ಬರೇಲಿ ಯುವತಿಯ ರೇಪ್, ಆ್ಯಸಿಡ್ ಕುಡಿಸಿ ಹತ್ಯೆ

Uttar Pradesh Bareilly young girl gang raped forced to drink acid and murdered
ಬರೇಲಿ (ಉತ್ತರ ಪ್ರದೇಶ), ಜೂನ್ 2: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು/ ಅತ್ಯಾಚಾರಗಳಂತಹ ಹೇಯ ಕೃತ್ಯಗಳು ಅವ್ಯಾಹತವಾಗಿ ಮುಂದುವರಿದಿವೆ. ಕಳೆದ ವಾರ ಬದೌನ್ ಜಿಲ್ಲೆಯ ಗ್ರಾಮವೊಂದರಲ್ಲಿ ದಲಿತ ಸಮುದಾಯ ಇಬ್ಬರು ಬಾಲಕಿಯರನ್ನು ದುರುಳರು ಅತ್ಯಾಚಾರಕ್ಕೀಡುಮಾಡಿ, ಊರ ಹೊರಗೆ ತೋಟದ ಮರವೊಂದರಲ್ಲಿ ನೇಣು ಬಿಗಿದು ಸಾಯಿಸಿದ್ದರು.

ಅದರಷ್ಟೇ ಕ್ರೌರ್ಯದ ಮತ್ತೊಂದು ರೇಪ್ ಅಂಡ್ ಮರ್ಡರ್ ಘಟನೆ ಇಂದು ಸೋಮವಾರ ವರದಿಯಾಗಿದೆ. 22 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ದುರುಳರು, ನಂತರ ಬಲವಂತವಾಗಿ ಆ್ಯಸಿಡ್ ಕುಡಿದು ಸಾಯುವಂತೆ ಆಕೆಯ ಮೇಲೆ ಒತ್ತಡ ಹಾಕಿದ್ದಾರೆ. ಆಕೆಯಿಂದ ಅದು ಸಾಧ್ಯವಾಗದೇ ಹೋದಾಗ ಉಸಿರುಗಟ್ಟಿಸಿ ಸಾಯಿಸಿದ್ದಾರೆ.

ಬರೇಲಿಯ ಬಹೇರಿ ಪ್ರದೇಶದ ಐತಪುರ ಗ್ರಾಮದಲ್ಲಿ ಈ ಕ್ರೌರ್ಯ ಶನಿವಾರ ನಡೆದಿದೆ. ಇಂದು ಯುವತಿಯ ಶವಪರೀಕ್ಷೆ ವರದಿ ಬಂದಿದ್ದು, ಯುವತಿಯನ್ನು ಸಾಮೂಹಿಕ ಅತ್ಯಾಚಾರವೆಸಗಿ, ಆ್ಯಸಿಡ್ ಕುಡಿಸಿ, ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ತಿಳಿದುಬಂದಿದೆ. (ಆನೇಕಲ್ಲಿನಲ್ಲು ನಡೆದಿದೆ ಅಮಾನುಷ ರೇಪ್ ಹತ್ಯೆ)

ಮೃತ ಯುವತಿಯ ಹೊಟ್ಟೆಯಲ್ಲಿ ಆ್ಯಸಿಡ್ ಅಂಶ ಪತ್ತೆಯಾಗಿದೆ. ಆಕೆಯ ಮುಖವನ್ನು ಜಜ್ಜಿ, ಪೆಟ್ರೀಲ್ ಸುರಿದು ಗುರುತು ಪತ್ತೆಯಾಗದಂತೆ ಕೊಲೆ ಮಾಡಲಾಗಿದೆ ಎಂದು ವೈದ್ಯಕೀಯ ವರದಿ ತಿಳಿಸಿದೆ. ಮೃತ ಯುವತಿ ಉತ್ತರಕಾಂಡ ರಾಜ್ಯದವಳಾಗಿರಬಹುದು ಎಂದು ಎಸ್ಎಸ್ ಪಿ ರವೀಂದ್ರಗೌರ್ ಇಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಆರಂಭಿಸಿದ್ದಾರೆ. (PTI)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+