Woman Jumps In Front Of Train:: ಪ್ರಿಯಕರನನ್ನು ಹೆದರಿಸಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ- ವಿಡಿಯೋ
ಕೆಲ ದಿನಗಳ ಹಿಂದೆಯಷ್ಟೇ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಹೆದರಿಸಲು ಹೋಗಿ ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಪ್ರಿಯಕರನಿಗೆ ಹೆದರಿಸಲು ಹೋದ ಮಹಿಳೆ ರೈಲಿನಡಿ ಬಿದ್ದು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಆಗ್ರಾದ ರಾಜಾ ಕಿ ಮಂಡಿ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಿಯಕರನೊಂದಿಗೆ ಜಗಳವಾಡುತ್ತಾ ರೈಲು ಹಳಿಗೆ ಇಳಿದ ಮಹಿಳೆ ಅಲ್ಲಿಂದಲೇ ಪ್ರಿಯಕರನನ್ನು ನಿಂದಿಸುತ್ತಾಳೆ. ಆತನೊಂದಿಗೆ ಜಗಳ ಆಡುತ್ತಿರುವಾಗ ರೈಲು ಬರುವುದನ್ನು ಮಹಿಳೆ ನೋಡುವುದೇ ಇಲ್ಲ. ರೈಲು ವೇಗವಾಗಿ ಬಂದು ಆಕೆಯ ಮೇಲೆ ಹರಿಯುತ್ತದೆ. ಈ ದೃಶ್ಯ ನೋಡಲು ಸಿನಿಮಾ ಶೈಲಿಯಲ್ಲಿ ಇದ್ದು ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
लिविंग में रह रही थी आगरा लोहा मंडी की शादीशुदा महिला, प्रेमी से हुई तकरार और राजा मंडी रेलवे स्टेशन केरला एक्सप्रेस के सामने लगा दी छलांग. 30 सेकंड का बेहद दर्दनाक वीडियो ।@agrapolice @spgrpagra pic.twitter.com/mdDLZAeXei
— Journalist Harikant sharma (@harikantsharmaG) May 27, 2024
ಅಂದಹಾಗೆ ಸಾವನ್ನಪ್ಪಿದ ಮಹಿಳೆಯನ್ನು ಲೋಹಾ ಮಂಡಿಯ ಭಾರತಿ ಧರ್ಮೇಂದ್ರ ಎಂದು ಗುರುತಿಸಲಾಗಿದೆ. ಈಕೆಗೆ ಪೂನಂ ಮತ್ತು ಕೃಷ್ಣ ಎಂಬ ಇಬ್ಬರು ಮಕ್ಕಳಿದ್ದಾರೆ. ಕೆಲ ವರ್ಷಗಳ ಹಿಂದೆ ಆಕೆಯ ಪತಿ ಮೃತಪಟ್ಟಿದ್ದರು. ಕಳೆದ ಎರಡು ವರ್ಷಗಳಿಂದ ಭಾರತಿ ತನ್ನ ಪ್ರಿಯಕರ ಕಿಶೋರ್ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು.

ಆದರೆ ಇತ್ತೀಚೆಗೆ ಇಬ್ಬರ ನಡುವೆ ವಿರಪೀತವಾಗಿ ಜಗಳವಾಗುತ್ತಿತ್ತು. ಕುಡಿತದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು ಆಕೆ ರೈಲ್ವೆ ನಿಲ್ದಾಣದ ಬಳಿ ಬಂದು ತಾನು ಸಾಯುವುದಾಗಿ ಹೆದರಿಸಿದ್ದಾಳೆ. ನಂತರ ರೈಲ್ವೆ ಹಳಿಗೆ ಹಾರಿದ್ದಾಳೆ. ಅಷ್ಟರಲ್ಲಿ ವೇಗವಾಗಿ ಬಂದು ರೈಲು ಆಕೆಯ ಮೇಲೆ ಹರಿದಿದೆ.
