ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋರಖಪುರದ ಸೋಲಿನ ಹಿಂದೆ ಯೋಗಿ, ಅಮಿತ್ ಶಾ ಕೋಲ್ಡ್ ವಾರ್?

|
Google Oneindia Kannada News

Recommended Video

ಯೋಗಿ ಆದಿತ್ಯನಾಥ್ ವಿರುದ್ಧ ಮೋದಿ ಅಮಿತ್ ಶಾ ಒಳಗೊಳಗೇ ಪಿತೂರಿ | Oneindia Kannada

ಕೆಲವೊಂದು ಕ್ಷೇತ್ರಗಳೇ ಹಾಗೆ, ಚುನಾವಣೆಗೂ ಮುನ್ನವೂ ಹವಾ.. ಫಲಿತಾಂಶ ಬಂದ ನಂತರವೂ ಹವಾ.. ಆ ರೀತಿಯ ದೇಶದ ಲೋಕಸಭಾ ಕ್ಷೇತ್ರಗಳಲ್ಲೊಂದು ಉತ್ತರಪ್ರದೇಶದ ಗೋರಖಪುರ. ಹಾಗಾಗಿ, ಫಲಿತಾಂಶ ಬಂದ ಎರಡು ದಿನದ ನಂತರವೂ ಸೋಲು, ಗೆಲುವಿನ ಪರಾಮರ್ಶೆ ಮುಗಿಯುತ್ತಲೇ ಇಲ್ಲ.

ಗೋರಖಪುರ ಲೋಕಸಭಾ ಕ್ಷೇತ್ರ ಹಾಲೀ ಸಿಎಂ ಯೋಗಿ ಆದಿತ್ಯನಾಥ್ ಕಳೆದ ಐದು ಬಾರಿಯಿಂದ ಸ್ಪರ್ಧಿಸುತ್ತಿದ್ದ ಕ್ಷೇತ್ರ. ಇಲ್ಲಿ ಯಾವುದು ವರ್ಕೌಟ್ ಆಗುತ್ತೆ, ಜಾತಿ ಸಮೀಕರಣ ನಡೆಯುತ್ತಾ, ಚುನಾವಣೆ ಗೆಲ್ಲಲು ಏನು ಮಾಡಬೇಕು ಎನ್ನುವುದು ಬಿಜೆಪಿಯ ಕೇಂದ್ರದ ನಾಯಕರಿಗಿಂತ ಯೋಗಿಗೇ ಇಲ್ಲಿನ ಸೂಕ್ಶ್ಮತೆಯ ಅರಿವಿರುವುದು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಆದರೆ, ಯೋಗಿ ಹೇಳಿದ್ದು ಒಂದು ಅಮಿತ್ ಶಾ ಮಾಡಿದ್ದು ಇನ್ನೊಂದು ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಸ್ಥಳೀಯ ಮುಖಂಡರ ಮಾತನ್ನು ಕೇಳದೇ ತಮ್ಮ ನಿರ್ಧಾರದಂತೆ ಅಭ್ಯರ್ಥಿಯನ್ನು ಆಯ್ಕೆಮಾಡಿದ್ದು, ಯೋಗಿ ಮುನಿಸಿಗೆ ಕಾರಣವಾಗಿತ್ತು ಎಂದು ಕೆಲವು ಪತ್ರಿಕೆಗಳು ವರದಿ ಮಾಡಿದೆ.

ಠಾಕೂರ್ ಮತ್ತು ಬ್ರಾಹ್ಮಣ ಮತಗಳು ನಿರ್ಣಾಯಕ ಪಾತ್ರವಹಿಸುವ ಗೋರಖಪುರ ಕ್ಷೇತ್ರದಲ್ಲಿ ಬಿಜೆಪಿ ಬ್ರಾಹ್ಮಣ ಸಮುದಾಯದ ಉಪೇಂದ್ರ ಶುಕ್ಲಾ ಅವರಿಗೆ ಟಿಕೆಟ್ ನೀಡಿತ್ತು. ಆದರೆ, ಯೋಗಿ ಆದಿತ್ಯನಾಥ್ ಅವರು ಗೋರಖನಾಥ ಪೀಠದ ಪ್ರಧಾನ ಅರ್ಚಕರೊಬ್ಬರಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಡವನ್ನು ಕೇಂದ್ರ ಬಿಜೆಪಿ ಮುಖಂಡರಿಗೆ ಹೇರಿದ್ದರು.

