ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಮಾಜಿ ನಾಯಕನಿಗೆ ಮಧ್ಯಂತರ ಜಾಮೀನು

ಲಕ್ನೋ, ಜನವರಿ 16: 2017ರಲ್ಲಿ ಉತ್ತರ ಪ್ರದೇಶದ ಉನ್ನಾವೊದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ಆತನ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ದೆಹಲಿ ಹೈಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ ಮತ್ತು ಪೂನಂ ಎ ಬಂಬಾ ಅವರ ಪೀಠವು ಜನವರಿ 27ರಿಂದ ಫೆಬ್ರವರಿ 10ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಸೆಂಗರ್ ಅವರ ಬಿಡುಗಡೆಯ ಅವಧಿಯಲ್ಲಿ ಪ್ರತಿದಿನವೂ ಸಂಬಂಧಪಟ್ಟ ಎಸ್‌ಎಚ್‌ಒಗೆ ವರದಿ ಮಾಡಲು ಮತ್ತು ತಲಾ ₹ 1 ಲಕ್ಷದ ಎರಡು ಶ್ಯೂರಿಟಿಗಳನ್ನು ಒದಗಿಸುವಂತೆ ಕೇಳಿದೆ.

ಕುಲದೀಪ್ ಸಿಂಗ್ ಸೆಂಗಾರ್‌ ಪರ ವಾದಿಸಿದ್ದ ಹಿರಿಯ ವಕೀಲರಾದ ಎನ್ ಹರಿಹರನ್ ಮತ್ತು ಪಿ ಕೆ ದುಬೆ, ಗೋರಖ್‌ಪುರ ಮತ್ತು ಲಕ್ನೋದಲ್ಲಿ ವಿವಾಹ ವಿಧಿವಿಧಾನಗಳು ಮತ್ತು ಸಮಾರಂಭಗಳು ನಡೆಯಲಿದ್ದು, ಕುಟುಂಬದ ಏಕೈಕ ಪುರುಷನಾಗಿರುವ ಕಾರಣ ಅವರು ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Unnao rape case: Ex-BJP leader Kuldeep Singh Sengar granted interim bail

ಫೆಬ್ರವರಿ 8ರಂದು ವಿವಾಹ ನಡೆಯಲಿದೆ ಎಂದು ಸೆಂಗಾರ್ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಸಿಬಿಐ ಪರ ವಕೀಲರು ಏಜೆನ್ಸಿಯಿಂದ ವಸ್ತುಸ್ಥಿತಿಯ ವರದಿಯನ್ನು ಸಲ್ಲಿಸಲಾಗಿದೆ ಮತ್ತು ಮದುವೆ ಸಮಾರಂಭಗಳಿಗಾಗಿ ಎರಡು ಹಾಲ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿದುಬಂದಿದೆ. ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸೆಂಗಾರ್ ಸಲ್ಲಿಸಿರುವ ಮೇಲ್ಮನವಿ ಈಗಾಗಲೇ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.

ತನಗೆ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಡಿಸೆಂಬರ್ 16, 2019ರ ತೀರ್ಪನ್ನು ರದ್ದುಗೊಳಿಸುವಂತೆ ಅವರು ಕೋರಿದ್ದಾರೆ. ಸೆಂಗಾರ್ ಅವರು ಡಿಸೆಂಬರ್ 20, 2019 ರ ಆದೇಶವನ್ನು ಪರಿಶೀಲಿಸುವಂತೆ ಕೋರಿದ್ದಾರೆ. ವಿಚಾರಣಾ ನ್ಯಾಯಾಲಯವು ಸೆಂಗಾರ್‌ನನ್ನು ವಿವಿಧ ನಿಬಂಧನೆಗಳ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಅವರ ಮೇಲೆ ಐಪಿಸಿಯ ಸೆಕ್ಷನ್ 376 (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದು ತನ್ನ ಅಧಿಕೃತ ಸ್ಥಾನದ ಲಾಭವನ್ನು ಪಡೆದು ತನ್ನ ವಶದಲ್ಲಿರುವ ಮಹಿಳೆಯ ಮೇಲೆ ಅತ್ಯಾಚಾರ ಎಸಗುವ ಸಾರ್ವಜನಿಕ ಸೇವಕನು ಮಾಡಿದ ಅತ್ಯಾಚಾರದ ಅಪರಾಧವನ್ನು ವ್ಯವಹರಿಸುತ್ತದೆ.

ಅಪರಾಧಿಯು ಅವನ ಸ್ವಾಭಾವಿಕ ಜೈವಿಕ ಜೀವನದ ಕಾಲಕ್ಕಾಗಿ ಜೈಲಿನಲ್ಲಿಯೇ ಇರುತ್ತಾನೆ. ಅಲ್ಲದೆ ಅವನಿಗೆ ₹ 25 ಲಕ್ಷ ದಂಡವನ್ನು ವಿಧಿಸಿ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ಅದು ನೀಡಿದೆ. ಅವನು 2017ರಲ್ಲಿ ಬಾಲಕಿ ಅಪ್ರಾಪ್ತಳಾಗಿದ್ದಾಗ ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಉನ್ನಾವೊದಿಂದ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಿದ ನಂತರ ಆಗಸ್ಟ್ 5, 2019 ರಂದು ಪ್ರಾರಂಭವಾದ ವಿಚಾರಣೆಯನ್ನು ದಿನನಿತ್ಯದ ಆಧಾರದ ಮೇಲೆ ನಡೆಸಲಾಗಿದೆ.

Unnao rape case: Ex-BJP leader Kuldeep Singh Sengar granted interim bail

ಅತ್ಯಾಚಾರ ಸಂತ್ರಸ್ತೆ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಬರೆದ ಪತ್ರವನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಉನ್ನಾವ್ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎಲ್ಲಾ ಐದು ಪ್ರಕರಣಗಳನ್ನು ಲಕ್ನೋ ನ್ಯಾಯಾಲಯದಿಂದ ದೆಹಲಿಯ ನ್ಯಾಯಾಲಯಕ್ಕೆ 2019 ರ ಆಗಸ್ಟ್ 1 ರಂದು ದೈನಂದಿನ ಆಧಾರದ ಮೇಲೆ ವಿಚಾರಣೆಯನ್ನು ನಡೆಸಲು ಮತ್ತು 45 ದಿನಗಳಲ್ಲಿ ಅದನ್ನು ಪೂರ್ಣಗೊಳಿಸಲು ನಿರ್ದೇಶನಗಳೊಂದಿಗೆ ವರ್ಗಾಯಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+