ಈ ಅಪಘಾತದ ನಂತರ ನಿಲ್ದಾಣದಲ್ಲಿ ಕುಳಿತಿದ್ದ ಪ್ರಿಯಕರ ತನ್ನ ಪ್ರೇಯಸಿಯನ್ನು ಹಳಿ ಕೆಳಗೆ ನೋಡಿ ಅಲ್ಲಿಂದ ಓಡಿ ಹೋಗುತ್ತಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡ ಭಾರತಿಯನ್ನು ಕೂಡಲೇ ಸರೋಜಿನಿ ನಾಯ್ಡು ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಈ ರೀತಿ ಘಟನೆ ಇದೇ ಮೊದಲಲ್ಲ. ಈ ಹಿಂದೆ ಕೂಡ ಪತ್ನಿಗೆ ಹೆದರಿಸಲು ಹೋಗಿ ಜಿಮ್ಮರ್ ಪ್ರಾಣ ಕಳೆದುಕೊಂಡಿದ್ದಾನೆ.
ಇತ್ತೀಚೆಗೆ ನಡೆದ ಘಟನೆ:
ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಮೃತಪಟ್ಟಿರುವಂತಹ ಘಟನೆ ಬಾಗಲಗುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಮೇ 15ರಂದು ನಡೆದಿತ್ತು. ಬಿಹಾರ ಮೂಲದ ಅಮಿತ್ ಕುಮಾರ್(28) ಮೃತ ದುರ್ದೈವಿಯಾಗಿದ್ದಾನೆ.
ಅಮಿತ್ ಕುಮಾರ್ ಜಿಮ್ ಟ್ರೈನರ್ (Gym trainer) ಆಗಿದ್ದು, 10 ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ. ಒಂದು ವರ್ಷದ ಹಿಂದೆ ಜಿಮ್ ಸಮೀಪವೇ ಓರ್ವ ಯುವತಿಯನ್ನು ಪ್ರೀತಿಸಿದ್ದನು. ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದರು.
ಪತ್ನಿ ನರ್ಸಿಂಗ್ ಕೋರ್ಸ್ಗೆ ಸೇರಿದ ಬಳಿಕ ಪತಿಗೆ ಸಮಯ ನೀಡ್ತಿರಲಿಲ್ಲ. ಫ್ರೆಂಡ್ಸ್ ಅಂತೇಳಿ ಪದೇ ಪದೆ ಪೋನ್ ಕಾಲ್ ನಲ್ಲಿರ್ತಿದ್ದಳಂತೆ. ಇದೇ ವಿಚಾರಕ್ಕೆ ಆಗಾಗ ಪತಿ-ಪತ್ನಿ ನಡುವೆ ಗಲಾಟೆ ಆಗುತ್ತಿತ್ತು. ವೈಮನಸ್ಸು ಜೋರಾದ ಹಿನ್ನೆಲೆಯಲ್ಲಿ ಪತಿಯನ್ನು ತೊರೆದು ಪತ್ನಿ ಬೇರೆಡೆ ವಾಸವಿದ್ದಳು. ಆಗ ಮನೆಗೆ ವಾಪಸ್ ಬರುವಂತೆ ಪದೇ ಪದೇ ಕರೆ ಮಾಡಿ ಅಮಿತ್ ಮನವಿ ಮಾಡಿಕೊಂಡಿದ್ದರಂತೆ.
ಬಾಗಲಗುಂಟೆಯಲ್ಲಿನ ನಿವಾಸದಲ್ಲಿದ್ದ ಅಮಿತ್ ಆಕೆಗೆ ಮತ್ತೊಮ್ಮೆ ಫೋನ್ ಮಾಡಿದ್ದಾರೆ. ನೀನು ಬರದಿದ್ದರೆ ನೇಣು ಬಿಗಿದುಕೊಂಡು ಸಾಯುತ್ತೇನೆ ಎಂದು ಹೆದರಿಸಿದ್ದಾರೆ. ಖುರ್ಚಿ ಮೇಲೆ ನಿಂತು ನೇಣು ಬಿಗಿದುಕೊಂಡು ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದರು. ಈ ವೇಳೆ ಮೊಬೈಲ್ ಕೈಯಿಂದ ತಪ್ಪಿ ನೆಲಕ್ಕೆ ಬಿದ್ದಿದೆ. ಆಗ ಮೊಬೈಲ್ ಹಿಡಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಖುರ್ಚಿಯಿಂದ ಕಾಲು ಜಾರಿ ನೇಣು ಬಿಗಿದಿದೆ. ಇದರಿಂದ ಅಮಿತ್ ಸಾವನ್ನಪ್ಪಿದ್ದಾರೆ.












Click it and Unblock the Notifications