ಯೋಗಿ ಸೋಲು: ಬಿಜೆಪಿಗೆ ಬುದ್ದಿ ಹೇಳಲು ಬಂದ ಕಾಂಗ್ರೆಸ್ಸಿಗೆ ಟ್ವಿಟ್ಟಿಗರ ರಿಪ್ಲೈಯೋಗಿ ಸೋಲು: ಬಿಜೆಪಿಗೆ ಬುದ್ದಿ ಹೇಳಲು ಬಂದ ಕಾಂಗ್ರೆಸ್ಸಿಗೆ ಟ್ವಿಟ್ಟಿಗರ ರಿಪ್ಲೈ

ಗೋರಖಪುರ ಮತ್ತು ಫೂಲ್ ಪುರ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಮೇಲೆ ಇಡೀ ದೇಶಕ್ಕೆ ಕುತೂಹಲವಿದ್ದರೂ, ಮೋದಿಯಾಗಲಿ ಅಮಿತ್ ಶಾ ಅಗಲಿ ಚುನಾವಣಾ ಪ್ರಚಾರಕ್ಕೆ ಬರಲಿಲ್ಲ. ಯೋಗಿ ಆದಿತ್ಯನಾಥ್ ಜೊತೆ ಅಂತರ ಕಾಯ್ದುಕೊಂಡ ಮೋದಿ ಮತ್ತು ಶಾ, ಯೋಗಿಗೆ ಈ ಮೂಲಕ ಕಠಿಣ ಸಂದೇಶವನ್ನೂ ರವಾನಿಸಿದ್ದಾರೆ ಎನ್ನುವ ಸುದ್ದಿಯಿದೆ. ಮುಂದೆ ಓದಿ..

ತನ್ನದೇ ಶೈಲಿಯಲ್ಲಿ ಕಾರ್ಯನಿರ್ವಹಿಸುವ ಯೋಗಿ

ತನ್ನದೇ ಶೈಲಿಯಲ್ಲಿ ಕಾರ್ಯನಿರ್ವಹಿಸುವ ಯೋಗಿ

ಎಲ್ಲಾ ರಾಜ್ಯದ ನಾಯಕರು, ಮುಖ್ಯಮಂತ್ರಿಗಳು ತಮ್ಮ ಹಿಡಿತದಲ್ಲೇ ಇರಬೇಕು ಎನ್ನುವ ಧೋರಣೆಯನ್ನು ಹೊಂದಿರುವ ಮೋದಿ ಮತ್ತು ಶಾಗೆ, ಯೋಗಿ ಆದಿತ್ಯನಾಥ್ ತನ್ನದೇ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಕಡಿವಾಣ ಹಾಕಬೇಕಿತ್ತು. ಹಾಗಾಗಿಯೇ, ಉತ್ತರಪ್ರದೇಶದ ಎರಡೂ ಉಪಚುನಾವಣೆಗಳನ್ನು ಮೋದಿ, ಶಾ ಗಂಭೀರವಾಗಿ ಪರಿಗಣಿಸಲೇ ಇಲ್ಲ ಎನ್ನುವ ಮಾತೂ ಚಾಲ್ತಿಯಲ್ಲಿದೆ.

