ಭಾರತದ ಮೊದಲ ಎಲಿವೇಟೆಡ್ ರಸ್ತೆ ಯೋಜನೆ ದ್ವಾರಕಾ ಎಕ್ಸ್‌ಪ್ರೆಸ್‌ವೇ ದೃಶ್ಯ ಹಂಚಿಕೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

ನವದೆಹಲಿ, ಸೆಪ್ಟೆಂಬರ್‌ 15: ಇಂಜಿನಿಯರ್‌ಗಳ ದಿನಾಚರಣೆಯಂದು (ಸೆಪ್ಟೆಂಬರ್‌ 15} ಭಾರತದ ಮೊದಲ ಎಲಿವೇಟೆಡ್ ರಸ್ತೆ ಯೋಜನೆ ದ್ವಾರಕಾ ಎಕ್ಸ್‌ಪ್ರೆಸ್‌ವೇ ದೃಶ್ಯವನ್ನ ಕೇಂದ್ರ ಸಚಿವ ನಿತಿನ್‌ ಗಡ್ಕರ್‌ ಅವರು ಟ್ವೀಟರ್‌ ನಲ್ಲಿ ಹಂಚಿಕೊಂಡಿದ್ದಾರೆ.

ದೂರದೃಷ್ಟಿಯಿಂದಾಗಿ ಈ ದ್ವಾರಕಾ ಎಕ್ಸ್‌ಪ್ರೆಸ್‌ವೇ ಯನ್ನು ನಿರ್ಮಿಸಲಾಗಿದೆ ಎಂದು ನಿತಿನ್‌ ಗಡ್ಕರ್‌ ಹೇಳಿದ್ದು, ಭಾರತದ ಮೊದಲ ಎಲಿವೇಟೆಡ್ ರಸ್ತೆ ಯೋಜನೆ ದ್ವಾರಕಾ ಎಕ್ಸ್‌ಪ್ರೆಸ್‌ವೇ ಆಗಿದ್ದು, ಸಿಂಗಲ್‌ ಪಿಲ್ಲರ್‌ ಗಳ ಮೇಲೆ ರೋಡ ಮಾಡಿಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ದ್ವಾರಕಾ ಎಕ್ಸ್‌ಪ್ರೆಸ್‌ವೇ ನಲ್ಲಿ ಮೂರು ಹಂತದ ಇಂಟರ್‌ ಚೇಂಜ್‌ ಗಳು 9 ಜಾಗದಲ್ಲಿ ಇದೆ ಎಂದು ಹೇಳಿದ್ದಾರೆ.

Union Minister Nitin Gadkari shared the video of Dwarka Expressway

ಇನ್ನೂ ಅತೀ ಹೆಚ್ಚಿನ ಟ್ರಾಫಿಕ್‌ ಸಮಸ್ಯೆಯನ್ನ ತಪ್ಪಿಸುವ ನಿಟ್ಟಿನಲ್ಲಿ ಭಾರತದ ಮೊದಲ ಎಲಿವೇಟೆಡ್ ರಸ್ತೆ ಯೋಜನೆ ದ್ವಾರಕಾ ಎಕ್ಸ್‌ಪ್ರೆಸ್‌ವೇ ಯನ್ನ ಮಾಡಲಾಗಿದ್ದು, ನಾಲ್ಕು ಹಂತದ ಇಂಟರ್‌ ಚೇಂಜ್‌ ಎರಡು ಕಡೆ ಇದೆ. ಮೂರು ಹಂತದ ಇಂಟರ್‌ ಚೇಂಜ್‌ ಗಳು 9 ಕಡೆ ಇದೆ ಎಂದು ಹೇಳಿದ್ದಾರೆ. ಹರಿಯಾಣದಿಂದ ಮುಂಬೈವರೆಗೂ ಜನ ಆರಾಮವಾಗಿ ಪ್ರಯಾಣ ಮಾಡಬೇಕು ಎಂಬ ಉದ್ದೇಶದಿಂದ ದ್ವಾರಕಾ ಎಕ್ಸ್‌ಪ್ರೆಸ್‌ವೇ ನಿರ್ಮಾಣಲಾಗಿದೆ . ಇದರಿಂದಾಗಿ 50 ರಷ್ಟು ಟ್ರಾಫಿಕ್‌ ಸಮಸ್ಯೆಯನ್ನ ಕಡಿಮೆಯಾಗುತ್ತದೆ. ದೆಹಲಿಯಿಂದ ಏರ್ಪೋರ್ಟ್‌ ಗೆ ಹೋಗುವವರೆಗೂ ಸಹ ಟ್ರಾಫಿಕ್‌ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಎಂಜಿನಿಯರ್ ಗಳ ದಿನ; ಪ್ರಧಾನಿ ಮೋದಿ ಅವರಿಂದ ಶುಭಾಶಯ

ಸೆಪ್ಟೆಂಬರ್ 15 ನ್ನು ಭಾರತದಲ್ಲಿ ಎಂಜಿನಿಯರ್ಸ್ ಡೇ ಎಂದು ಆಚರಣೆ ಮಾಡಲಾಗುತ್ತದೆ. ಭಾರತದ ಮಹಾನ್ ಎಂಜಿನಿಯರ್ ಮತ್ತು ಭಾರತ ರತ್ನ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನೇ ದೇಶದಲ್ಲಿ ಇಂಜಿನಿಯರ್ಸ್ ಡೇ ಎಂದು ಆಚರಿಸುತ್ತಾರೆ

ಇನ್ನೂ ಇಂಜಿನಿಯರ್‌ ದಿನದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮೂಕಕ ಶುಭಕೋರಿದ್ದಾರೆ. ದೂರದೃಷ್ಟಿ ಹೊಂದಿದ್ದ ಎಂಜಿನಿಯರ್ ಮತ್ತು ಮುತ್ಸದ್ದಿ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ನಾವು ಎಂಜಿನಿಯರ್ ದಿನ ಯಂದು ಗೌರವ ನಮನ ಸಲ್ಲಿಸುತ್ತೇವೆ. ಆವಿಷ್ಕಾರ ಮತ್ತು ದೇಶ ಸೇವೆ ವಿಚಾರದಲ್ಲಿ ಅವರು ಎಲ್ಲಾ ತಲೆಮಾರುಗಳಿಗೂ ಸ್ಫೂರ್ತಿಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಪ್ರಧಾನಿ ಮೋದಿಯವರು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ವಿಶ್ವೇಶ್ವರಯ್ಯನವರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+