ಬಿಜೆಪಿ ಶಾಸಕನನ್ನು ಗಲ್ಲಿಗೇರಿಸಿ: ಉನ್ನಾವೋ ಅತ್ಯಾಚಾರ ಸಂತ್ರಸ್ತೆ
ಲಕ್ನೋ, ಮೇ 11: "ನನ್ನ ಮೇಲೆ ಅತ್ಯಾಚಾರ ಎಸಗಿದ ನನ್ನ ತಂದೆಯನ್ನು ಕೊಂದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೇನ್ಗಾರ್ ಅವರನ್ನು ಗಲ್ಲಿಗೇರಿಸಿ" ಎಂದು ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಆಗ್ರಹಿಸಿದ್ದಾರೆ.
ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಶಾಸಕರ ಪಾತ್ರವಿದೆ ಎಂಬುದನ್ನು ಸಿಬಿಐ ಖಚಿತಪಡಿಸುತ್ತಿದ್ದಂತೆಯೇ ಸಂತ್ರಸ್ತೆ ಈ ರೀತಿ ಹೇಳಿಕೆ ನೀಡಿದ್ದಾರೆ.

2017 ರ ಜೂನ್ ನಲ್ಲಿ ನಡೆದ ತ್ಯಾಚಾರ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಈ ಪ್ರಕರಣವನ್ನು ಉತ್ತರ ಪ್ರದೇಶದ ಸರ್ಕಾರ ಕೇಂದ್ರ ತನಿಖಾ ದಳ(ಸಿಬಿಐ)ಗೆ ವಹಿಸಿತ್ತು. ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಂತ್ರಸ್ತೆಯ ತಂದೆ, ನ್ಯಾಯ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನೆ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿತ್ತು. ಆದರೆ ಅವರು ಪೊಲಿಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು.
We demand protection for our family so that we can give our statement before the court fearlessly. We demand death penalty for Kuldeep Sengar: #Unnao gang-rape case victim's uncle on reports of CBI confirming rape charges against BJP MLA Kuldeep Sengar pic.twitter.com/Pjvku7bJ5B
— ANI UP (@ANINewsUP) May 11, 2018
ಪ್ರಕರಣದಲ್ಲಿ ಶಾಸಕರ ಪಾತ್ರವಿರುವುದನ್ನು ಸಿಬಿಐ ಖಚಿತಪಡಿಸುತ್ತಿದ್ದಂತೆಯೇ, ತಮಗೆ ಭದ್ರತೆ ನೀಡಬೇಕೆಂದು ಸಂತ್ರಸ್ತೆ ಮತ್ತು ಕುಟುಂಬ ಬೇಡಿಕೆ ಇಟ್ಟಿದೆ. ಈ ಕುರಿತು ಮಾತನಾಡಿದ ಸಂತ್ರಸ್ತೆಯ ಚಿಕ್ಕಪ್ಪ, 'ನಮ್ಮ ಕುಟುಂಬಕ್ಕೆ ಭದ್ರತೆ ನೀಡಬೇಕೆಂದು ನಾವು ಸರ್ಕಾರವನ್ನು ಮನವಿ ಮಾಡಿಕೊಳ್ಳುತ್ತೇವೆ, ಭದ್ರತೆ ಇದ್ದರೆ ಮಾತ್ರವೇ ನಾವು ಸೇನ್ಗಾರ್ ವಿರುದ್ಧ ಧೈರ್ಯವಾಗಿ ಹೇಳಿಕೆ ನೀಡುವುದಕ್ಕೆ ಸಾಧ್ಯ. ಕುಲ್ದೀಪ್ ಅವರಿಗೆ ಮರಣದಂಡನೆ ವಿಧಿಸಬೇಕೆಂದು ನಾವು ಕೇಳಿಕೊಳ್ಳುತ್ತೇವೆ' ಎಂದಿದ್ದಾರೆ.












Click it and Unblock the Notifications