ಗೋರಖಪುರದ ಮಠದ ಸ್ವಾಮಿ ಕಮಲನಾಥ ಅವರಿಗೆ ಟಿಕೆಟ್

ಗೋರಖಪುರದ ಮಠದ ಸ್ವಾಮಿ ಕಮಲನಾಥ ಅವರಿಗೆ ಟಿಕೆಟ್

ಗೋರಖಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮೊದಲು ಸ್ವಾಮಿ ಚಿನ್ಮಯಾನಂದ ಅವರಲ್ಲಿ ಯೋಗಿ ಮನವಿ ಮಾಡಿದ್ದರು. ಆದರೆ ತಾನು ಸ್ಥಳೀಯನಲ್ಲ ಎನ್ನುವ ಕಾರಣಕ್ಕಾಗಿ ಚಿನ್ಮಯಾನಂದ ಮನವಿಯನ್ನು ತಿರಸ್ಕರಿಸಿದ್ದರು. ಇದಾದ ನಂತರ ಗೋರಖಪುರದ ಮಠದ ಸ್ವಾಮಿ ಕಮಲನಾಥ ಅವರಿಗೆ ಟಿಕೆಟ್ ನೀಡಬೇಕೆಂದು ಅಮಿತ್ ಶಾ ಅವರಲ್ಲಿ ಮನವಿ ಮಾಡಿದ್ದರು. ಆದರೆ, ಈಗಾಗಲೇ ಉಪೇಂದ್ರ ಶುಕ್ಲ ಅವರಿಗೆ ಟಿಕೆಟ್ ಅಂತಿಮವಾಗಿದೆ ಎಂದು ಹೇಳಿ ಯೋಗಿಯನ್ನು ವಾಪಸ್ ಲಕ್ನೋಗೆ ಅಮಿತ್ ಶಾ ಕಳುಹಿಸಿದ್ದರು ಎನ್ನುವ ಸುದ್ದಿಯಿದೆ.

ಪಕ್ಷದ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದ ಶುಕ್ಲಾ

ಪಕ್ಷದ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದ ಶುಕ್ಲಾ

ಇದೇ ಉಪೇಂದ್ರ ಶುಕ್ಲಾ 2006ರಲ್ಲಿ ಬಿಜೆಪಿ ಟಿಕೆಟ್ ನೀಡಲಿಲ್ಲವೆಂದು ಪಕ್ಷೇತರರಾಗಿ ಸ್ಪರ್ಧಿಸಿ, ಪಕ್ಷದ ಅಧಿಕೃತ ಅಭ್ಯರ್ಥಿಯ (ಯೋಗಿ ಪರಮಾಪ್ತ) ಸೋಲಿಗೆ ಕಾರಣರಾಗಿದ್ದರು ಎಂದು ಯೋಗಿ, ಅಮಿತ್ ಶಾಗೆ ಮನವರಿಕೆ ಮಾಡಿದರೂ ಶಾ ಕೇಳದೇ, ಉಪೇಂದ್ರ ಶುಕ್ಲಾ ಪರವಾಗಿ ಪ್ರಚಾರ ಮಾಡುವಂತೆ ಸೂಚಿಸಿದರು ಎನ್ನುವ ಮಾಹಿತಿಯಿದೆ.

