ನಾನು ತಪ್ಪು ಮಾಡ್ತೇನೆ, ಆದ್ರೆ ಮೋದಿಯಂತೆ ಅಲ್ಲ: ರಾಹುಲ್ ಗಾಂಧಿ

Posted By:
Subscribe to Oneindia Kannada

ಅಹಮದಾಬಾದ್, ಡಿಸೆಂಬರ್ 06: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅದರೆ, ತಪ್ಪೊಪ್ಪಿಗೆ ಜತೆಗೆ ಪ್ರಧಾನಿ ಮೋದಿ ಅವರ ಕಾಲೆಳೆದಿದ್ದಾರೆ.

'ತಪ್ಪು ಮಾಡ್ತೇನೆ, ಮನುಷ್ಯರಾದ ಮೇಲೆ ತಪ್ಪು ಮಾಡುತ್ತೇವೆ, ಆದರೆ, ಪ್ರಧಾನಿ ಮೋದಿಯಂತೆ ಅಲ್ಲ', ನನ್ನ ಟ್ವೀಟ್ ತಪ್ಪನ್ನು ನನಗೆ ತೋರಿಸಿದ ಸಾರ್ವಜನಿಕರಿಗೆ ನನ್ನ ಧನ್ಯವಾದ ಅರ್ಪಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮೋದಿ ಕಾಲೆಳೆಯೋ ರಭಸದಲ್ಲಿ 'ಲೆಕ್ಕ' ತಪ್ಪಿದ ರಾಹುಲ್ ಗಾಂಧಿ!

Unlike Narendrabhai, I do Make Mistakes: Rahul Gandhi on Tweet With Wrong Math

ನರೇಂದ್ರಭಾಯಿ ಅವರಂತೆ ನಾನು ಮನುಷ್ಯ, ನಾವು ತಪ್ಪು ಮಾಡುತ್ತೇವೆ, ತಪ್ಪು ಮಾಡುವುದು ತಿದ್ದಿಕೊಳ್ಳುವುದರಿಂದಲೇ ಜೀವನ ಕುತೂಹಲಮಯವಾಗಿರುತ್ತದೆ. ನನ್ನನ್ನು ನಾನು ತಿದ್ದಿಕೊಳ್ಳಲು ಇದರಿಂದ ಸಹಕಾರಿ ಎಂಬರ್ಥದಲ್ಲಿ ರಾಹುಲ್ ಅವರ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಮೋದಿಗೆ ದಿನಕ್ಕೊಂದು ಪ್ರಶ್ನೆ : ರಾಹುಲ್ ಕೇಳಿದ 4 ಪ್ರಶ್ನೆಗಳು!

ದಣಿವಿಲ್ಲದೆ ನಿರಂತರವಾಗಿ ಗುಜರಾತ್ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಲೆಳೆಯುವ ರಭಸದಲ್ಲಿ ಟ್ವಿಟ್ಟರ್ ನಲ್ಲಿ ತಪ್ಪು ಲೆಕ್ಕ ಹೇಳಿ ನಗೆಪಾಟಲಿಗೀಡಾಗಿದ್ದರು.

ಮೋದಿ ಪ್ರಧಾನಿಯಾದ ಮೇಲೆ ದಿನಬಳಕೆಯ ವಸ್ತುಗಳ ಬೆಲೆ ಎಷ್ಟು ಜಾಸ್ತಿಯಾಗಿದೆ ಎಂಬುದನ್ನು ಪಟ್ಟಿ ಮಾಡಿದ್ದ ರಾಹುಲ್ ಗಾಂಧಿ, ಗ್ಯಾಸ್ ಸಿಲಿಂಡರ್ ಬೆಲೆ 2014 ರಲ್ಲಿ 414 ರೂ. ಇದ್ದಿದ್ದು, 2017ರಲ್ಲಿ 742 ರೂ. ಆಗಿದೆ. ಅಂದರೆ '179%' ಪ್ರತಿಶತ ದರ ಏರಿಕೆಯಾಗಿದೆ ಎಂದು ಬರೆದಿದ್ದರು. 79%' ಎಂದು ಬರೆಯುವ ಬದಲು "179%" ಎಂದು ಬರೆದಿದ್ದು ಚರ್ಚೆಗೀಡಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress Vice President Rahul Gandhi admitted his mistake and also took potshot at Prime Minister Narendra Modi saying he is a human and bound to make mistake. The Gandhi scion also thanked people for pointing out the tweet goof-up.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