ಯುಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆ ಫಲಿತಾಂಶ ಪ್ರಕಟ

Posted By:
Subscribe to Oneindia Kannada

ನವದೆಹಲಿ, ಜುಲೈ 28:ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ(prelims)ಯ ಫಲಿತಾಂಶವನ್ನು ಕೇಂದ್ರ ಲೋಕಸೇವಾ ಆಯೋಗ(UPSC) ಗುರುವಾರದಂದು ಪ್ರಕಟಿಸಿದೆ. ಫಲಿತಾಂಶ ನೋಡುವ ವಿಧಾನ ಇಲ್ಲಿದೆ...

ಕೇಂದ್ರ ಲೋಕಸೇವಾ ಆಯೋಗವು ಜೂನ್‌ 18ರಂದು ಪರೀಕ್ಷೆ ನಡೆಸಿತ್ತು.ಈ ಪ್ರಿಲಿಮ್ಸ್ ನಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆನ್‌ಲೈನ್‌ ನಲ್ಲಿ ವಿವರವಾದ ಅರ್ಜಿ(Detailed Application Form) ಯನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ ಎಂದು ಆಯೋಗ ತಿಳಿಸಿದೆ.

UPSC civil services prelims 2017 result declared, check here

www.upsc.gov.in ವೆಬ್‌ಸೈಟ್‌ನಲ್ಲಿ ಆಗಸ್ಟ್‌ 17ರಿಂದ 31ರವರೆಗೆ ಅರ್ಜಿಗಳು ಲಭ್ಯವಾಗಲಿದೆ. ಅಭ್ಯರ್ಥಿಗಳು ಮೊದಲು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡ ಬಳಿಕ ಅರ್ಜಿ ಭರ್ತಿ ಮಾಡಬೇಕು.

'ಇ-ಪ್ರವೇಶ ಪತ್ರ' ಮತ್ತು ಪರೀಕ್ಷಾ ವೇಳಾಪಟ್ಟಿ ಆಯೋಗದ ವೆಬ್‌ಸೈಟ್‌ನಲ್ಲಿ ಮುಖ್ಯ ಪರೀಕ್ಷೆ ನಡೆಯುವ ಎರಡು ವಾರಗಳ ಮುನ್ನ ಲಭ್ಯವಾಗಲಿದೆ.ಮುಖ್ಯ ಪರೀಕ್ಷೆ ಅಕ್ಟೋಬರ್‌ 28ರಿಂದ ಆರಂಭವಾಗಲಿವೆ. ಪ್ರಿಲಿಮ್ಸ್ ಫಲಿತಾಂಶವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The UPSC civil services prelims 2017 result has been declared. The results are available on the official website.
Please Wait while comments are loading...