ಫಸ್ಟ್ Rank ರಾಣಿಗೆ ಒಲಿದ ಸೆಕೆಂಡ್ Rank ರಾಜು!

Posted By:
Subscribe to Oneindia Kannada

ಇದು 2016ರ ಲವ್ ಸ್ಟೋರಿ. ಇಬ್ಬರೂ ಯುಪಿಎಸ್ ಸಿಯಲ್ಲಿ ಟಾಪರ್ಸ್. ಇದೀಗ ಮದುವೆ ಬಗ್ಗೆ ಯೋಚಿಸ್ತಿದ್ದಾರೆ. ಆತನನ್ನು ನೋಡುತ್ತಿದ್ದ ಹಾಗೆ ಪ್ರೀತಿ ಆಯಿತು ಅಂದಿದ್ದಾರೆ 2015ನೇ ಸಾಲಿನ ಲೋಕಸೇವಾ ಆಯೋಗದ ಪರೀಕ್ಷೆಯ ಟಾಪರ್ ಟೀನಾ ದಬಿ. ಇನ್ನು ಆ ಹುಡುಗನ ಹೆಸರು ಅಥಾರ್ ಆಮೀರ್-ಉಲ್-ಶಫೀ ಖಾನ್.

ಅವರಿಬ್ಬರು ಒಂದು ಬೆಳಗ್ಗೆ ನೋಡಿದರು. ಆ ದಿನವೇ ಖಾನ್ ಹುಡುಕಿಕೊಂಡು ಹೋಗಿ ನಿಂತದ್ದು ಟೀನಾ ದಬೆ ಕೋಣೆ ಮುಂದೆ. ಯುಪಿಎಸ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದಿದ್ದ ದಬಿ ಮೇಲೆ ಪ್ರೀತಿ ಬಂದಿದ್ದ ಖಾನ್ ಅದೇ ಪರೀಕ್ಷೆಯಲ್ಲಿ ಎರಡನೇ ಸ್ಥಾನದಲ್ಲಿದ್ದವರು. ಆತನ ಪರಿಶ್ರಮಕ್ಕೆ ಪ್ರತಿ ದಿನ ಧನ್ಯವಾದ ಹೇಳಿದ್ದೇನೆ. ಅತ ಅದ್ಭುತವಾದ ವ್ಯಕ್ತಿ ಎಂದು ಹೇಳಿದ್ದಾರೆ ಟೀನಾ.[ಕನ್ನಡದಲ್ಲೇ ಯುಪಿಎಸ್ಸಿ ಬರೆದ ಭೈರಪ್ಪ ಸಂದರ್ಶನ]

ಇವರಿಬ್ಬರ ಲವ್ ಸ್ಟೋರಿ ಈಗ ಸಕತ್ ಸುದ್ದಿ ಆಗಿದೆ. ಅವರಿಬ್ಬರ ಕೌಟುಂಬಿಕ ಹಿನ್ನೆಲೆ ಮತ್ತಿತರ ವಿವರಗಳು ಕೂಡ ಆಸಕ್ತಿಕರವಾಗಿದೆ. ಓದು, ಓದು, ಓದು ಎಂದು ಧೇನಿಸುವ ಲೋಕಸೇವಾ ಆಯೋಗ ಪರೀಕ್ಷೆ ಅಭ್ಯರ್ಥಿಗಳ ಮಧ್ಯೆ ಇದು ಎಂಥದ್ದು ರೋಮ್ಯಾಂಟಿಕ್ ಸ್ಟೋರಿ? ಅದೂ ಇಬ್ಬರೂ ಒಳ್ಳೆ ಅಂಕ ಕೂಡ ಪಡೆದಿದ್ದಾರೆ.[ನನ್ನ ಸಾಧನೆಗೆ ಅಂಬೇಡ್ಕರ್ ಅವರೇ ಪ್ರೇರಣೆ : ಟೀನಾ ದಾಬಿ]

ಆತ ಮುಸ್ಲಿಂ-ಈಕೆ ಹಿಂದೂ

ಆತ ಮುಸ್ಲಿಂ-ಈಕೆ ಹಿಂದೂ

ಅಥಾರ್ ಆಮೀರ್-ಉಲ್-ಶಫೀ ಖಾನ್ ಕಾಶ್ಮೀರದ ಒಂದು ಸಣ್ಣ ಹಳ್ಳಿಯವರು. ಇನ್ನು ದಬಿ ದಲಿತ ಕುಟುಂಬದ ದೆಹಲಿಯ ಹೆಣ್ಣುಮಗಳು. 'ನಾವಿಬ್ಬರು ಸದ್ಯದಲ್ಲೇ ಮದುವೆಯಾಗ್ತೀವಿ' ಅಂದಿದ್ದಾರೆ ದಬಿ. ಇವರಿಬ್ಬರು ತಮ್ಮ ಸಂಬಂಧದ ಬಗ್ಗೆ ಯಾವುದೇ ಮುಚ್ಚುಮರೆ ಮಾಡಿಲ್ಲ. ನೆದರ್ ಲ್ಯಾಂಡ್ಸ್ ಗೆ ತಮ್ಮ ಗೆಳೆಯ-ಗೆಳತಿಯರ ಜತೆ ಹೋದಾಗ ಇವರಿಬ್ಬರು ತೆಗೆಸಿಕೊಂಡ ಫೋಟೋ ಶೇರ್ ಮಾಡಿದ್ದಾರೆ ದಬಿ.

