ಅಮೆರಿಕದ ಕೋಟಿ ಸಂಬಳದ ಕೆಲಸ ಬಿಟ್ಟು ಭಾರತಕ್ಕೆ ಮರಳಿದ ಯುವತಿ! ಕಾರಣ ಕೇಳಿದರೆ ನೀವು ಭಾವುಕರಾಗ್ತೀರಿ

ವಿದೇಶಕ್ಕೆ ಹೋಗಿ ಲಕ್ಷ-ಕೋಟಿಗಟ್ಟಲೇ ಹಣ ಗಳಿಸಬೇಕು, ಅಮೆರಿಕದಂತಹ ಮುಂದುವರಿದ ದೇಶದಲ್ಲಿ ಸೆಟಲ್ ಆಗಬೇಕು ಎನ್ನುವುದು ಇಂದಿನ ಲಕ್ಷಾಂತರ ಭಾರತೀಯ ಯುವಜನರ ದೊಡ್ಡ ಕನಸು. ಆದರೆ, ಆ ಕನಸಿನ ಅಮೆರಿಕನ್ ಲೈಫ್‌ನಲ್ಲಿ ಕೈತುಂಬಾ ಕಾಸಿದ್ದರೂ ಮನಸ್ಸಿಗೆ ನೆಮ್ಮದಿ ಮತ್ತು ಕುಟುಂಬದ ಪ್ರೀತಿ ಸಿಗದೇ ಹೋದರೆ ಏನಾಗಬಹುದು? ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ದಿಶಾ ಲಂಬಾ ಎಂಬ ಯುವತಿಯ ಕಥೆ.

ಅಮೆರಿಕದಲ್ಲಿ ಕೈತುಂಬಾ ಸಿಗುತ್ತಿದ್ದ ಆರು ಅಂಕಿಗಳ ಡಾಲರ್ ಸಂಬಳದ ಡಾಟಾ ಸೈಂಟಿಸ್ಟ್ ಹುದ್ದೆ ಮತ್ತು ಅಷ್ಟೂ ಜನ ಹಪಹಪಿಸುವ H-1B ವೀಸಾವನ್ನ ಬಿಟ್ಟು, ಸ್ವದೇಶದ ಮೇಲಿನ ಪ್ರೀತಿಯಿಂದ ಆಕೆ ಭಾರತಕ್ಕೆ ಮರಳಿದ್ದಾರೆ. ಸದ್ಯ H-1B ವೀಸಾ ತೊರೆದು ಭಾರತಕ್ಕೆ ಮರಳಿದ ಈ ಯುವತಿಯ ನಿರ್ಧಾರ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

US Data Scientist Quits Six Figure Job And H1B Visa Due To Loneliness And Moves Back To India

ಭಾರತದಲ್ಲಿ ಬೆಳೆದ ದಿಶಾ ಲಂಬಾ, ಉನ್ನತ ಶಿಕ್ಷಣಕ್ಕಾಗಿ 2021ರಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯಕ್ಕೆ ತೆರಳಿ ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಲ್ಲಿನ ಹೊಸ ಪರಿಸರ, ಸ್ವಾವಲಂಬಿ ಬದುಕು ಅವರಿಗೆ ಅಪಾರ ಆತ್ಮವಿಶ್ವಾಸವನ್ನ ತಂದುಕೊಟ್ಟಿತು.

ಬಳಿಕ 2024ರಲ್ಲಿ ಪ್ರಸಿದ್ಧ ಸಿವಿಎಸ್ ಸಂಸ್ಥೆಯಲ್ಲಿ ಡಾಟಾ ಸೈಂಟಿಸ್ಟ್ ಆಗಿ ಉನ್ನತ ಹುದ್ದೆ ಅಲಂಕರಿಸಿದರು. ಕಂಪನಿಯು ಅವರಿಗೆ H-1B ವೀಸಾ ನೀಡಿತ್ತು. 2026ರ ಮಾರ್ಚ್ ತಿಂಗಳಲ್ಲಿ ನಡೆದ ವೀಸಾ ಲಾಟರಿಯಲ್ಲೂ ಅವರ ಹೆಸರು ಆಯ್ಕೆಯಾಗಿತ್ತು. ಲಕ್ಷಾಂತರ ಐಟಿ ವೃತ್ತಿಪರರು ವರ್ಷಗಟ್ಟಲೆ ಕಾಯುವ ಈ ಅವಕಾಶ ದಿಶಾಗೆ ಸುಲಭವಾಗಿ ಸಿಕ್ಕಿತ್ತು.

ವಿದೇಶಿ ಬದುಕಿನಲ್ಲಿ ಕಾಡಿದ ಅತಿಯಾದ ಒಂಟಿತನ

ಬದುಕಿನಲ್ಲಿ ಅತ್ಯುತ್ತಮ ಸಂಬಳ, ಆರಾಮದಾಯಕ ಜೀವನ ಹಾಗೂ ಕ್ಲೀನ್ ಪರಿಸರ ಎಲ್ಲವೂ ಇದ್ದರೂ, ದಿಶಾ ಅವರನ್ನ ಅತಿಯಾದ ಒಂಟಿತನ ಕಾಡಲಾರಂಭಿಸಿತು. ಭಾರತದಲ್ಲಿರುವ ತಂದೆ-ತಾಯಿ ಜೊತೆ ಮಾತನಾಡಲು ಸಮಯ ಹೊಂದಾಣಿಕೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು.

