ಅನ್‌ಲಾಕ್ 4 ಮಾರ್ಗಸೂಚಿ: ಶಾಲೆ, ಚಿತ್ರಮಂದಿರ ತೆರೆಯಲು ಒಪ್ಪಿಗೆ ಇಲ್ಲ
ನವದೆಹಲಿ, ಆಗಸ್ಟ್ 29: ಕೇಂದ್ರ ಸರ್ಕಾರವು ಅನ್‌ಲಾಕ್ 4 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಅನ್‌ಲಾಕ್ 4 ನಿಯಮ ಘೋಷಣೆಯಾಗಿದ್ದು, ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.ಹಂತ ಹಂತವಾಗಿ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳಲಿದೆ. ರೈಲಿನಲ್ಲಿ 100 ಮಂದಿ ಮಾತ್ರ ಸಂಚರಿಸಬಹುದಾಗಿದೆ.
ಶಾಲೆ, ಕಾಲೇಜುಗಳು, ಈಜುಕೊಳ, ಥಿಯೇಟರ್‌ಗಳನ್ನು ತೆರೆಯುವುದಿಲ್ಲ. ಸೆಪ್ಟೆಂಬರ್ 30ರವರೆಗೂ ಈ ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

-ಮೆಟ್ರೋ ರೈಲು ಸಂಚಾರಕ್ಕೆ ಅಸ್ತು ಎಂದಿದ್ದು, ಶಾಲಾ, ಕಾಲೇಜುಗಳು ಎಂದಿನಂತೆ ಮುಚ್ಚಿರಲಿವೆ ಎಂದು ತಿಳಿಸಿದೆ. ಆನ್‌ಲೈನ್ ಶಿಕ್ಷಣ ಮುಂದುವರೆಯಲಿದೆ. ಈ ನಿಯಮ ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿರಲಿದೆ.
-ರಾಜ್ಯಗಳು ಹಾಗೂ ಯೂನಿವರ್ಸಿಟಿಗಳು ಶೇ.50ರಷ್ಟು ಶಿಕ್ಷಕರನ್ನೊಳಗೊಂಡು ಕಾಲೇಜು ತೆರೆಯಬಹುದಾಗಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಸೆಪ್ಟೆಂಬರ್ 21ರ ಬಳಿಕ ಕಾಲೇಜುಗಳನ್ನು ತೆರೆಯಬಹುದು.
-9 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಮೇರೆಗೆ ಶಾಲೆಗಳಿಗೆ ತೆರಳಬಹುದಾಗಿದೆ.
-ಪಿಎಚ್‌ಡಿ, ಪಿಜಿ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಹೋಗಲು ಅವಕಾಶ ನೀಡಲಾಗಿದೆ.
-ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ
-ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಏನೇ ಕಾರ್ಯಕ್ರಮಗಳಿರಲಿ 100ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
-ಸಿನಿಮಾ ಹಾಲ್, ಈಜುಕೊಳ ಸೇರಿದಂತೆ ಹಲವು ಸ್ಥಳಗಳು ಬಂದ್ ಇರಲಿವೆ.
-ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ಓಡಾಡಲು ಯಾವುದೇ ಅನುಮತಿ ಇರುವುದಿಲ್ಲ.
- ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರಮುಖವಾಗಿದೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ. ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕಿದೆ.












Click it and Unblock the Notifications