Sambhal Incident: ಹಿಂದೂ ಜಾಗದಲ್ಲಿನ ಮಸೀದಿ ಸರ್ವೇ ವೇಳೆ ಘರ್ಷಣೆ: 3 ಸಾವು, 30 ಪೊಲೀಸರಿಗೆ ಗಾಯ
ಸಂಭಾಲ್, ನವೆಂಬರ್ 24: ಉತ್ತರ ಪ್ರದೇಶದ ಸಂಬಾಲಾದಲ್ಲಿ ಹಿಂದೂ ದೇವಾಲಯ ಸ್ಥಳದಲ್ಲಿ ಜಾಮಾ ಮಸಿದಿ ಕಟ್ಟಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದಂತೆ ಸಮೀಕ್ಷೇ ಕೈಗೊಂಡಾ ಘರ್ಷಣೆ ನಡೆದಿದೆ. ಸ್ಥಳದಲ್ಲಿ ನೋಡ ನೋಡುತ್ತಿದ್ದಂತೆ ಪರಿಸ್ಥಿತಿ ಉದ್ವಿಘ್ನಗೊಂಡ ಹಿನ್ನೆಲೆಯಲ್ಲಿ 03 ಮಂದಿ ಮೃತಪಟ್ಟಿದ್ದು, 30 ಪೊಲೀಸರಿಗೆ ಗಾಯಗಳಾಗಿವೆ ಎಂದು ಎಎನ್‌ಐ ವರದಿ ಮಾಡಿದೆ.
ಹೌದು, ಮೊಘಲರ ಕಾಲದ ಜಾಮಾ ಮಸೀದಿಯನ್ನು ಹಿಂದೂ ದೇವಾಲಯದ ಸ್ಥದಲ್ಲಿ ನಿರ್ಮಿಸಲಾಗಿದೆ. ಈ ಕುರಿತು ನ್ಯಾಯಾಲಯವು ಮಸೀದಿ ಸಮೇಕ್ಷೆಗೆ ಆದೇಶಿಸಿತ್ತು. ಅದರಂತೆ ಭಾನುವಾರ ಬೆಳ್ಳಗ್ಗ ಉತ್ತರ ಪ್ರದೇಶದ ಮಸೀದಿ ಇರುವ ಸಂಭಾಲ್ ಪ್ರದೇಶಕ್ಕೆ ಅಧಿಕಾರಿಗಳು ಸಮೀಕ್ಷೆ ನಡೆಸಲು ಹೋದರು. ಈ ವೇಳೆ ಮಸೀದ ಹೊರಗಡೆ ಅಪಾರ ಸಂಖ್ಯೆಯಲ್ಲಿ ಜನರ ಸೇರಿದರು.

ಪೊಲೀಸ್ ಸೇರಿದಂತೆ ಅಗತ್ಯ ಭದ್ರತಾ ಸಿಬ್ಬಂಧಿ ಜೊತೆಗೆ ಸಮೀಕ್ಷೆ ಕಾರ್ಯಕ್ಕೆ ತೆರಳಿದವರ ಮೇಲೆ ಆಕ್ರೋಶಗೊಂಡ ಸ್ಥಳೀಯರು ಕಲ್ಲು ತೂರಾಟ ನಡೆಸಿದರು. ಸ್ಥಳದಲ್ಲಿ ಗೊಂದಲ, ಘರ್ಷಣೆ ಉಂಟಾಯಿತು. ನೋಡು ನೋಡುತ್ತಿದ್ದಂತೆ ಹಿಂಸಾಸತ್ಮಕ ರೂಪ ಪಡೆಯಿತು. ಸ್ಥಳದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಲು ಮುಂದಾದರ. ಅಶ್ರವಾಯು ಸಿಡಿಸಿದರು.
ಮಸೀದ ಸ್ಥಳದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿ ಸ್ಥಳೀಯರು ಮತ್ತು ಪೊಲೀಸರ ನಡುವೆ ದೊಡ್ಡ ಮಟ್ಟದಲ್ಲಿ ಘರ್ಷಣೆ ನಡೆಯಿತು. ಇದರಿಂದ ಮೂರು ಮಂದಿ ಸಾವಿಗೀಡಾದರೆ, ಜನರ ಗುಂಪು ನಿರ್ವಹಿಸಿದ ಪೊಲೀಸ್ ಸಿಬ್ಬಂದಿ ಪೈಕಿ ಸುಮಾರು 30 ಮಂದಿಗೆ ಗಂಭೀರ ಗಾಯಗಳು ಆಗಿವೆ ಎಂದು ವರದಿ ಆಗಿದೆ. ಈ ಮೂಲಕ ನ್ಯಾಯಾಲಯದ ನಿರ್ದೇಶನ ಬಳಿಕ ತಿಳಿಯಾಗಬೇಕಿದ್ದ ಸಮಸ್ಯೆಯೊಂದು ಮತ್ತಷ್ಟು ಜಟೀಲವಾದಂತಾಗಿದೆ.
ಹಿಂದೂ ದೇವಾಲಯದ ಸ್ಥಳದಲ್ಲಿ ಮಸೀದಿ ನಿರ್ಮಾಣ ಮಾಡಿದ್ದರ ಸಂಬಂಧ ಕಾನೂನು ಹೋರಾಟ ನೆಡೆದುದ್ದಿ, ಇದೀಗ ಹೋರಾಟ ವಿವಾದಾತ್ಮಕ ಕಾನೂನು ಹೋರಾಟವಾಗಿದೆ. ಎರಡು ಧರ್ಮಗಳ ಮಧ್ಯೆ ಮತ್ತಷ್ಟು ವೈಷಮ್ಯ ಮೂಡುವಂತೆ ಅಲ್ಲಿನ ಸ್ಥಳಿಯರು ಕಾನೂನು ಕೈಗೆತ್ತಿಕೊಂಡಿದ್ದಾರೆ.
