ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಯಡವಟ್ಟು, ಒಂದು ವರ್ಷದ ಮಗು ರೌಡಿ ಶೀಟರ್

|
Google Oneindia Kannada News

ಲಕ್ನೋ, ಸೆ. 11 : ಸದಾ ವಿವಾದಗಳಿಂದಲೇ ಸುದ್ದಿ ಮಾಡುವ ಉತ್ತರ ಪ್ರದೇಶದ ಪೊಲೀಸರು ಮತ್ತೊಂದು ಯಡವಟ್ಟು ಮಾಡಿದ್ದಾರೆ. ಒಂದು ವರ್ಷದ ಮಗು ಉಪ ಚುಣಾವಣೆ ಸಂದರ್ಭದಲ್ಲಿ ಶಾಂತಿಭಂಗ ಮಾಡಬಹುದು ಎಂದು ಆತನ ಹೆಸರನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸಿದ್ದಾರೆ. ಪಟ್ಟಿ ನೋಡಿದ ಹಿರಿಯ ಅಧಿಕಾರಿಗಳು ಗರಂ ಆಗಿದ್ದು ವರದಿ ನೀಡಿದ ಪೊಲೀಸರನ್ನು ಅಮಾನತು ಮಾಡಲು ಮುಂದಾಗಿದ್ದಾರೆ.

ಮುರಾದಾಬಾದ್ ಜಿಲ್ಲೆಯ ವ್ಯಾಪ್ತಿಯಲ್ಲಿ ಪೊಲೀಸರು ಇಂತಹ ಯಡಟವಟ್ಟು ಮಾಡಿದ್ದು, ಉಪ ಚುನಾವಣೆಯಲ್ಲಿ ಒಂದು ವರ್ಷದ ನಜೀಂ ಮತ್ತು ಆತನ ತಂದೆ ಯಾಸಿನ್ ಶಾಂತಿಭಂಗ ಮಾಡಬಹುದು. ಮುಂಜಾಗ್ರತಾ ಕ್ರಮವಾಗಿ ಅವರನ್ನು ಬಂಧಿಸಬೇಕು ಎಂದು ಹಿರಿಯ ಅಧಿಕಾರಿಗಳು ಮತ್ತು ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ. [ಗೂಂಡಾ ಕಾಯ್ದೆಯೇ ರೌಡಿಸಂ ಕೊನೆಗಾಣಿಸಲು ಮದ್ದು]

Uttar Pradesh

ಪೊಲೀಸರು ಮಾಡಿರುವ ಯಡವಟ್ಟನ್ನು ಹಿರಿಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಮತ್ತು ಈ ಬಗ್ಗೆ ಇಲಾಖೆಯ ಮಟ್ಟದಲ್ಲಿ ತನಿಖೆ ನಡೆಸಲು ಆದೇಶ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಗುಲಾಬ್ ಸಿಂಗ್ ವರದಿ ತಯಾರಿಸಿದ ಪೊಲೀಸರ ವಿರುದ್ಧ ಕರ್ತವ್ಯ ಲೋಪದ ಅಡಿ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. [470 ಗ್ರಾಂ ತೂಕದ ಮಗುವಿಗೆ ಮರುಜೀವ]

ಗುರುವಾರ ವರದಿ ತಯಾರಿಸಿದ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗುವುದು. ಈ ವರದಿಯಿಂದಾಗಿ ಪೊಲೀಸರು ಠಾಣೆಯಲ್ಲಿ ಕುಳಿತು ರೌಡಿ ಶೀಟರ್‌ಗಳ ಪಟ್ಟಿ ತಯಾರಿಸಿದ್ದಾರೆ ಎಂಬುದು ಖಾತ್ರಿಯಾಗಿದೆ. ಆದ್ದರಿಂದ ಅವರ ವಿರುದ್ಧ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. [ಬದುಕಿ ಬರಲಿಲ್ಲ ಬೆಂಗಳೂರಿನ ಸಾಹಸಿ ಪೇದೆ]

ರೌಡಿ ಶೀಟರ್‌ ಸೇರಿರುವ ತಂದೆ ಮತ್ತು ಮಗ ಬಂಧನದ ಭೀತಿ ಎದುರಿಸುತ್ತಿದ್ದು, ಮ್ಯಾಜಿಸ್ಟ್ರೇಟ್‌ ಕೋರ್ಟ್ ಮುಂದೆ ಹಾಜರಾಗಿ ತಮ್ಮನ್ನು ಬಂಧಿಸಬಾರದು ಎಂದು ಮನವಿ ಮಾಡಿದ್ದಾರೆ. ಒಂದು ವರ್ಷದ ಮಗು ಹೇಗೆ ಶಾಂತಿ ಭಂಗ ಮಾಡುತ್ತದೆ ಎಂದು ಕೋರ್ಟ್ ಕೇಳಿದರೆ ಪೊಲೀಸರು ಏನು ಉತ್ತರ ಕೊಡಬಹುದು?

English summary
Two policemen from Uttar Pradesh Thakurdwara police station to be suspended for charging one year old child with coercion ahead of a by-election. Police listed one year old Nazim and his father Yasin in rowdy sheerer list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X