ಮಂಗಳಮುಖಿಯರು ಇನ್ಮೇಲೆ ಸೀರೆ ಉಡಬಾರದಂತೆ!
ಮಂಗಳಮುಖಿಯರು ಗಂಡಸರು ಉಡುವ ಬಟ್ಟೆಯನ್ನು ತೊಡಬೇಕು, ಸೀರೆಯನ್ನು ಮಾತ್ರ ಉಟ್ಟುಕೊಳ್ಳಬಾರದು ಎಂದು ಕೇಂದ್ರ ಸಚಿವ ರಾಮದಾಸ ಅಠಾವಳೆ ಹೇಳಿದ್ದಾರೆ.
ನವದೆಹಲಿ, ಆ 1 (ಪಿಟಿಐ): ಕೇಂದ್ರ ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಸಮ್ಮೇಳನದಲ್ಲಿ ಕೇಂದ್ರ ಸಚಿವ ರಾಮದಾಸ ಅಠವಲೆ , ಮಂಗಳಮುಖಿಯರ ಬಗ್ಗೆ ನೀಡಿದ ಹೇಳಿಕೆ ಹೊಸ ಚರ್ಚೆಗೆ ನಾಂದಿ ಹಾಡುವ ಸಾಧ್ಯತೆಯಿದೆ.
ಮಂಗಳಮುಖಿಯರು ಗಂಡಸರು ಉಡುವ ಬಟ್ಟೆಯನ್ನು ತೊಡಬೇಕು, ಸೀರೆಯನ್ನು ಮಾತ್ರ ಉಟ್ಟುಕೊಳ್ಳಬಾರದು ಎನ್ನುವುದು ನನ್ನ ಸಲಹೆ. ಆದರೆ ಅವರು ಯಾವ ಬಟ್ಟೆಯನ್ನು ಧರಿಸಬೇಕು ಎನ್ನುವುದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಅಠವಲೆ ಹೇಳಿದ್ದಾರೆ.

ಕೇಂದ್ರ ಸರಕಾರ ಮಂಗಳಮುಖಿಯರ ಹಿತರಕ್ಷಣೆಗೆ ಬದ್ದವಾಗಿದೆ, ಈ ಸಂಬಂಧ ಮಸೂದೆಯೊಂದನ್ನು ಈಗಾಗಲೇ ಮಂಡಿಸಲಾಗಿದ್ದು ಎಲ್ಲಾ ಪಕ್ಷಗಳ ಸಹಕಾರ ಪಡೆದು ಅನುಮೋದನೆ ಪಡೆಯಲಾಗುವುದು ಎಂದು ಅಠವಲೆ ಹೇಳಿದ್ದಾರೆ.
ಮಂಗಳಮುಖಿಯರು ಉಡುವ ಬಟ್ಟೆಯ ಬಗ್ಗೆ ಆಪಸ್ವರ ಎತ್ತುವುದು ನನ್ನ ಉದ್ದೇಶವಲ್ಲ, ಆದರೂ ಸೀರೆಯನ್ನು ಮಾತ್ರ ಉಟ್ಟುಕೊಳ್ಳಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಅಠವಲೆ ಹೇಳಿದ್ದಾರೆ.
ವಂದೇ ಮಾತರಂ ಅನ್ನು ಎಲ್ಲರೂ ಪಠಿಸಬೇಕು, ಒಂದು ವೇಳೆ ಪಠಿಸದಿದ್ದರೆ ಅದರಿಂದಾಗುವ ತೊಂದರೆಯೇನು ಎಂದು ಅಠವಲೆ ಹೇಳಿದ್ದರು. ಜೊತೆಗೆ, ಭಾರತೀಯ ಕ್ರಿಕೆಟ್ ತಂಡದ ಆಯ್ಕೆಯಲ್ಲೂ ಮೀಸಲಾತಿ ಜಾರಿಗೆ ತರಬೇಕು ಎನ್ನುವ ವಿವಾದಕಾರಿ ಹೇಳಿಕೆಯನ್ನು ಅಠವಲೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications