಿಸದೆ ಹೋಗಿದ್ದರೆ, ಅವರು (ಪ್ರಿಯಾಂಕಾ ಗಾಂಧಿ) ಹೇಗೆ ಪ್ರಯಾಣಿಸುತ್ತಿದ್ದರು? ಅವರು ಗಂಗಾ ನದಿ ನೀರನ್ನು ಸಹ ಕುಡಿದರು. ಇದನ್ನೇ ಅವರು ಯುಪಿಎ ಸರ್ಕಾರವಿದ್ದಾಗ ಮಾಡಲು ಸಾಧ್ಯವಿತ್ತೇ?' ಎಂದು ಅವರು ಕೇಳಿದರು.

ಪ್ರಿಯಾಂಕಾ ರಾಜಕಾರಣಕ್ಕೆ ಪ್ರವೇಶಿರುವುದು ಅಷ್ಟೇನೂ ಮಹತ್ವದಲ್ಲ ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶದ ಕಾಂಗ್ರೆಸ್‌ನಲ್ಲಿ ಅವರು ಯಾವುದೇ ಪರಿಣಾಮ ಬೀರಲಾರರು ಎಂದು ಹೇಳಿದರು.

uttar pradesh allahabad-varanasi waterway priyanka gandhi ganga water nitin gadkari upa government

ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಮೂರು ದಿನಗಳ ಕಾಲ ದೋಣಿ ಮತ್ತು ರಸ್ತೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಗಂಗಾ ನದಿಯ ನೀರನ್ನು ಕುಡಿದಿದ್ದರು.

ಮಾರ್ಚ್ 2020ರ ವೇಳೆಗೆ ಗಂಗಾ ನದಿ ಶೇ 100ರಷ್ಟು ಶುದ್ಧಗೊಳ್ಳಲಿದೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.

'ನಮ್ಮ ನಮ್ಮ ಶ್ರೀಮಂತ ಇತಿಹಾಸದ ಸಂಕೇತ ಮತ್ತು ಸಂಸ್ಕೃತಿಯಾದ ಪಾರಂಪರಿಕ ನದಿಯು ಮರುಜೀವ ಪಡೆದುಕೊಂಡಿದೆ ಎಂಬುದನ್ನು ಜಗತ್ತಿಗೆ ತೋರಿಸುತ್ತೇವೆ. ಯಮುನಾ ನದಿಯನ್ನು ಶುದ್ಧೀಕರಿಸುವ ಕಾರ್ಯವನ್ನು ಸಹ ಮಾಡುತ್ತಿದ್ದೇವೆ. ಈಗಾಗಲೇ 13 ಸ್ವಚ್ಚತಾ ಯೋಜನೆಗಳು ಚಾಲ್ತಿಯಲ್ಲಿವೆ. ಯಮುನಾ ನದಿಗೆ ಸೇರುತ್ತಿದ್ದ ಚರಂಡಿ ನೀರನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+