Tata Motors: ಹೊಸ ಅವತಾರದಲ್ಲಿ SUV ಸಫಾರಿ, ಹ್ಯಾರಿಯರ್: ಉದ್ಘಾಟನಾ ಬೆಲೆ ಹೀಗಿದೆ

ಭಾರತದ ಆಟೋಮೋಟಿವ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟರ್ಸ್ ತನ್ನ ಐಕಾನಿಕ್ ಫ್ಲ್ಯಾಗ್ ಶಿಪ್ SUV ಸಫಾರಿ ಮತ್ತು ಟ್ರೆಂಡ್ ಸೆಟ್ಟರ್ ಆಗಿರುವ ಪ್ರೀಮಿಯಂ ಹ್ಯಾರಿಯರ್ ಗಳ ಹೊಸ ವಾಹನಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಅವತಾರದ ವಾಹನಗಳ ಮೊಡೆಲ್ ನಲ್ಲಿನ ವಿನ್ಯಾಸದಲ್ಲಿ ಬದಲಾವಣೆಗಳನ್ನು ತರಲಾಗಿದ್ದು, ಅನೇಕ ಹೆಚ್ಚುವರಿ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.

ಈ ವಾಹನಗಳ ಮತ್ತೊಂದು ವಿಶೇಷವೆಂದರೆ ಪ್ರತಿಷ್ಠಿತ GNCAP ಯಿಂದ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿರುವುದು. ಈ ಮೂಲಕ ಭಾರತದ ಅತ್ಯಂತ ಸುರಕ್ಷಿತ ವಾಹನಗಳು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿವೆ. ಹೊಸ ಸಫಾರಿ ಮತ್ತು ಹ್ಯಾರಿಯರ್ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ (33.05/34) ಮತ್ತು ಮಕ್ಕಳ ರಕ್ಷಣೆಗಾಗಿ (45.00/49) ರೇಟಿಂಗ್ ಪಡೆದುಕೊಂಡಿದೆ.

upgraded-safari-and-harrier-suvs

ಲ್ಯಾಂಡ್ ರೋವರ್ ನ ಹೆಸರಾಂತ D8 ಪ್ಲಾಟ್ ಫಾರ್ಮ್ ನಿಂದ OMEGARC ಆರ್ಕಿಟೆಕ್ಚರ್ ನಲ್ಲಿ ನಿರ್ಮಿಸಲಾಗಿರುವ ಈ ಶಕ್ತಿಶಾಲಿ ಮತ್ತು ಸೊಗಸಾಗಿರುವ SUV ಗಳನ್ನು ಬಿಡುಗಡೆ ಮಾಡಲಾಗಿದ್ದು, ಇವುಗಳ ಉದ್ಘಾಟನಾ ಆರಂಭಿಕ ಬೆಲೆ 16.19 ಲಕ್ಷ ರೂಪಾಯಿಗಳು (ಹೊಸ ಸಫಾರಿಗೆ) ಮತ್ತು 15.49 ಲಕ್ಷ ರೂಪಾಯಿಗಳು (ಹೊಸ ಹ್ಯಾರಿಯರ್ ಗೆ).

ನಾಲ್ಕು ವಿಭಿನ್ನವಾದ ಶ್ರೇಣಿಯಲ್ಲಿ ಈ ವಾಹನಗಳು ಲಭ್ಯವಿದ್ದು, ಇಂದಿನ SUV ಗ್ರಾಹಕರ ಅಭಿರುಚಿಗೆ ತಕ್ಕಂತೆ ಮತ್ತು ಇಂದಿನ ಜೀವನಶೈಲಿಗೆ ಹೊಂದಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಹೊಸ ಸಫಾರಿ ಮತ್ತು ಹೊಸ ಹ್ಯಾರಿಯರ್ ವಾಹನವನ್ನು ಬಿಡುಗಡೆ ಮಾಡಿ ಮಾತನಾಡಿದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಅಂಡ್ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ, "ಹೊಸ ಸಫಾರಿ ಮತ್ತು ಹೊಸ ಹ್ಯಾರಿಯರ್ ಸುರಕ್ಷತೆ, ದಕ್ಷತೆ ಮತ್ತು ಅನುಭವದಲ್ಲಿ ಹೊಸ ಅನುಭವವನ್ನು ನೀಡಲಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

"5 -ಸ್ಟಾರ್ GNCAP ರೇಟಿಂಗ್ ಮತ್ತು ಭಾರತೀಯ ವಾಹನಗಳಿಂದ ಇಲ್ಲಿವರೆಗಿನ ಅತ್ಯಧಿಕ ಸ್ಕೋರ್ ಗಳನ್ನು ಪಡೆದುಕೊಳ್ಳುವ ಮೂಲಕ ನಮ್ಮ SUVಗಳು ಭಾರತೀಯ ರಸ್ತೆಗಳಲ್ಲಿ ಅತ್ಯಂತ ಸುರಕ್ಷಿತ ವಾಹನಗಳಾಗಿವೆ'' ಎಂದು ಶೈಲೇಶ್ ಚಂದ್ರ ಹೇಳಿದ್ದಾರೆ.

ಹೊಸ ಸಫಾರಿ ಮತ್ತು ಹ್ಯಾರಿಯರ್ ನ ಪ್ರಮುಖಾಂಶಗಳು

> 6 ವ್ಯಕ್ತಿಗತ ಏರ್ ಬ್ಯಾಗ್ ಗಳೊಂದಿಗೆ ಒಟ್ಟು 7 ಏರ್ ಬ್ಯಾಗ್ ಗಳು
> 31.24 cm ಹರ್ಮಾನ್ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ
> ನ್ಯಾವಿಗೇಷನ್ ಡಿಸ್ ಪ್ಲೇಯೊಂದಿಗೆ 26.03 cm ಕಾನ್ಫಿಗರೇಷನ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್
> 13 ಬೆಸ್ಪೋಕ್ ಅಕಾಸ್ಟಿಕ್ ಮೋಡ್ ಗಳೊಂದಿಗೆ ಅಡ್ವಾನ್ಸ್ಡ್ ಹರ್ಮಾನ್ ಆಡಿಯೋವಕ್ಸ್. ಇದರೊಂದಿಗೆ 10 ಸ್ಪೀಕರ್ ಜೆಬಿಎಲ್ ಮ್ಯೂಸಿಕ್ ಸಿಸ್ಟಂ
> 12 ವೈಶಿಷ್ಟ್ಯತೆಗಳನ್ನು ಒಳಗೊಂಡ ADAS
> ಗೆಸ್ಟರ್ ಕಂಟ್ರೋಲ್ಡ್ ಪವರ್ ಟೇಲ್ಗೇಟ್
> 6 ಭಾಷೆಗಳಲ್ಲಿ 250+ ಕಮಾಂಡ್ ಗಳೊಂದಿಗೆ ವಾಯ್ಸ್ ಸಪೋರ್ಟ್ ವ್ಯವಸ್ಥೆ.
> ಮೊದಲ ಮತ್ತು ಎರಡನೇ ಸಾಲಿನ ಸೀಟುಗಳಲ್ಲಿ ವೆಂಟಿಲೇಶನ್ ವ್ಯವಸ್ಥೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+