ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕು ಸಾಗಣೆಗೆ ಬರಲಿದೆ ರೈಲ್ವೆ ಲಾಜಿಸ್ಟಿಕ್ಸ್

|
Google Oneindia Kannada News

ನವದೆಹಲಿ, ಜ. 16: ರೈಲ್ವೆಯಲ್ಲಿ ಸರಕು ಸಾಗಣೆ ಪ್ರಮಾಣ ಹೆಚ್ಚಿಸಿ ಆದಾಯ ವೃದ್ಧಿಗೆ ಕೇಂದ್ರ ಸರ್ಕಾರ ಚಿಂತಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಿರುವ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಬಜೆಟ್ ನಲ್ಲಿ ಪ್ರತ್ಯೇಕ ರೈಲ್ವೆ ಲಾಜಿಸ್ಟಿಕ್ಸ್ ಸ್ಥಾಪನೆ ಕಾರ್ಪೋರೇಶನ್ ಸ್ಥಾಪನೆ ಘೋಷಣೆ ಮಾಡಲಿದ್ದಾರೆ.

ಈ ಲಾಜಿಸ್ಟಿಕ್ಸ್ ಕಾರ್ಪೋರೇಶನ್ ರೈಲ್ವೆಯಲ್ಲಿ ಸರಕು ಸಾಗಾಟ ಕೆಲಸವನ್ನು ಸ್ವತಂತ್ರವಾಗಿ ಮಾಡಲಿದೆ. ಅಲ್ಲದೇ ಗ್ರಾಹಕರ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸಲಿದೆ. ಇದರಿಂದ ಜನರಿಗೆ ಅಲೆದಾಟ ತಪ್ಪಲಿದ್ದು ಸಾಗಾಟ ಪ್ರಕ್ರಿಯೆ ಸರಳ ಮತ್ತು ಸುಲಭವಾಗಲಿದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

indian railways

ಗ್ರಾಹಕರ ಮನೆಯಿಂದಲೇ ಸಾಮಗ್ರಿಗಳನ್ನು ಪಿಕ್ ಅಪ್ ಮಾಡುವುದಕ್ಕೂ ಯೋಜನೆ ಸಮ್ಮತಿ ನೀಡಿದೆ. ಕಾರು, ವಾಶಿಂಗ್ ಮಶಿನ್, ದ್ವಿಚಕ್ರ ವಾಹನ ಸಾಗಾಟಕ್ಕೆ ಸದ್ಯ ಜನರು ಹೆಚ್ಚಾಗಿ ರಸ್ತೆ ಸಾರಿಗೆಯನ್ನೇ ಬಳಸುತ್ತಿದ್ದಾರೆ. ಈ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿ ಕಡಿಮೆ ದರದಲ್ಲಿ ಗುಣಮಟ್ಟದ ಸೇವೆ ಒದಗಿಸಲು ಸಿದ್ಧತೆ ನಡೆದಿದೆ. ಯೋಜನೆ ದೇಶದ ಕೈಗಾರಿಕೆ ಬೆಳವವಣಿಗೆಗೂ ನೆರವಾಗಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ದೂರದ ಊರುಗಳಿಗೆ, ರಾಜ್ಯದಿಂದ ರಾಜ್ಯಕ್ಕೆ ಸೂಕ್ಷ್ಮ ವಸ್ತುಗಳನ್ನು ರಸ್ತೆ ಸಾರಿಗೆ ಮೂಲಕ ಸಾಗಿಸುವುದು ಅಪಾಯಕಾರಿ ಮತ್ತು ವೆಚ್ಚದಾಯಕ. ಈ ಹಿನ್ನೆಲೆಯಲ್ಲಿ ರೈಲ್ವೆ ಸಾರಿಗೆಯೇ ಉತ್ತಮ. ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಮಾತ್ರ ಲಾಜಿಸ್ಟಿಕ್ಸ್ ವ್ಯವಸ್ಥೆ ಜಾರಿಯಲ್ಲಿದೆ.

English summary
Raily Minister Suresh Prabhu is likely to announce setting up of Logistics Corporation of India in the Railway Budget 2015-16 next month as a multimodal, one-stop solution for transporting goods from point of origin to point of consumption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X