ಉಪ್ರ ಚುನಾವಣೆ ಪೋಸ್ಟರ್ ಗಳಲ್ಲಿ ಡಿಂಪಲ್-ಪ್ರಿಯಾಂಕಾ ಕಾರುಬಾರು

By: ಅನುಷಾ ರವಿ
Subscribe to Oneindia Kannada

ಭೋಪಾಲ್, ಜನವರಿ 14: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮಧ್ಯೆ ಹೊಂದಾಣಿಕೆ ಮಾತುಗಳೇನೂ ಸದ್ಯಕ್ಕೆ ಕೇಳಿಬರುತ್ತಿಲ್ಲ. ಆದರೆ ಡಿಂಪಲ್ ಯಾದವ್ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಪೋಸ್ಟರ್ ಗಳು ರಾರಾಜಿಸುತ್ತಿವೆ. ಸಮಾಜವಾದಿ ಪಕ್ಷದಲ್ಲಿ ಚಿಹ್ನೆ ವಿಚಾರವಾಗಿ ಗೊಂದಲಗಳಿದ್ದರೂ ಕಾರ್ಯಕರ್ತರಂತೂ ಪ್ರಚಾರ ಆರಂಭಿಸಿಯಾಗಿದೆ.

ಮುಲಾಯಂ ಹಾಗೂ ಅಖಿಲೇಶ್ ಮಧ್ಯೆ ಸೈಕಲ್ ಚಿಹ್ನೆಗಾಗಿ ಕಾದಾಟ ನಡೆದಿದೆ. ಈ ಮಧ್ಯೆ ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಭಾವಚಿತ್ರವಿರುವ ಪೋಸ್ಟರ್ ಗಳು ಅಲಹಾಬಾದ್ ನಲ್ಲಿ ಎಲ್ಲೆಲ್ಲೂ ಕಂಡುಬರುತ್ತಿದೆ. ಇನ್ನೂ ಅಸಕ್ತಿಕರ ಸಂಗತಿ ಅಂದರೆ ಡಿಂಪಲ್ ಯಾದವ್ ಭಾವಚಿತ್ರದ ಜೊತೆಗೆ ಸ್ಟಾರ್ ಪ್ರಚಾರಕರಾಗಿ ಪ್ರಿಯಾಂಕಾ ಗಾಂಧಿ ಭಾವಚಿತ್ರವೂ ಕಾಣಿಸಿಕೊಂಡಿದೆ.[ಸಮಾಜವಾದಿ ಪಕ್ಷಕ್ಕೆ ಮುಸ್ಲಿಂ ಮತ ಬೀಳದಿರಲು 4 ಕಾರಣ]

Dimple yadav

ತುಂಬ ಚರ್ಚೆಯಲ್ಲಿರುವ ನಿರೀಕ್ಷಿತ ಎಸ್ ಪಿ-ಕಾಂಗ್ರೆಸ್ ಮೈತ್ರಿ ಅಧಿಕೃತವಾಗಿ ಘೋಷಣೆಯಾಗುವುದು ದೂರದ ಮಾತಾದರೂ ರಾಜ್ಯದಲ್ಲಿ ಆ ಭಾವನೆಯಂತೂ ದಟ್ಟವಾಗಿದೆ. ಎಸ್ ಪಿ ಒಳಗಿನ ಅಸಮಾಧಾನಕ್ಕೂ ಮುನ್ನವೇ ಅದರಲ್ಲೂ ಸೈಕಲ್ ಚಿಹ್ನೆ ಯಾರಿಗೆ ಸಿಗಬಹುದು ಎಂದು ನಿರ್ಧಾರವಾಗುವ ಮುಂಚೆಯೇ, ಡಿಂಪಲ್ ಯಾದವ್ ಹಾಗೂ ಪ್ರಿಯಾಂಕಾ ವಾದ್ರಾ ಭಾವಚಿತ್ರ ಇರುವ ಪೋಸ್ಟರ್ ನಲ್ಲಿ ಮಹಿಳಾ ಶಕ್ತಿಗೆ ಮತ ಹಾಕಿ ಎಂದು ಕೋರಲಾಗಿದೆ.

Priyanka Gandhi

ಒಂದು ವೇಳೆ ಎಸ್ ಪಿ-ಕಾಂಗ್ರೆಸ್ ದೋಸ್ತಿಯಾದರೆ ಮೊದಲ ಬಾರಿಗೆ ಪ್ರಿಯಾಂಕಾ ವಾದ್ರಾ ಅಮೇಥಿ-ರಾಯ್ ಬರೇಲಿಯಿಂದ ಅಚೆಗೆ ಚುನಾವಣೆ ಪ್ರಚಾರ ಮಾಡಲಿದ್ದಾರೆ. ಭವಿಷ್ಯದ ನಾಯಕಿಯಾಗಿ ಬಿಂಬಿಸುತ್ತಿರುವ ಪ್ರಿಯಾಂಕಾಗೆ ಈ ಚುನಾವಣೆ ಮೆಟ್ಟಿಲಾಗಿ ಪರಿಣಮಿಸಲಿದೆ. ಇನ್ನು ಡಿಂಪಲ್ ಯಾದವ್ ಕನೌಜ್ ನ ಸಂಸದೆಯಾಗಿದ್ದಾರೆ. ಅವರಿಗೆ ಉತ್ತರ ಪ್ರದೇಶ ಚುನಾವಣೆ ಪ್ರಚಾರಕ್ಕೆ ಹೊಸಬರಲ್ಲ.[ಪುತ್ರ ವ್ಯಾಮೋಹ ನಿರಂತರ: ನನ್ನ ಮಗನೇ ರಾಜ್ಯದ ಮುಂದಿನ ಸಿಎಂ]

ಕಾಂಗ್ರೆಸ್-ಎಸ್ ಪಿ ಮೈತ್ರಿಯಾದರೆ ಈ ಇಬ್ಬರು ಮಹಿಳೆಯರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮೋದಿ-ಅಮಿತ್ ಷಾ ಜೋಡಿಯ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There is no word on the Congress-Samajwadi party alliance yet but Uttar Pradesh is seeing posters of Dimple Yadav and Priyanka Gandhi Vadra ruling the poll roost.
Please Wait while comments are loading...