ಕೇಂದ್ರ ಲೋಕಸೇವಾ ಆಯೋಗ-ಯುಪಿಎಸ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ
ನವದೆಹಲಿ, ಜೂನ್ 5: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ 2020 ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗಳ ದಿನಾಂಕದ ಗೊಂದಲಕ್ಕೆ ತೆರೆ ಬಿದ್ದಿದೆ. ಯುಪಿಎಸ್ ಪಿ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ದಿನಾಂಕಗಳನ್ನು ಪ್ರಕಟಿಸಲಾಗಿದೆ.
ಮೇ 31 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಆಯೋಗ ಸತತವಾಗಿ ನಾಲ್ಕು ಬಾರಿ ರದ್ದು ಪಡಿಸಲಾಗಿತ್ತು. ಯುಪಿಎಸ್‌ಸಿ ಅಧ್ಯಕ್ಷ ಅರವಿಂದ ಸಕ್ಸೇನಾ ಅವರ ಅಧ್ಯಕ್ಷತೆಯಲ್ಲಿ ಆಯೋಗದ ಸಭೆ ಜರುಗಿದ ಸಭೆಯಲ್ಲಿ ಬದಲಿ ದಿನಾಂಕದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ನಾಗರಿಕ ಸೇವಾ ಸಿವಿಎಲ್ ಪರೀಕ್ಷೆ 2020 (ಪೂರ್ವಭಾವಿ), ಇಂಜಿನಿಯರಿಂಗ್ ಸರ್ವೀಸ್ (ಮುಖ್ಯ), ಜಿಯೋಲಾಜಿಸ್ಟ್ ಪರೀಕ್ಷೆ (ಮುಖ್ಯ) ಬಿಟ್ಟು ಮಿಕ್ಕ ಪರೀಕ್ಷೆಗಳ ದಿನಾಂಕದ ಬಗ್ಗೆ, ಪರೀಕ್ಷೆಗಳ ವೇಳಾಪಟ್ಟಿ ಪರಿಷ್ಕರಣೆ, ಬದಲಿ ದಿನಾಂಕದ ಬಗ್ಗೆ ಯು ಪಿಎಸ್ ಸಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ.
* ಯುಪಿಎಸ್ಸಿ ಸಿವಿಎಲ್ ಸೇವಾ ಪ್ರಿಲಿಮ್ಸ್ 2020 ಹಾಗೂ ಭಾರತೀಯ ಅರಣ್ಯ ಸೇವೆ (IFS) 2020 ಪರೀಕ್ಷೆಗಳು ಅಕ್ಟೋಬರ್ 4, 2020 ರಂದು ನಡೆಯಲಿದೆ.
* ಯುಪಿಎಸ್ಸಿ ಸಿಎಸ್ ಇ ಅಥವಾ ಐಎಎಸ್ ಪೂರ್ವಭಾವಿ ಪರೀಕ್ಷೆ ಅಕ್ಟೋಬರ್ 4, 2020ರಂದು ನಡೆಯಲಿದೆ. ಯುಪಿಎಸ್ ಸಿ ಸಿವಿಎಲ್ ಸೇವೆ ಮುಖ್ಯ ಪರೀಕ್ಷೆ ಸೆಪ್ಟೆಂಬರ್ 2020ರ ಬದಲಿಗೆ ಜನವರಿ 8, 2021ರಂದು ನಿಗದಿಯಾಗಿದೆ
ಎಲ್ಲಾ ಪರೀಕ್ಷೆ, ಸಂದರ್ಶನದ ಮಾಹಿತಿಯನ್ನು ಯು ಪಿಎಸ್ ಸಿ ವೆಬ್ ತಾಣದಲ್ಲಿ ಮಾತ್ರ ನೋಡಿ ಪರಿಶೀಲಿಸಿಕೊಳ್ಳಿ ಎಂದು ಸರ್ಕಾರ ಹೇಳಿದೆ.