ಅಮೆರಿಕ ವೀಸಾಕ್ಕೆ ಹೆಚ್ಚುವರಿ ಸಂದರ್ಶನ ವ್ಯವಸ್ಥೆ ಜಾರಿ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 18 : ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಮತ್ತು ನಾಲ್ಕು ದೂತಾವಾಸಗಳು ಇಂದಿನಿಂದ (ಅ.18) ಡಿಸೆಂಬರ್‌ 2016ರ ವರೆಗೆ ಸಾವಿರಾರು ಹೆಚ್ಚುವರಿ ವೀಸಾ ಸಂದರ್ಶನಗಳ ವ್ಯವಸ್ಥೆ ಮಾಡಿವೆ.

ವೀಸಾ ಕೋರಿ ಅರ್ಜಿಸಲ್ಲಿಸಿರುವವರು, ಅವರ ಕುಟುಂಬದ ಸದಸ್ಯರು ವೀಸಾ ಅಪಾಯಿಂಟ್ಮೆಂಟ್‌ ಬುಕ್‌ ಮಾಡಿಕೊಳ್ಳಲು ಇರುವ ಈ ಸೀಮಿತ ಅವಧಿಯ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಭಾರತದಲ್ಲಿ ನವದೆಹಲಿ, ಮುಂಬೈ, ಚೆನ್ನೈ, ಕೊಲ್ಕತಾ ಮತ್ತು ಹೈದರಾಬಾದ್ ನಲ್ಲಿ ಅಮೆರಿಕ ದೂತಾವಾಸ ಕಚೇರಿಗಳಿವೆ.

US Embassy and Consulates Increase Number of Visa Appointments

ವೀಸಾಕ್ಕಾಗಿ ಭಾರತದ ಪ್ರವಾಸಿಗರ ಕಾಯುವಿಕೆಯ ಅವಧಿಯನ್ನು ಕಡಿಮೆ ಮಾಡಿ, ವೀಸಾ ನೀಡಿಕೆ ಪ್ರಕ್ರಿಯೆ ಚುರುಕುಗೊಳಿಸುವ ಸಲುವಾಗಿಯೇ ತಾತ್ಕಾಲಿಕವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಾಗಾಗಿ ಈ ಹೆಚ್ಚುವರಿ ವೀಸಾ ನೀಡಿಕೆ ಸಾಧ್ಯವಾಗಿದೆ.

ಈಗಾಗಲೇ ಪಡೆದುಕೊಂಡಿರುವ ಅಪಾಯಿಂಟ್‌ಮೆಂಟ್‌ಗಳನ್ನು ಮತ್ತೆ ರಿಶೆಡ್ಯೂಲ್‌ ಮಾಡಬಹುದು. ವೀಸಾಕ್ಕಾಗಿ ಅರ್ಜಿ ಹಾಕುವುದನ್ನು ಮುಂದೂಡುತ್ತಿರುವವರನ್ನೂ ಅರ್ಜಿ ಹಾಕುವಂತೆ ಪ್ರೋತ್ಸಾಹಿಸಿ. ಅರ್ಜಿ ಹಾಕಲು ಇಲ್ಲಿ ಕ್ಲಿಕ್ಕಿಸಿ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Are you planning to travel to USA? Obtaining a visa, as well as apply for your visa is made easy by US consulate in India. U.S. Embassy and Consulates Increase Number of Available Visa Appointments through December 2016.
Please Wait while comments are loading...