ಗೋರಖಪುರದ ಮೂವತ್ತು ವರ್ಷಗಳ ಇತಿಹಾಸದಲ್ಲಿ ಮಠದಿಂದ ಹೊರತಾದ ವ್ಯಕ್ತಿ

ಗೋರಖಪುರದ ಮೂವತ್ತು ವರ್ಷಗಳ ಇತಿಹಾಸದಲ್ಲಿ ಮಠದಿಂದ ಹೊರತಾದ ವ್ಯಕ್ತಿ

ಬಿಜೆಪಿಯ ಪರಾಜಿತ ಅಭ್ಯರ್ಥಿ ಉಪೇಂದ್ರ ಶುಕ್ಲಾ, ಗೋರಖಪುರದ ಮೂವತ್ತು ವರ್ಷಗಳ ಇತಿಹಾಸದಲ್ಲಿ ಮಠದಿಂದ ಹೊರತಾದ ಮೊದಲ ಅಭ್ಯರ್ಥಿ. ಗೋರಖನಾಥ ಮಠದ ಪ್ರಭಾವ ಈ ಭಾಗದ ಜನರಲ್ಲಿ ಸಾಕಷ್ಟು ಇರುವುದರಿಂದ, ಯೋಗಿ ಬಯಸದ ವ್ಯಕ್ತಿ ಈ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಚುನಾವಣಾ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ದೇವಾಲಯ/ಮಠದ ಆಡಳಿತ ವರ್ಗ ಮತ್ತು ಸಿಬ್ಬಂದಿಗಳೂ ಮತದಾನದಿಂದ ದೂರ ಉಳಿದ ವಿಷಯವೂ ಗೌಪ್ಯವಾಗಿ ಏನೂ ಉಳಿದಿಲ್ಲ. ಠಾಕೂರ್ ಸಮುದಾಯದವರೂ ಬಿಜೆಪಿಗೆ ಮತ ಚಲಾಯಿಸಲಿಲ್ಲ ಎನ್ನುವ ಮಾತಿದೆ ಕೂಡಾ..

ಮೋದಿ, ಶಾ ಗೆಲ್ಲಲಿಲ್ಲ, ಆದಿತ್ಯನಾಥ್ ಸೋಲಲಿಲ್ಲ

ಮೋದಿ, ಶಾ ಗೆಲ್ಲಲಿಲ್ಲ, ಆದಿತ್ಯನಾಥ್ ಸೋಲಲಿಲ್ಲ

ಇನ್ನು ವರಿಷ್ಠರ ಅಣತಿಯಂತೆ ಯೋಗಿ ಆದಿತ್ಯನಾಥ್ ಪ್ರಚಾರದಲ್ಲಿ ತನ್ನನ್ನು ತೊಡಗಿಸಿಕೊಂಡರೂ, ನಿರೀಕ್ಷಿತ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರಾಗಲಿ ಅದಕ್ಕಿಂತಲೂ ಹೆಚ್ಚಾಗಿ ಗೋರಖನಾಥ ಮಠದ ಅನುಯಾಯಿಗಳು ಯೋಗಿಗೆ ಬೆಂಬಲ ನೀಡಲಿಲ್ಲ. ತಾವಿಲ್ಲದೇ ಚುನಾವಣೆ ಗೆಲ್ಲಲಿ ನೋಡೋಣ (ಮೋದಿ, ಶಾ) ಎನ್ನುವುದು ಒಬ್ಬರ ಲೆಕ್ಕಾಚಾರವಾದರೆ, ತನ್ನಿಷ್ಟಕ್ಕೆ ವಿರುದ್ದವಾಗಿ ಅಭ್ಯರ್ಥಿ ನಿಲ್ಲಿಸಿದರೆ (ಯೋಗಿ) ಫಲಿತಾಂಶ ಹೀಗೇ ಬರುವುದು ಎನ್ನುವುದು ಇನ್ನೊಬ್ಬರ ನಿಲುವಾಗಿರಬಹುದು. ಒಟ್ಟಿನಲ್ಲಿ ಗೋರಖಪುರದಲ್ಲಿ ಸೋತಿದ್ದು ಮಾತ್ರ ಬಿಜೆಪಿ... ಬಲಿಪಶುವಾಗಿದ್ದು ಪಕ್ಷದ ಅಭ್ಯರ್ಥಿ.

ಆಡಿಕೊಳ್ಳುವವರ ಬಾಯಿಗೆ ಆಹಾರವಾದ ಗೋರಖಪುರದ ಯೋಗಿ ಸೋಲುಆಡಿಕೊಳ್ಳುವವರ ಬಾಯಿಗೆ ಆಹಾರವಾದ ಗೋರಖಪುರದ ಯೋಗಿ ಸೋಲು

English summary
Uttar Pradesh by-polls results show all is not well between PM Modi, BJP President Amit Shah and UP CM Yogi Adityanath. The PM, keeping away from campaigning in the high-voltage elections, seems to point to a deliberate strategy. While Yogi is upset with Amit Shah over candidate selection. At the end, BJP lost the crucial battle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X