ಸಮೀಕ್ಷೆ ವೇಳೆ ಸ್ಥಳದಲ್ಲಿ ಆಗಿದ್ದೇನು?
ಕೋರ್ಟ್ ನಿರ್ದೇಶನದಂತೆ ವಿವಾದಿತ ಸ್ಥಳಕ್ಕೆ ಅಡ್ವೋಕೇಟ್ ಕಮಿಷನರ್ ನೇತೃತ್ವದದಲ್ಲಿ ಸರ್ವೇಯ ತಂಡ ಮಸೀದಿ ಇರುವ ಜಾಗಕ್ಕೆ ಭಾನುವಾರ ತೆರಳಿತು. ಇವರು ಸರ್ವೇಯವರು ಎಂದು ಗೊತ್ತಾಗುತ್ತಿದ್ದಂತೆ ಸ್ಥಳೀಯರು ಮಸೀದಿ ಹೊರ ಭಾಗ ಜಮಾಯಿಸಿದರು. ಸಾವಿರಾರು ಜನರು ಆಗಮಿಸಿದರು. ಆರಂಭದಲ್ಲಿ ಪೊಲೀಸರು ಮಸೀದಿ ಪ್ರವೇಶಿಸದಂತೆ ತಡೆದರು. ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.
ಗುಂಪಿನಲ್ಲಿದ್ದ ಕೆಲವರು ಪೊಲೀಸರ ಮೇಲೆ ಕಲ್ಲು ತೂರಲು ಆರಂಭಿಸಿದರು. ಮತ್ತೊಂದು ಗುಂಪಿನವರು ಪೊಲೀಸರು, ಸರ್ವೇ ತಂಡದ ಸದಸ್ಯರು ವಾಹನಗಳಿಗೆ ಬೆಂಕಿ ಹಚ್ಚಿದರು. ಅಷ್ಟೊತ್ತಿಗಾಗಲೇ ಅಲರ್ಟ್ ಆಗಿದ್ದ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಷ್ಟೇ ತಡೆದರು ಸ್ಥಳೀಯರು ಅತ್ಯಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಸರ್ವ ಪ್ರಯತ್ನ ನಡೆಸಿದರು ಪರಿಸ್ಥಿತಿ ಉದ್ವಿಗ್ನಗೊಂಡಿತು. ಘಟನೆಯಲ್ಲಿ ಪ್ರಾಣ ಹಾನಿಗಳು ಸಂಭವಿಸಿದವು. ಸದ್ಯ ಗಾಯಾಳು ಪೊಲೀಸ್ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಬರ್ ದೇವಾಲಯ ನಾಶ ಮಾಡಿದ್ದಕ್ಕೆ ಸಾಕ್ಷ
ಮೃತರನ್ನು ನಯೀಮ್, ಬಿಲಾಲ್ ಮತ್ತು ನೌಮನ್ ಎಂದು ಗುರುತಿಸಲಾಗಿದೆ. ಜಾಮಾ ಮಸೀದಿ ಸ್ಥಳದಲ್ಲಿ ಒಂದು ಕಾಲದಲ್ಲಿ ದೇವಾಲಯ ಇತ್ತು ಎಂಬುದಕ್ಕೆ ಕುರುಹುಗಳು ಇವೆ. 1529 ರಲ್ಲಿ ಮೊಘಲ್ ಚಕ್ರವರ್ತಿ ಬಾಬರ್ ಇಲ್ಲಿನ ಹಿಂದೂ ದೇವಾಲಯ ನಾಶ ಮಾಡಿದ್ದ ಎಂಬುದಕ್ಕೆ ಬಾಬರ್ನಾಮಾ" ಮತ್ತು "ಐನ್-ಎ-ಅಕ್ಬರಿ"ಯ ಐತಿಹಾಸಿಕ ಗ್ರಂಥಗಳ ಉಲ್ಲೇಖವಿದೆ.
ಅಲ್ಲಿಂದ ಆರಂಭವಾದ ಈ ಮಸೀದಿ ಕೋರ್ಟ್ ಮೆಟ್ಟಿಲೇರಿತು. ಎರಡು ಧರ್ಮದವರು ಇದು ತಮಗೆ ಸೇರಿದ್ದು ಎಂಬ ಪಟ್ಟು ಹಿಡಿದ್ದಾರೆ. ಹೀಗಾಗಿ ಕೋರ್ಟ್ ಸರ್ವೆಗೆ ಈ ಹಿಂದೊಮ್ಮೆ ಸಮೀಕ್ಷೆಗೆ ಸೂಚಿಸಿತ್ತು. ಆಗ ನವೆಂಬರ್ 19ರಂದು ಸರ್ವೆ ತಂಡ ತಡರಾತ್ರಿ ಆಗಮಿಸಿ ಮಸೀದಿ ಒಳಭಾಗದ ಸಮೀಕ್ಷೆ ನಡೆಸಿತ್ತು. ಇತ್ತೀಚೆಗೆ ಕೋರ್ಟ್ ಮಸೀದಿ ಹೊರಾಂಗಣ ಸಮೀಕ್ಷೆಗೆ ಇಂದು ಭಾನುವಾರ ನವೆಂಬರ್ 24ರಂದು ದಿನಾಂಕ ನಿಗದಿ ಮಾಡಿತ್ತು. ನಿಗದಿಯಂತೆ ಸರ್ವೇಗೆ ತೆರಳಿದಾಗಿ ಇಂತಹ ಅಹಿಕರ ಘಟನೆ ನಡೆದಿದೆ.












Click it and Unblock the Notifications