• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಮ್ಮೆ ಬಳಸಿದ ಮಾಸ್ಕ್‌ನಿಂದಲೂ ಕೊರೊನಾ ವೈರಸ್ ಹರಡುವ ಸಾಧ್ಯತೆ

|

ಚೆನ್ನೈ, ಮೇ 4: ಒಮ್ಮೆ ಬಳಸಿದ ಮಾಸ್ಕ್‌ನಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ

   ರಂಜಾನ್ ಪ್ರಯುಕ್ತ ಮನೆಯಲ್ಲೇ ಪ್ರಾರ್ಥನೆ ಮಾಡಿದ ಮುಸಲ್ಮಾನ್ ಬಾಂಧವರು | Ramzan | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಜನರು ಸಾಮಾನ್ಯವಾಗಿ ಬಯೋ ಮೆಡಿಕಲ್ ತ್ಯಾಜ್ಯವನ್ನು ಆಸ್ಪತ್ರೆ ಅಥವಾ ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಸಂಬಂಧಿಸಿದ್ದು ಎಂಬುದಾಗಿ ಭಾವಿಸಿ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ, ಬಳಸಿದ ಮಾಸ್ಕ್ ಗಳಿಂದಲೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ .

   ಮುಖಕ್ಕೆ ಬಂತು ಮಾಸ್ಕ್: ಲಿಪ್ ಸ್ಟಿಕ್ ಬದಲು ಐ-ಮೇಕಪ್ ನತ್ತ ಹೆಂಗಳೆಯರ ಚಿತ್ತ!

   ಸಾಮಾನ್ಯವಾಗಿ ಜನರು ಮಾಸ್ಕ್ ಗಳನ್ನು ಯಾವುದೇ ವಸ್ತುಗಳಿಂದ ಪ್ರತ್ಯೇಕಿಸದೆ ಹೇಗೆ ಬಳಸಿತ್ತಾರೋ ಹಾಗೆಯೇ ಡಸ್ಟ್ ಬಿನ್ ಗಳಲ್ಲಿ ತಂದು ಹಾಕುತ್ತಾರೆ. ತಮ್ಮಲ್ಲಿಯೇ 10 ಮಂದಿಗೆ ಸೋಂಕು ತಗುಲಿದ ಬಳಿಕ ಭಯ ಆರಂಭವಾಗಿದೆ ಎಂದು ಪೌರಕಾರ್ಮಿಕರು ಹೇಳುತ್ತಾರೆ.

   ಚೆನ್ನೈ ಕಾರ್ಪೋರೇಷನ್

   ಚೆನ್ನೈ ಕಾರ್ಪೋರೇಷನ್

   ಚೆನ್ನೈ ಕಾರ್ಪೋರೇಷನ್ ಅಂದಾಜಿನ ಪ್ರಕಾರ, ಲಾಕ್ ಡೌನ್ ಆರಂಭವಾದಾಗಿನಿಂದಲೂ ಪ್ರತಿನಿತ್ಯ ಸುಮಾರು 5 ಟನ್ ನಷ್ಟು ಬಯೋಮೆಡಿಕಲ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಕ್ವಾರಂಟೈನ್ ನಲ್ಲಿರುವ ಮನೆಗಳಿಂದ ಉತ್ಪತ್ತಿಯಾಗುವ ಘನ ತ್ಯಾಜ್ಯವೂ ಸೇರಿದೆ.

   ಕ್ವಾರಂಟೈನ್ ಅಲ್ಲದ ಮನೆಗಳ ನಿವಾಸಿಗಳು ತಾವು ಬಳಸಿದ ಮಾಸ್ಕ್ ಗಳು, ಗ್ಲೌಸುಗಳನ್ನು ಸಾಮಾನ್ಯ ದ್ರಾವಣದಿಂದ ಸೋಂಕು ರಹಿತಗೊಳಿಸಿ ಅವುಗಳನ್ನು ಪ್ರತ್ಯೇಕವಾಗಿ ಸುತ್ತಿ ಪೌರ ಕಾರ್ಮಿಕರಿಗೆ ನೀಡಬೇಕು ಎಂದು ಏಪ್ರಿಲ್ 11 ರಂದು ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ಸಲಹೆಯೊಂದನ್ನು ಪ್ರಕಟಿಸಿತ್ತು.

