UP rains: ಯುಪಿಯಲ್ಲಿ ಮುಂಗಾರು ಮಳೆಯಿಂದಾಗುವ ಪ್ರವಾಹ ಎದುರಿಸಲು ಯೋಗಿ ಸರ್ಕಾರ ಸಿದ್ಧತೆ

ಲಕ್ನೋ ಜೂನ್ 7: ಪ್ರತಿ ವರ್ಷ ಉತ್ತರ ಪ್ರದೇಶವು ಮಾನ್ಸೂನ್‌ನಿಂದ ಪ್ರವಾಹಕ್ಕೆ ಒಳಗಾಗುತ್ತದೆ, ಈ ಬಾರಿ ಪ್ರವಾಹವನ್ನು ಎದುರಿಸಲು ಯೋಗಿ ಸರ್ಕಾರ ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ.

ದೇಶಕ್ಕೆ ಮುಂಗಾರು ಇನ್ನೂ ಬಂದಿಲ್ಲ. ಆದರೆ ಕೆಲವೇ ದಿನಗಳಲ್ಲಿ ಮುಂಗಾರು ಪ್ರವೇಶಿಸಲಿದೆ. ಇದರಿಂದಾಗಿ ದೇಶದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ. ಉತ್ತರ ಪ್ರದೇಶದಲ್ಲೂ ಆ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಬಾರಿ ಉತ್ತರ ಪ್ರದೇಶದ ಯೋಗಿ ಸರ್ಕಾರ ಈಗಾಗಲೇ ಅಲರ್ಟ್ ಆಗಿದೆ. ಅವರು ಈಗಾಗಲೇ ಪ್ರವಾಹವನ್ನು ಎದುರಿಸಲು ಕೆಲಸ ಆರಂಭಿಸಿದ್ದಾರೆ.

UP rains: Yogi govt already started preparations to deal with the floods

ಉತ್ತರ ಪ್ರದೇಶದಾದ್ಯಂತ ಹಲವಾರು ನದಿಗಳಿವೆ. ಉತ್ತರ ಪ್ರದೇಶ ಕೃಷಿ ಪ್ರಧಾನ ರಾಜ್ಯ. ಆದ್ದರಿಂದಲೇ ಹಲವು ನದಿಗಳನ್ನು ಹೊಂದಿರುವ ಈ ರಾಜ್ಯದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಜನರು ಭಾರಿ ಪ್ರವಾಹವನ್ನು ಎದುರಿಸಬೇಕಾಗುತ್ತದೆ. ಭಾಗಲ್ಪುರ್, ವಾರಣಾಸಿ ಮತ್ತು ಗಂಗಾನದಿಯ ದಡದ ಹಲವಾರು ಸ್ಥಳಗಳು ಜಲಾವೃತವಾಗಿವೆ. ಹಾಗಾಗಿಯೇ ಯೋಗಿ ಸರ್ಕಾರ ಈ ಬಾರಿ ಎಚ್ಚರಿಕೆ ವಹಿಸಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಈ ಬಗ್ಗೆ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಕೂಡಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ ಜೂನ್ 15ರೊಳಗೆ ಗಡುವು ವಿಧಿಸಿದ್ದಾರೆ. ಇದೇ ವೇಳೆ ಪ್ರವಾಹ ನಿಯಂತ್ರಣ ಕಾಮಗಾರಿ ಪೂರ್ಣಗೊಳಿಸುವಂತೆಯೂ ಆದೇಶಿಸಿದ್ದಾರೆ.

ಈಗಾಗಲೇ 73 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವ ಸಾದ್ಯತೆ ಇದ್ದು ಇದರ ಬಗ್ಗೆ ಪರಿಶೀಲಿಸಲಾಗಿದೆ. ಲಕ್ನೋದಲ್ಲಿ ಕೇಂದ್ರೀಯ ಪ್ರವಾಹ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ಅಲ್ಲದೆ 50 ಜಿಲ್ಲೆಗಳಲ್ಲಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಜೂನ್ 15ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಅದಕ್ಕಾಗಿಯೇ ಮೊದಲೇ ಎಚ್ಚರಿಕೆ ನೀಡಲಾಗಿದೆ. ಜೂನ್ 15 ರೊಳಗೆ ಎಲ್ಲಾ ಪ್ರವಾಹ ನಿಯಂತ್ರಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಯೋಗಿ ಸರ್ಕಾರ ಗಡುವು ನೀಡಿದೆ.

