ಉತ್ತರಪ್ರದೇಶ ಸಿಎಂ ಟ್ವಿಟ್ಟರ್ ತೊಳೆದ ಸಮಾಜವಾದಿಗಳು

By: ಅನುಷಾ ರವಿ
Subscribe to Oneindia Kannada

ಲಕ್ನೋ, ಮಾರ್ಚ್ 14: ಉತ್ತರಪ್ರದೇಶದ ಸಿಎಂ ಕಚೇರಿ ಬಿಡುವ ಮುನ್ನ ಯಾವುದೇ ಕುರುಹು ಇಲ್ಲದಂತೆ ಮಾಡಲು ಸಮಾಜವಾದಿ ಪಕ್ಷ ನಿರ್ಧರಿಸಿದ ಹಾಗೆ ತೋರುತ್ತದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿರುವ ಎರಡು ಅಧಿಕೃತ ಖಾತೆಗಳನ್ನು ಫುಲ್ ಕ್ಲೀನ್ ಮಾಡಲಾಗಿದೆ. ಉತ್ತರಪ್ರದೇಶದ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಟ್ವಿಟ್ಟರ್ ಖಾತೆ ಈಗ ಬರಿದಾಗಿದೆ.

ಸಾಮಾನ್ಯವಾಗಿ ಈ ಎರಡು ರೀತಿ ಖಾತೆಗಳು ಎಲ್ಲಾ ರಾಜ್ಯಗಳಲ್ಲೂ ಬಳಸಲಾಗುತ್ತದೆ. ಆದರೆ, ಸರ್ಕಾರ ಬದಲಾದ ತಕ್ಷಣ ಹಳೆ ಸರ್ಕಾರದ ಟ್ವೀಟ್ ಗಳನ್ನು ಏಕಾಏಕಿ ಡಿಲೀಟ್ ಮಾಡುವುದಿಲ್ಲ. ಮಾಡಿದರೂ ಎಲ್ಲವನ್ನು ಬ್ಯಾಕ್ ಅಪ್ ತೆಗೆದುಕೊಂಡು ನಂತರ ಹೊಸ ಸರ್ಕಾರದ ಸುಪರ್ದಿಗೆ ನೀಡಲಾಗುತ್ತದೆ.

UP government's social media activities vanish

@CMOfficeUP ಹಾಗೂ @UPGovt ಅಧಿಕೃತ ಟ್ವಿಟ್ಟರ್ ಖಾತೆಗಳ ಟ್ವೀಟ್ಸ್ ಡಿಲೀಟ್ ಆಗಿರುವ ಬಗ್ಗೆ ಪ್ರಶ್ನೆಗಳು ಏಳತೊಡಗಿತು. ಈ ಹಿಂದಿನ ಟ್ವೀಟ್ ಗಳನ್ನು ಶೇಖರಿಸಲಾಗಿದೆಯೇ? ಇಲ್ಲವೇ ಎಂಬ ಅನುಮಾನ ಕಾಡತೊಡಗಿತು.

ಹಿರಿಯ ಪತ್ರಕರ್ತರೊಬ್ಬರು ಟ್ವೀಟ್ ಮಾಡಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸುಮ್ಮನೆ ಡಿಲೀಟ್ ಮಾಡಿದರೆ ಐಟಿ ನಿಯಮದ ಪ್ರಕಾರ ಅಪರಾಧವಾಗುತ್ತದೆ ಎಂದು ಎಚ್ಚರಿಸಿದ್ದಾರಂತೆ.

UP government's social media activities vanish

ನಂತರ ಎಚ್ಚೆತ್ತುಕೊಂಡ ಸಿಎಂ ಕಚೇರಿಯ ನಿರ್ವಾಹಕರು, ಹಳೆ ಟ್ವೀಟ್ ಎಲ್ಲವೂ ಆರ್ಕೈವ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಹಳೆ ಟ್ವೀಟ್ ಗಳಿರುವ ಲಿಂಕ್ ಸದ್ಯದಲ್ಲೆ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಇದಲ್ಲದೆ ಮಾಹಿತಿ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ನಿರ್ವಹಣೆಯ www.upnews360.in ವೆಬ್ ಸೈಟ್ ನಿಂದ ಕೂಡಾ ಎಲ್ಲಾ ದಾಖಲೆಗಳನ್ನು ಅಳಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Seems like the outgoing Samajwadi party led Uttar Pradesh government doesn't want to leave a single trace of its activity on social media. Two official accounts of the Uttar Pradesh government and the Chief Minister's office on twitter were wiped clean of all tweets on Tuesday.
Please Wait while comments are loading...