ಕನ್ನಡಕ್ಕಾಗಿ ಕೈ ಎತ್ತಿದ ಕೇಂದ್ರ ಸಚಿವ ರಾಜನಾಥ್ ಸಿಂಗ್
ನವದೆಹಲಿ, ಸೆಪ್ಟೆಂಬರ್ 21: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ, ಅದು ಹೇಗೆ ಅಂತೀರಾ ಟ್ವಿಟ್ಟರ್ ನಲ್ಲಿ ತಮ್ಮ ಹೆಸರನ್ನು ಕನ್ನಡದಲ್ಲಿ ಬರೆದುಕೊಳ್ಳುವ ಮೂಲಕ ಕನ್ನಡ ಪ್ರೇಮವನ್ನು ಸಾರಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳ ಪರಿಷತ್ ಸಭೆ ನಡೆಸಲು ಗೇಹ ಸಚಿವರು ಸೆ.18ರಂದು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಟ್ವಿಟ್ಟರ್ ನಲ್ಲಿ ಅವರ ಹೆಸರನ್ನು ಕನ್ನಡದಲ್ಲೇ ಬರೆದುಕೊಂಡಿದ್ದರು. ಈ ಕುರಿತ ಸ್ಕ್ರೀನ್ ಶಾಟ್ ನ್ನು ಸಾಮಾಜಿಕ ಜಾಲತಾಣಗಳ ವಿಶ್ಲೇಷಕ ಕಿರಣ್ ಕುಮಾರ್ ಎಸ್ ಹಂಚಿಕೊಂಡು ಅಭಿನಂದಿಸಿದ್ದರು.
Kiranji, I have deep respect for all Indian languages. Unfortunately I can’t speak most of them. So I’m trying to learn how to write my name in other Indian languages. https://t.co/oHBTY6shhU
— राजनाथ सिंह (@rajnathsingh) September 19, 2018
ಇದಕ್ಕೂ ಪ್ರತಿಕ್ರಿಯಿಸಿರುವ ರಾಜನಾಥ್ ಸಿಂಗ್ ಕಿರಣ್ ಜಿ ನನಗೆ ಎಲ್ಲ ಭಾರತೀಯ ಭಾಷೆಗಳ ಮೇಲೆ ಅಪಾರ ಗೌರವವಿದೆ, ದುರದೃಷ್ಟ ವಶಾತ್ ದೇಶದ ಬಹುತೇಕ ಭಾಷೆಗಳನ್ನು ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಆರೆ ಭಾರತೀಯ ಭಾಷೆಗಳಲ್ಲಿ ನನ್ನ ಹೆಸರು ಬರೆದುಕೊಳ್ಳಲು ಕಲಿತುಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಗೃಹ ಸಚಿವರ ಈ ಸ್ಪಂದನೆಗೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರಾಗಿ ಕನ್ನಡದ ಮೇಲೆ ತೋರಿರುವ ಪ್ರೀತಿಯನ್ನು ಕನ್ನಡಿಗರು ಹೃದಯಪೂರ್ವಕವಾಗಿ ಶ್ಲಾಘಿಸಿದ್ದಾರೆ ಮತ್ತು ಸ್ವಾಗತಿಸಿದ್ದಾರೆ.












Click it and Unblock the Notifications