ನಾವು ಪ್ರೀತಿಸ್ತಿದೀವಿ. ಸಂತೋಷವಾಗಿದ್ದೀವಿ

ನಾವು ಪ್ರೀತಿಸ್ತಿದೀವಿ. ಸಂತೋಷವಾಗಿದ್ದೀವಿ

ದಬಿ ಫೇಸ್ ಬುಕ್ ನಲ್ಲಿ ಹಾಕಿರುವ ಫೋಟೋಗೆ ಕೆಲವರು ಟೀಕೆ ಮಾಡಿದ್ದಾರೆ. ಆಕೆಯ ಆಯ್ಕೆ ಬಗ್ಗೆಯೇ ಪ್ರಶ್ನೆ ಮಾಡಿದ್ದಾರೆ. 'ನಾವು ಪ್ರೀತಿಸ್ತಿದೀವಿ. ಸಂತೋಷವಾಗಿದ್ದೀವಿ. ಆದರೆ ನಮ್ಮ ಬಗ್ಗೆ ಇಂಥದ್ದನ್ನು ಓದುವಾಗ ಬೇಸರವಾಗುತ್ತೆ. ನಮ್ಮ ಹೆಸರನ್ನು ಗೂಗಲ್ ನಲ್ಲಿ ಹುಡುಕಿ, ನಮ್ಮ ಬಗ್ಗೆ ಸುದ್ದಿಯನ್ನು ಓದುವುದನ್ನು ನಿಲ್ಲಿಸಿದ್ದೇವೆ. ನಾವು ಸಾರ್ವಜನಿಕರ ಕಣ್ಣೆದುರು ಇರೋದು. ಆದ್ದರಿಂದ ಇಂಥ ಸಣ್ಣ ಬೆಲೆ ತೆರಬೇಕಾಗುತ್ತದೆ' ಎಂದು ಹೇಳಿದ್ದಾರೆ ದಬಿ.

ಎರಡೂ ಕಡೆ ಪೋಷಕರು ಒಪ್ಪಿದ್ದಾರೆ

ಎರಡೂ ಕಡೆ ಪೋಷಕರು ಒಪ್ಪಿದ್ದಾರೆ

ಎರಡೂ ಕಡೆಯ ಪೋಷಕರು ಈ ಸಂಬಂಧವನ್ನು ಒಪ್ಪಿದ್ದಾರೆ. 'ನಾನು ಸ್ವತಂತ್ರ ಆಲೋಚನೆ ಇರುವ ಮಹಿಳೆಯಾಗಿ ಕೆಲವನ್ನು ಆರಿಸಿಕೊಳ್ಳಲು ಸ್ವತಂತ್ರಳು. ನನ್ನ ಆಯ್ಕೆ ಬಗ್ಗೆ ಸಂತೋಷ ಇದೆ. ಅದೇ ಥರ ಅಮೀರ್ ಗೂ ಖುಷಿ ಇದೆ. ನಮ್ಮ ಫೋಷಕರು ಸಂತೋಷವಾಗಿದ್ದಾರೆ. ಸಣ್ಣ ಸಮುದಾಯದಿಂದ ಬಂದಂಥ ನಮ್ಮಂಥವರು ಬೇರೆ ಧರ್ಮದ ಹುಡುಗನ ಜೊತೆ ಡೇಟಿಂಗ್ ಮಾಡುವಾಗ ನಕಾರಾತ್ಮಕ ಮಾತುಗಳನ್ನಾಡುವುದು ಸಹಜ ಎಂದಿದ್ದಾರೆ ಟೀನಾ ದಬಿ.

ಐಎಎಸ್ ತರಬೇತಿ

ಐಎಎಸ್ ತರಬೇತಿ

ಸದ್ಯಕ್ಕೆ ಟೀನಾ ದಬಿ ಮುಸ್ಸೋರಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಫಾರ್ ಅಡ್ಮಿನಿಸ್ಟ್ರೇಷನ್ ನಲ್ಲಿ ಐಎಎಸ್ ತರಬೇತಿಯಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
it was love at first sight with Athar Aamir-ul-Shafi Khan, says 2015 UPSC topper Tina Dabi. They met in the morning and, by evening, he was knocking at her door. Athar Aamir-ul-Shafi Khan, who ranked second in UPSC, now, they are in love and planning to marry soon.
Please Wait while comments are loading...