ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಸೋಲು: ಯೋಗಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಗರಂ

By Sachhidananda Acharya
|
Google Oneindia Kannada News

ಲಕ್ನೋ, ಮಾರ್ಚ್ 15: ಉತ್ತರ ಪ್ರದೇಶದ ಗೋರಖ್ ಪುರ್ ಮತ್ತು ಫುಲ್ ಪುರ್ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಾಣುತ್ತಿದ್ದಂತೆ ಪಕ್ಷದ ಮುಖಂಡರು ಕೆಸರೆರಚಾಟ ಆರಂಭಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬಿಜೆಪಿ ಜನಪ್ರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಹರಿಹಾಯ್ದಿದ್ದಾರೆ. ಯೋಗಿ ಹೆಸರು ಉಲ್ಲೇಖಿಸದೇ ಅವರು ಕಿಡಿಕಾರಿದ್ದಾರೆ.

ಯುಪಿಯಲ್ಲಿ 'ಠೇವಣಿ' ಕಳೆದುಕೊಂಡ ಕಾಂಗ್ರೆಸ್ ಸಂಭ್ರಮಿಸುತ್ತಿರುವುದು ಯಾಕೆ?ಯುಪಿಯಲ್ಲಿ 'ಠೇವಣಿ' ಕಳೆದುಕೊಂಡ ಕಾಂಗ್ರೆಸ್ ಸಂಭ್ರಮಿಸುತ್ತಿರುವುದು ಯಾಕೆ?

'ತಮ್ಮ ಸ್ವಕ್ಷೇತ್ರವನ್ನೇ ಗೆಲ್ಲಲಾಗದವರಿಗೆ ಪ್ರಮುಖ ಹುದ್ದೆಗಳನ್ನು ನೀಡುವಾಗ ಬಿಜೆಪಿಯ ಸಂಸದೀಯ ಸಮಿತಿ ನಾಯಕರು ಯೋಚಿಸಬೇಕು' ಎಂದು ಸುಬ್ರಮಣಿಯನ್ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

UP Bypoll results: Subramaniam Swamy slammed Yogi Adityanath

ಸುಬ್ರಮಣಿಯನ್ ಸ್ವಾಮಿ ಮಾತ್ರವಲ್ಲ ಬಿಜೆಪಿ ನಾಯಕ ರಮಾಕಾಂತ್ ಯಾದವ್ ಕೂಡ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಟೀಕಿಸಿದ್ದಾರೆ. ಧಾರ್ಮಿಕತೆ, ಪೂಜೆ ಪುನಸ್ಕಾರಗಳಲ್ಲಿ ತೊಡಗಿರುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲಾಗಿದೆ. ಇವರು ಹಿಂದುಳಿದ ವರ್ಗಗಳಿಗೆ ಏನೂ ಮಾಡಿಲ್ಲ. ಈ ಕಾರಣಕ್ಕೆ ಅವರೆಲ್ಲಾ ತಿರುಗಿ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.

ಯೋಗಿ ಸೋಲು: ಬಿಜೆಪಿಗೆ ಬುದ್ದಿ ಹೇಳಲು ಬಂದ ಕಾಂಗ್ರೆಸ್ಸಿಗೆ ಟ್ವಿಟ್ಟಿಗರ ರಿಪ್ಲೈಯೋಗಿ ಸೋಲು: ಬಿಜೆಪಿಗೆ ಬುದ್ದಿ ಹೇಳಲು ಬಂದ ಕಾಂಗ್ರೆಸ್ಸಿಗೆ ಟ್ವಿಟ್ಟಿಗರ ರಿಪ್ಲೈ

ಮುಖ್ಯಮಂತ್ರಿಗಳ ಕಲ್ಯಾಣ ಕಾರ್ಯಕ್ರಯ ಒಂದು ಜಾತಿಗೆ ಮಾತ್ರ ಸೀಮಿತವಾಗಿದೆ. ಎಲ್ಲರ ಕಲ್ಯಾಣಕ್ಕಾಗಿ ಸರಕಾರ ರಚಿಸಲಾಗಿದೆ, ಆದರೆ ಆ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಇನ್ನು ನಿನ್ನೆ 'ಎಎನ್ಐ' ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದ ಯೋಗಿ ಆದಿತ್ಯನಾಥ್, ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯನ್ನು ಲಘುವಾಗಿ ಪರಿಗಣಿಸಿದ್ದೇ ಸೋಲಿಗೆ ಕಾರಣ ಎಂದಿದ್ದರು. ಜೊತೆಗೆ ಸೋಲಿಗೆ ಕಾರಣಗಳನ್ನು ಪರಾಮರ್ಶೆ ಮಾಡುವುದಾಗಿ ಹೇಳಿದ್ದರು.

English summary
UP Bypoll results: Firebrand BJP leader Subramanian Swamy lashed out at Uttar Pradesh chief minister Yogi Adityanath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X