ಏರ್ ಇಂಡಿಯಾ ಬಂಡವಾಳ ಹಿಂತೆಗೆತ, ವೇತನ ಆಯೋಗ ಶಿಫಾರಸು ಒಪ್ಪಿದ ಕೇಂದ್ರ
ನವದೆಹಲಿ, ಜೂನ್ 28: ಬುಧವಾರ ಕೇಂದ್ರ ಸಂಪುಟ ಸಭೆ ನಂತರ ಅಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಅದರ ಪ್ರಮುಖಾಂಶಗಳು ಹೀಗಿವೆ. ಈ ಪೈಕಿ ಏಳನೇ ವೇತನ ಆಯೋಗದ ಶಿಫಾರಸಿಗೆ ಒಪ್ಪಿಗೆ, ಏರ್ ಇಂಡಿಯಾ ಬಂಡವಾಳ ಹಿಂತೆಗೆತ ಪ್ರಮುಖವಾಗಿವೆ.
ಏಳನೇ ವೇತನ ಆಯೋಗದ ಶಿಫಾರಸುಗಳು ಜುಲೈ ಒಂದರಿಂದಲೇ ಜಾರಿಗೆ ಬರಲಿವೆ.
* ಏರ್ ಇಂಡಿಯಾದಲ್ಲಿ ಬಂಡವಾಳ ಹಿಂತೆಗೆತಕ್ಕೆ ಕೇಂದ್ರ ಸಂಪುಟದ ತಾತ್ವಿಕ ಒಪ್ಪಿಗೆ

* ಉತ್ತರಪ್ರದೇಶದ ಚಕೇರಿ-ಅಲಹಾಬಾದ್ ರಾಷ್ಟ್ರೀಯ ಹೆದ್ದಾರಿ ಎರಡನ್ನು ಆರು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿ
* ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಮೂವತ್ನಾಲ್ಕು ಪರಿಷ್ಕರಣೆಯೊಂದಿಗೆ ಒಪ್ಪಿಕೊಂಡ ಸಂಪುಟ
* ಏರ್ ಇಂಡಿಯಾದಲ್ಲಿನ ಬಂಡವಾಳ ಹಿಂತೆಗೆತಕ್ಕೆ ಅಂತಿಮ ನಿರ್ಧಾರ, ಮಾಹಿತಿಗಳಿಗಾಗಿ ಸಮಿತಿ ರಚನೆ
* ನೀರು ಸಂರಕ್ಷಣೆ ವಿಚಾರವಾಗಿ ಭಾರತ ಮತ್ತು ಇಸ್ರೇಲ್ ಸೇರಿ ರಾಷ್ಟ್ರೀಯ ಮಟ್ಟದ ಅಭಿಯಾನ ನಡೆಸಲು ಒಪ್ಪಿಗೆ
* ಭದ್ರತಾ ವಿಚಾರವಾಗಿ ಸಹಕಾರಕ್ಕೆ ಭಾರತ ಮತ್ತು ಅಮೆರಿಕ ಮಧ್ಯದ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಗೆ












Click it and Unblock the Notifications