ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LIVE: ಮೋದಿ ರಾಜ್ಯಧರ್ಮ ನಿಭಾಯಿಸುತ್ತಿದ್ದಾರೆ: ರಾಮ್ ದೇವ್

ಉತ್ತರಪ್ರದೇಶ ರಾಜ್ಯದಲ್ಲಿ ಎರಡನೇ ಹಂತ ಹಾಗೂ ಉತ್ತರಾಖಂಡ ರಾಜ್ಯದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬುಧವಾರ (ಫೆ.15) ನಡೆಯುತ್ತಿದೆ. ಮೋದಿ ಬಗ್ಗೆ ಹೊಗಳುತ್ತಾ, ಬಾಬಾ ರಾಮ್ ದೇವ್ ಮತದಾನ

By Mahesh
|
Google Oneindia Kannada News

ಲಕ್ನೋ, ಫೆಬ್ರವರಿ 15: ಎರಡು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಬುಧವಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಉತ್ತರಪ್ರದೇಶ ರಾಜ್ಯದಲ್ಲಿ ಎರಡನೇ ಹಂತ ಹಾಗೂ ಉತ್ತರಾಖಂಡ ರಾಜ್ಯದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬುಧವಾರ (ಫೆ.15) ನಡೆಯುತ್ತಿದೆ.

[5 ರಾಜ್ಯಗಳಲ್ಲಿ ಚುನಾವಣೆ ಮತದಾನ, ಫಲಿತಾಂಶ: ನಿಮಗಿದು ತಿಳಿದಿರಲಿ]

ಉತ್ತರ ಪ್ರದೇಶದ 67 ಕ್ಷೇತ್ರಗಳಲ್ಲಿ ಹಾಗೂ ಉತ್ತರಾಖಂಡದ 70 ವಿಧಾನಸಭಾ ಸ್ಥಾನಗಳಲ್ಲಿ 69 ಸ್ಥಾನಗಳಿಗೆ ಮತದಾನ ನಡೆಸಲಾಗುತ್ತಿದೆ.[ಮೊದಲ ಹಂತ: ಉತ್ತರಪ್ರದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತದಾನ]

* ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 40ರಷ್ಟು ಮತದಾನ ದಾಖಲು


* ಉತ್ತರಾಖಂಡ್ ನಲ್ಲಿ ಸಿಎಂ ಹರೀಶ್ ರಾವತ್ ರಿಂದ ಮತದಾನ
* 11 ಗಂಟೆಗೆ ಉತ್ತರಾಖಂಡ್ ನಲ್ಲಿ ಶೇ 24ರಷ್ಟು ಮತದಾನ ದಾಖಲು.

* ಮತದಾನ ಮಾಡಿದ ಬಾಬಾ ರಾಮ್ ದೇವ್, ಮೋದಿಯನ್ನು ಹಾಡಿ ಹೊಗಳಿದರು. ಮೋದಿ ತಮ್ಮ ರಾಜ್ಯಧರ್ಮವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.

* ಉತ್ತರ ಪ್ರದೇಶದ 67 ಕ್ಷೇತ್ರಗಳ ಒಟ್ಟು ಮತದಾರರಲ್ಲಿ ಶೇ 80 ರಷ್ಟು ಮಂದಿ ಒಬಿಸಿ ಮತ್ತು ಮುಸ್ಲಿಮ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ. [ಪಂಚರಾಜ್ಯದ ಚುನಾವಣೆಗೆ ಮೈಸೂರಿನಿಂದ ಮಸಿ ಬಳಕೆ!]

LIVE: Uttarakhand, 2nd phase of UP polls begin

* 2012ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) 34 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಎಸ್ ಪಿ ಮತ್ತು ಬಿಜೆಪಿ ಕ್ರಮವಾಗಿ 11 ಹಾಗೂ 10 ಸ್ಥಾನಗಳನ್ನು ಗೆದ್ದುಕೊಂಡಿದ್ದವು.

* ಉತ್ತರಾಖಂಡದ ಇನ್ನೊಂದು ಕ್ಷೇತ್ರದ ಮತದಾನವನ್ನು ಮಾರ್ಚ್‌ 9ಕ್ಕೆ ಮುಂದೂಡಲಾಗಿದೆ. [ಉತ್ತರಾಖಂಡ್ ಅಸೆಂಬ್ಲಿ ಕಣದಲ್ಲಿ 200 ಮಂದಿ ಕೋಟ್ಯಧಿಪತಿಗಳು]
* ಬಿಎಸ್ ಪಿ ಅಭ್ಯರ್ಥಿ ಕುಲದೀಪ್ ಸಿಂಗ್‌ ಅವರು ಅಪಘಾತಕ್ಕೀಡಾಗಿ ನಿಧನರಾದ ಕಾರಣ ಕರ್ಣಪ್ರಯಾಗ್ ಕ್ಷೇತ್ರದ ಮತದಾನ ಮುಂದೂಡಲಾಗಿದೆ.(ಒನ್ಇಂಡಿಯಾ ಸುದ್ದಿ)
English summary
Uttarakhand will be going to polls on Wednesday whereas the second phase of Uttar Pradesh elections will also take place. Voting will be held in 69 seats in Uttarakhand and in 67 constituencies in UP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X