ಮೇ.28: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಮೇ.28: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
11.45: ಖಾತೆ ಬಗ್ಗೆ ಅಪಸ್ವರ ಎತ್ತಿದ್ದ ಶಿವಸೇನಾ ಸಂಸದ ಅನಂತ ಗೀತೆ ಮಂಗಳವಾರ ಕೈಗಾರಿಕಾ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
11.20: ರಸಗೊಬ್ಬರ ಖಾತೆ ಸಚಿವರಾಗಿ ಅನಂತಕುಮಾರ್ ಅಧಿಕಾರ ಸ್ವೀಕಾರ. ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಕಚೇರಿ ಪ್ರವೇಶ.
Shiv Sena's Anant Geete takes charge as minister for heavy industries pic.twitter.com/xEHXiMe5oJ
— ANI (@ANI_news) May 28, 2014 11.00: ತನ್ನ ಅಜ್ಜಿಗೆ ಶಾಲು ಕಳಿಸಿರುವ ಮೋದಿ ಅವರ ನಡೆಯನ್ನು ಕೊಂಡಾಡಿದ ಮರ್ಯಂ ಷರೀಫ್. ನವಾಜ್ ಷರೀಫ್ ಅವರ ತಾಯಿಗೆ ಮೋದಿ ಅವರು ಶಾಲು ಕಳಿಸಿದ್ದರು.
10.45: ರಾಜ್ಯಸಚಿವ ಜಿತೇಂದ್ರ ಸಿಂಗ್ ಹೇಳಿಕೆ ಕುರಿತಂತೆ ಫರೂಖ್ ಅಬ್ದುಲ್ಲಾ ಅವರ ನಿವಾಸದಲ್ಲಿ ಚರ್ಚೆ ನಡೆಸಲಾಗುತ್ತಿದೆ.
10.30: ಅಫ್ಘಾನಿಸ್ತಾನದ ಹೆರಾತ್ ನಲ್ಲಿ ದಾಳಿ ನಡೆಸುವ ಮುನ್ನ ರಾಯಭಾರಿ ಕಚೇರಿ ಸಿಬ್ಬಂದಿಗಳನ್ನು ವಶಕ್ಕೆ ಪಡೆದು ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಯುವವರೆಗೂ ಹಿಡಿದಿಟ್ಟುಕೊಳ್ಳಲು ಉಗ್ರರು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

10.20 : ಉತ್ತರಪ್ರದೇಶದ ಬರೇಲಿಯಲ್ಲಿ ಭೂ ಕುಸಿತದಿಂದ 12 ಜನ ಸಾವನ್ನಪ್ಪಿದ್ದಾರೆ.
10.15 : ನಗರಾಭಿವೃದ್ಧಿ ಸಚಿವರಾಗಿ ಎಂ ವೆಂಕಯ್ಯ ನಾಯ್ಡು ಅವರು ಇಂದು ಅಧಿಕಾರ ಸ್ವೀಕರಿಸಿದರು.
Thank u v much PM @narendramodi for the beautiful shawl for my grandmother. My father personally delivered it to her pic.twitter.com/QGj1qA2BQ2
— Maryam Nawaz Sharif (@MaryamNSharif) May 27, 2014 10.10 : ಶಿವಸೇನಾ ಪಕ್ಷದ ಸಂಸದ ಅನಂತ ಗೀತೆ ಬೇಸರದ ನಡುವೆಯೂ ಮಂಗಳವಾರ ಸಚಿವರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ.
10.00 : ಆರ್ಟಿಕಲ್ 370 ಬಗ್ಗೆ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ನೀಡಿರುವ ಹೇಳಿಕೆಯನ್ನು ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ಖಂಡಿಸಿದ್ದಾರೆ. ರಾಜ್ಯ ಸಚಿವ ಜಿತೇಂದ್ರ ಸಿಂಗ್ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಪ್ರತಿಯಾಗಿ ಒಮರ್ ಕಿಡಿಕಾರಿದ್ದರು.
9.45: ಹಠ ಬಿಟ್ಟ ಅರವಿಂದ್ ಕೇಜ್ರಿವಾಲ್, ವೈಯಕ್ತಿಕ ಬಾಂಡ್ ಸಲ್ಲಿಸಿ ಜಾಮೀನು ಅರ್ಜಿ ಸಲ್ಲಿಸಿದ್ದರಿಂದ ತಿಹಾರ್ ಜೈಲಿನಿಂದ ಹೊರ ನಡೆದಿದ್ದಾರೆ.ನಿತಿನ್ ಗಡ್ಕರಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಮೇ.21 ರಿಂದ ಜೈಲುವಾಸಿಯಾಗಿದ್ದಾರೆ.












Click it and Unblock the Notifications