India Vs Pakistan: ಸಮಾಧಾನ.. ಸಮಾಧಾನ.. ಅಮೆರಿಕ ಹೇಳಿದ ಪಾಠ ಏನು?
ಭಾರತ & ಪಾಕಿಸ್ತಾನ ನಡುವೆ ಯುದ್ಧದ ಬೆಂಕಿ ಹೊತ್ತಿಕೊಂಡು ಧಗಧಗಿಸುತ್ತಾ ಇರುವಾಗ, ಮತ್ತೊಂದು ಕಡೆ ಜಾಗತಿಕ ಮಟ್ಟದಲ್ಲಿ ಟೆನ್ಷನ್ ಕೂಡ ಶುರುವಾಗಿದೆ. ದಿಢೀರ್ ಏನೇನೋ ಆಗುತ್ತೆ ಅಂತಾ ಎಲ್ಲರೂ ಟೆನ್ಷನ್ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಇಂತಹ ಸಂಕಷ್ಟ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲೇ ಅಮೆರಿಕ ಕೂಡ ಭಾರತ & ಪಾಕಿಸ್ತಾನ ನಡುವಿನ ಯುದ್ಧದ ಸ್ಥಿತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದೆ. ಈ ಮೂಲಕ ಅಮೆರಿಕ ಇದೀಗ ಭಾರತ & ಪಾಕಿಸ್ತಾನಕ್ಕೆ ಶಾಂತಿಯ ಪಾಠ ಮಾಡಿದೆ.
ಅದು 2019ರ ಫೆಬ್ರವರಿ 14, ಇಂಡಿಯಾದ ಪ್ರತಿಯೊಬ್ಬ ಪ್ರಜೆಯೂ ಮರೆಯಲು ಆಗದಿರುವ ದಿನ. ಯಾಕಂದ್ರೆ ಇದೇ ದಿನ ಭಾರತದ 40 ಹೆಮ್ಮೆಯ ಯೋಧರು ಹುತಾತ್ಮರಾಗಿದ್ದರು. ಆ ದಿನವನ್ನು ಇಡೀ ಜಗತ್ತೇ ಕರಾಳ ದಿನ ಎನ್ನುತ್ತದೆ. ಹೀಗೆ, ಇಂತಹ ಭೀಕರ ಘಟನೆ ನಡೆದು 6 ವರ್ಷಗಳ ನಂತರ ಮತ್ತೊಂದು ರಣಭೀಕರ ಘಟನೆಗೆ ಜಮ್ಮು & ಕಾಶ್ಮೀರ ಸಾಕ್ಷಿಯಾಗಿದೆ. ಈ ಘಟನೆಯು ಇದೀಗ ಭಾರತೀಯರನ್ನು ಬಡಿದೆಬ್ಬಿಸಿದ್ದು, ಉಗ್ರರ ಹೆಡೆಮುರಿ ಕಟ್ಟೋದಕ್ಕೆ ಆಗ್ರಹ ಕೇಳಿ ಬಂದಿದೆ. ಇಂತಹ ಸಮಯದಲ್ಲೇ ಅಮೆರಿಕ ಇದೀಗ ಶಾಂತಿಯ ಪಾಠ ಮಾಡುತ್ತಿದೆ. ಯಾಕಂದ್ರೆ ಜಾಗತಿಕವಾಗಿ ಇದೀಗ ಯುದ್ಧ ಬೇಡ ಎನ್ನುವುದು ಅಮೆರಿಕ ಮಾತಾಗಿದೆ.

ಗಡಿ ಭಾಗದಲ್ಲಿ ಭಾರಿ ಕಟ್ಟೆಚ್ಚರ!
ಕಾಶ್ಮೀರದ ಪರಿಸ್ಥಿತಿ ಇದೀಗ ಸೂಕ್ಷ್ಮವಾಗಿದ್ದು, ಯಾವುದೇ ಸಮಯದಲ್ಲಿ ಯುದ್ಧ ನಡೆಯುವ ಸಾಧ್ಯತೆ ಇದೆ. ಅಷ್ಟಕ್ಕೂ ಇದೀಗ ಆಗಿದ್ದು ಏನು ಅಂದ್ರೆ, ಕಾಶ್ಮೀರದ ಪ್ರಮುಖ ನಗರ ಶ್ರೀನಗರ ಭಾಗದಿಂದ ಕೇವಲ 90 ಕಿ.ಮೀ. ದೂರದಲ್ಲಿ ಇರುವ ಪಹಲ್ಗಾಮ್ ಜಾಗದಲ್ಲಿ ಉಗ್ರರು ಅಟ್ಟಹಾಸವನ್ನ ಮೆರೆದಿದ್ದಾರೆ. ಪಹಲ್ಗಾಮ್ ಪ್ರದೇಶಕ್ಕೆ ಪ್ರವಾಸಕ್ಕೆ ಅಂತಾ ತೆರಳಿದ್ದ ಟೂರಿಸ್ಟ್‌ಗಳನ್ನೇ ಈಗ ಟಾರ್ಗೆಟ್ ಮಾಡಿ ಪಾಪಿ ಉಗ್ರರು ದಾಳಿ ಮಾಡಿದ್ದಾರೆ. ಹೀಗಾಗಿ ಭಾರತ ಇದೀಗ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಸಾಧ್ಯತೆ ಇದ್ದು, ಅದನ್ನು ತಡೆಯಲು ಇದೀಗ ಅಮೆರಿಕ ಸಲಹೆ ನೀಡಿದೆ.
25ಕ್ಕೂ ಹೆಚ್ಚು ಪ್ರವಾಸಿಗರು ಬಲಿ...
ಈ ರೀತಿಯಾಗಿ 25ಕ್ಕೂ ಹೆಚ್ಚು ಪ್ರವಾಸಿಗರು ಬಲಿಯಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ ಮತ್ತು ಇನ್ನೂ ಹಲವರು ನಾಪತ್ತೆ ಆಗಿದ್ದಾರೆಂಬ ಆರೋಪ ಇದ್ದು, ಗಾಯಾಳುಗಳ ಪರಿಸ್ಥಿತಿ ಕೂಡ ಚಿಂತಾಜನಕ ಎಂಬಂತಿದೆ. ಈ ಹಿನ್ನೆಲೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭಯ ಕಾಡುತ್ತಿದೆ. ಮತ್ತೊಂದು ಕಡೆ ಕಣಿವೆ ರಾಜ್ಯದಲ್ಲಿ ಇದೀಗ ಪರಿಸ್ಥಿತಿ ಮತ್ತೆ ಸೂಕ್ಷ್ಮವಾಗಿದ್ದು, ಈ ಹಿನ್ನೆಲೆ ಭಾರತೀಯ ಸೇನೆ ಮತ್ತಷ್ಟು ಅಲರ್ಟ್ ಆಗಿದೆ.












Click it and Unblock the Notifications