   ಡಸ್ಟ್‌ಬಿನ್‌ಗಳಲ್ಲಿ ಮಾಸ್ಕ್‌

   ಡಸ್ಟ್‌ಬಿನ್‌ಗಳಲ್ಲಿ ಮಾಸ್ಕ್‌

   ಸಾಮಾನ್ಯವಾಗಿ ಜನರು ಮಾಸ್ಕ್ ಗಳನ್ನು ಯಾವುದೇ ವಸ್ತುಗಳಿಂದ ಪ್ರತ್ಯೇಕಿಸದೆ ಹೇಗೆ ಬಳಸಿತ್ತಾರೋ ಹಾಗೆಯೇ ಡಸ್ಟ್ ಬಿನ್ ಗಳಲ್ಲಿ ತಂದು ಹಾಕುತ್ತಾರೆ. ತಮ್ಮಲ್ಲಿಯೇ 10 ಮಂದಿಗೆ ಸೋಂಕು ತಗುಲಿದ ಬಳಿಕ ಭಯ ಆರಂಭವಾಗಿದೆ ಎಂದು ಪೌರಕಾರ್ಮಿಕರು ಹೇಳುತ್ತಾರೆ.

   ನಾಲ್ಕುಗಂಟೆಯ ಮೊದಲೇ ಮಾಸ್ಕ್‌ ಬದಲಾಯಿಸಬೇಕು

   ನಾಲ್ಕುಗಂಟೆಯ ಮೊದಲೇ ಮಾಸ್ಕ್‌ ಬದಲಾಯಿಸಬೇಕು

   ನಾಲ್ಕು ಗಂಟೆಗೂ ಹೆಚ್ಚು ಕಾಲದವರೆಗೂ ಬಳಸಿದ ಮಾಸ್ಕ್ ಗಳನ್ನು ಬದಲಾಯಿಸದಿದ್ದರೆ ಅವುಗಳು ಮಾಲಿನ್ಯಕಾರಕವಾಗಲಿವೆ. ಇವುಗಳನ್ನು ಸಂಗ್ರಹಿಸುವ ಪೌರ ಕಾರ್ಮಿಕರ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರಲಿವೆ ಎಂದು ಅವರು ಹೇಳಿದ್ದಾರೆ.

   ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್

   ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್

   ಕಂಟೈನ್ ಮೆಂಟ್ ಪ್ರದೇಶದೊಳಗೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸುರಕ್ಷತಾ ಕಿಟ್ ಗಳನ್ನು ಒದಗಿಸಲಾಗುತ್ತಿದೆ. ಆದಾಗ್ಯೂ, ಕಂಟೈನ್ ಮೆಂಟ್ ಪ್ರದೇಶದ ಹೊರಗಡೆ ಕೆಲಸ ಮಾಡುವ ಪೌರ ಕಾರ್ಮಿಕರು ಕೂಡಾ ಮಾಸ್ಕ್ , ಗ್ಲೌಸು ಮತ್ತಿತರ ಸುರಕ್ಷತಾ ಕ್ರಮಗಳ ಮೂಲಕ ಕೆಲಸ ಮಾಡಬೇಕು. ಕೆಲಸ ಮುಗಿಸಿ ಮನೆಗೆ ಹೋದ ನಂತರ ಸ್ನಾನ ಮಾಡಬೇಕು ಎಂದು ಕಾರ್ಪೊರೇಷನ್ ಅಧಿಕಾರಿ ತಿಳಿಸಿದ್ದಾರೆ.

   English summary
   People usually associate biomedical waste with hospitals and other healthcare facilities. With the coronavirus infection showing no sign of abatement, even the used masks that we unmindfully throw into dustbins can be highly infectious.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X