ಹಬ್ಬ-ಹರಿದಿನಗಳಲ್ಲಿ ಕುಟುಂಬದಿಂದ ದೂರವಿರುವುದು, ಕಷ್ಟ-ಸುಖಗಳಲ್ಲಿ ಪೋಷಕರ ಜೊತೆಗಿರಲು ಸಾಧ್ಯವಾಗದಿರುವುದು ಅವರನ್ನು ಮಾನಸಿಕವಾಗಿ ಕುಗ್ಗಿಸಿತು. ಕುಟುಂಬದವರನ್ನ ಬಿಟ್ಟು ಸಾವಿರಾರು ಮೈಲಿ ದೂರದಲ್ಲಿ ಏನೋ ಕಳೆದುಕೊಂಡಂತೆ ಬದುಕುವುದಕ್ಕಿಂತ ಅವರ ಜೊತೆಗಿರುವುದೇ ನಿಜವಾದ ನೆಮ್ಮದಿ ಎಂದು ಅವರಿಗೆ ಮನವರಿಕೆಯಾಯಿತು.

ಎಚ್-1ಬಿ ವೀಸಾ ನಿರ್ಬಂಧಗಳು

ಒಂಟಿತನದ ಜೊತೆಗೆ, ಕಠಿಣವಾದ H-1B ವೀಸಾ ನಿಯಮಗಳು ಕೂಡ ಅವರು ತಾಯ್ನಾಡಿಗೆ ಮರಳಲು ಪ್ರಮುಖ ಕಾರಣವಾಯಿತು. ಎಚ್-1ಬಿ ವೀಸಾದಲ್ಲಿರುವಾಗ ಭಾರತಕ್ಕೆ ಬಂದು ವಾಪಸ್ ಹೋಗಬೇಕಾದರೆ ವೀಸಾ ಸ್ಟ್ಯಾಂಪಿಂಗ್ ಸ್ಲಾಟ್ ಪಡೆಯುವುದೇ ದೊಡ್ಡ ತಲೆನೋವಿನ ಸಂಗತಿ. ಪ್ರತಿ ಮೂರು ವರ್ಷಕ್ಕೊಮ್ಮೆ ವೀಸಾ ನವೀಕರಣ ಮಾಡಿಕೊಳ್ಳುವ ಜಂಜಾಟ ಒಂದೆಡೆಯಾದರೆ, ವೃತ್ತಿಜೀವನದಲ್ಲಿ ಸುಲಭವಾಗಿ ಕಂಪನಿ ಬದಲಾಯಿಸಲು ಅಥವಾ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಈ ವೀಸಾ ನಿಯಮಗಳು ಅವಕಾಶ ನೀಡುವುದಿಲ್ಲ. ಹೀಗಾಗಿ ಈ ಅನಗತ್ಯ ಆತಂಕ ಮತ್ತು ಒತ್ತಡದ ಬದುಕು ಬೇಡವೆಂದು ಅವರು ತೀರ್ಮಾನಕ್ಕೆ ಬಂದರು.

ಕೊನೆಗೆ 2026ರ ಮೇ ತಿಂಗಳಲ್ಲಿ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ ದಿಶಾ, ಹರಿಯಾಣದ ಗುರುಗ್ರಾಮ್‌ನಲ್ಲಿರುವ ತಮ್ಮ ಮನೆಗೆ ಮರಳಿದರು. ಕೈಯಲ್ಲಿ ಸದ್ಯ ಯಾವುದೇ ಹೊಸ ಕೆಲಸವಿಲ್ಲದಿದ್ದರೂ, ಪ್ರತಿದಿನ ಬೆಳಿಗ್ಗೆ ತಂದೆ-ತಾಯಿಯನ್ನ ಪ್ರೀತಿಯಿಂದ ಅಪ್ಪಿಕೊಳ್ಳುವ ಕ್ಷಣ ತಮಗೆ ಕೋಟಿ ರೂಪಾಯಿ ಸಂಬಳಕ್ಕಿಂತ ಹೆಚ್ಚಿನ ಸಮಾಧಾನ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲೇ ಮಾಸ್ಟರ್ ಕಾರ್ಡ್, ಇವೈ, ಅಮೆರಿಕನ್ ಎಕ್ಸ್‌ಪ್ರೆಸ್‌ನಂತಹ ಜಾಗತಿಕ ದೈತ್ಯ ಕಂಪನಿಗಳಿದ್ದು, ಇಲ್ಲೇ ಅತ್ಯುತ್ತಮ ವೃತ್ತಿ ಅವಕಾಶಗಳನ್ನ ಕಂಡುಕೊಳ್ಳುವ ವಿಶ್ವಾಸವನ್ನ ಅವರು ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+