UP rains: Yogi govt already started preparations to deal with the floods

ಉತ್ತರ ಪ್ರದೇಶದ ಅಂಬೇಡ್ಕರ್ ನಗರ, ಅಜಂಗಢ, ಸಂತ ಕಬೀರ್ ನಗರ, ಪಿಲ್ಬಿಟ್, ಬಾರಾಬಕಿ, ಮಹಾರಾಜ್‌ಗಂಜ್, ಕುಶಿನಗರ, ಲಖಿಮ್‌ಪುರ್ ಖೇರಿ, ಗೋರಖ್‌ಪುರ, ಬಸ್ತಿ, ಬಹ್ರಿಚ್, ಬಿಜ್ನೋರ್, ಸಿದ್ಧಾರ್ಥನಗರ, ಗಾಜಿಪುರ್, ಗೊಂಡಾ, ಬಲಿಯಾ, ಡಿಯೋರಿಯಾ, ಸೀತಾಪುರ್, ಬಲರಾಂಪುರ್, ಅಯೋಧ್ಯಾ, ಮೌ, ಫರುಕಾಬಾದ್, ಶ್ರಾವಸ್ತಿ, ಬಡಾಯು ಪ್ರತಿ ವರ್ಷವೂ ಅತಿ ಹೆಚ್ಚು ಪ್ರವಾಹದಿಂದ ಪ್ರಭಾವಿತವಾಗಿರುವ ಸ್ಥಳಗಳಾಗಿವೆ.

ಯುಪಿಯಲ್ಲಿ ಪ್ರವಾಹ

ಉತ್ತರ ಪ್ರದೇಶದ ಕೆಲವು ಭಾಗಗಳು ಪ್ರವಾಹದಿಂದ ತತ್ತರಿಸುತ್ತಿರುವಾಗ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಪ್ರತಿ ನಾಗರಿಕನ ಜೀವನವು ಬಹಳ ಮೌಲ್ಯಯುತವಾಗಿದೆ ಮತ್ತು ಅವರ ಸರ್ಕಾರವು ರಾಜ್ಯದ ಎಲ್ಲಾ ಜಪ್ರವಾಹ ಸಂತ್ರಸ್ತರ ಪರವಾಗಿದೆ ಎಂದು ಹೇಳಿದ್ದಾರೆ.

ಇಲ್ಲಿನ ದೊಮರಿಯಾಗಂಜ್ ತಹಸಿಲ್‌ನ ಶಹಪುರ್ ಮಂಡಿ ಪರಿಷತ್ತಿನಲ್ಲಿ ಸಭೆಯನ್ನುದ್ದೇಶಿಸಿ ಶನಿವಾರ ಮಾತನಾಡಿದ ಸಿಎಂ, ಪ್ರವಾಹ ಪೀಡಿತ ಜನರಿಗೆ ಪಡಿತರ ನೀಡಲಾಗುತ್ತಿದೆ. ಜೊತೆಗೆ ರೈತರ ಬೆಳೆಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದ ಒಟ್ಟು 15 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಗೊಂಡಾ, ಬಹ್ರೈಚ್ ಮತ್ತು ಬಲರಾಂಪುರ ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನೂ ನಡೆಸುವಂತೆ ಸೂಚಿಸಿದ್ದಾರೆ.

ನೆರೆ ರಾಜ್ಯದಲ್ಲಿ ಭಾರೀ ಮಳೆಯಾದರೆ, ರಪ್ತಿ ಮತ್ತು ಬುರ್ಹಿ ರಪ್ತಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತದೆ. ಸಮೀಪದ ಪ್ರದೇಶಗಳು ಪ್ರವಾಹಕ್ಕೆ ಕಾರಣವಾಗುತ್ತವೆ ಎಂದು ಸಿಎಂ ಶನಿವಾರ ಹೇಳಿದ್ದಾರೆ. ಪ್ರವಾಹ ಪೀಡಿತ ಡೊಮರಿಯಾಗಂಜ್ ಮತ್ತು ನೌಘರ್ ತಹಸಿಲ್‌ನ ಜನರಿಗೆ ಸಹಾಯವನ್ನು ಒದಗಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+