• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುವ ಜನತೆಗೆ ಸ್ಫೂರ್ತಿ ಮರಿಯಪ್ಪನ್ ತಂಗವೇಲು

By ಅನುಷಾ
|

ಚೆನ್ನೈ, ಆ.06 : ಬಡತನ, ಕೌಟುಂಬಿಕ ಸಮಸ್ಯೆ, ಅಂಗ ವೈಕಲ್ಯ ಯಾವುದೂ ಮರಿಯಪ್ಪನ್ ತಂಗವೇಲು ಚಿನ್ನದ ಓಟಕ್ಕೆ ಅಡ್ಡಿಯಾಗಿಲ್ಲ. ಇಂದಿನ ಯುವ ಜನರಿಗೆ ಮರಿಯಪ್ಪನ್ ಸ್ಫೂರ್ತಿ, ರಿಯೋ ಒಲಂಪಿಕ್ ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಮೊದಲ ಭಾರತೀಯ ಮರಿಯಪ್ಪನ್.

ತಮಿಳುನಾಡಿನ ಪೆರಿಯುವಡಗಂಪಟ್ಟಿ ಗ್ರಾಮದಲ್ಲಿ ಮರಿಯಪ್ಪನ್ ತಂಗವೇಲು ಜೂನ್ 28, 1995ರಲ್ಲಿ ಜನಿಸಿದರು. ಕೂಲಿ ಕೆಲಸ ಮಾಡಿಕೊಂಡು ತಾಯಿ ಮನೆಯ ಆರು ಮಕ್ಕಳನ್ನು ಸಾಕುತ್ತಿದ್ದರು. ನಂತರ ತರಕಾರಿ ಅಂಗಡಿ ಇಟ್ಟು ವ್ಯಾಪಾರ ಆರಂಭಿಸಿದರು.

ಮರಿಯಪ್ಪನ್ ಬಾಲ್ಯದ ಜೀವನ ಸುಖದ ಹಾಸಿಗೆಯಾಗಿರಲಿಲ್ಲ. ಸುಮಾರು ಐದು ವರ್ಷದವನಿದ್ದಾಗ ಮರಿಯಪ್ಪನ್ ಜೀವನ ವಿಚಿತ್ರ ತಿರುವು ಪಡೆದುಕೊಂಡಿತು. ರಸ್ತೆ ಅಪಘಾತದಲ್ಲಿ ಮರಿಯಪ್ಪನ್ ಬಲಗಾಲಿಗೆ ಗಂಭೀರ ಗಾಯವಾಯಿತು. ಕುಡಿದ ಮತ್ತಿನಲ್ಲಿ ಬಸ್ಸು ಓಡಿಸಿದವನ ತಪ್ಪಿನಿಂದಾಗಿ ಮರಿಯಪ್ಪನ್ ಸಂಕಷ್ಟ ಅನುಭವಿಸುವಂತಾಯಿತು.

ಮೊಣಕಾಲಿನ ತನಕ ಮರಿಯಪ್ಪನ್ ಬಲಗಾಲನ್ನು ಕತ್ತರಿಸಲಾಯಿತು. ಆದರೆ, ಅವರು ಧೃತಿಗೆಡಲಿಲ್ಲ. ಶಾಲೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಅವರು ಸಕ್ರಿಯರಾಗಿದ್ದರು. ಮರಿಯಪ್ಪನ್ ಪ್ರತಿಭೆ ಗುರುತಿಸಿದ ದೈಹಿಕ ಶಿಕ್ಷಕರು ಹೈಜಂಪ್ ಅಭ್ಯಾಸ ಮಾಡಲು ನೆರವು ನೀಡಿದರು.

ಮರಿಯಪ್ಪನ್ 2016ರ ರಿಯೋ ಒಲಂಪಿಕ್ ನಲ್ಲಿ ಮರಿಯಪ್ಪನ್ ದೇಶಕ್ಕೆ ಚಿನ್ನ ಗೆದ್ದು ತಂದು ಕೊಡುತ್ತಾರೆ ಎಂದು ಯಾರೂ ಉಹಿಸಿರಲಿಲ್ಲ. ಹದಿನಾಲ್ಕು ವರ್ಷವಿದ್ದಾಗ ಮರಿಯಪ್ಪನ್ ಹೈಜಂಪ್ ನಲ್ಲಿ ತಮ್ಮ ಮೊದಲ ತರಬೇತಿ ಮುಗಿಸಿದರು. ಭಾರತೀಯ ಪ್ಯಾರಾ ನ್ಯಾಷನಲ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮರಿಯಪ್ಪನ್ ಪ್ರತಿಭೆಯನ್ನು ಗುರುತಿಸಲಾಯಿತು. ನಂತರ ಬೆಂಗಳೂರಿಗೆ ತರಬೇತಿಗಾಗಿ ಕಳುಹಿಸಲಾಯಿತು.

ಪುರುಷರ ಐದುರಿಂದ-ಹತ್ತು ಅಡಿ ಲಾಂಗ್ ಜಂಪ್ ನಲ್ಲಿ ಚಿನ್ನ ಗೆದ್ದಿರುವ ಮರಿಯಪ್ಪನ್ ದೇಶದ ಯುವ ಜನರಿಗೆ ಮಾದರಿ. ಕ್ರೀಡೆಯ ಹೊರತಾಗಿಯೂ ಮರಿಯಪ್ಪನ್ ಬ್ಯುಸಿನೆಸ್ ಅಡ್ಮಿನಿಷ್ಟ್ರೇಶನ್ ನಲ್ಲಿ ಪದವಿ ಪಡೆದಿದ್ದಾರೆ. ಕ್ರೀಡೆಗೆ ಮರಿಯಪ್ಪನ್ ನೀಡಿರುವ ಕೊಡುಗೆಗಾಗಿ 2017ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

English summary
Mariyappan Thangavelu is an inspiration in every sense. Poverty, a broken family, even a disabled limb could not stop this golden athlete from achieving and following his dream. Mariyappan Thangavelu became the first Indian Paralympic gold medallist since 2004.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X