'ಸಂಪೂರ್ಣ ಸುಳ್ಳು': ಟ್ವಿಟರ್ ಮಾಜಿ ಸಿಇಒ ಜಾಕ್ ಡಾರ್ಸೆ ಮೇಲೆ ಕಿಡಿ ಕಾರಿದ ಸಚಿವ ರಾಜೀವ್ ಚಂದ್ರಶೇಖರ್
ನವದೆಹಲಿ, ಜೂನ್. 13: ಸರ್ಕಾರವನ್ನು ಟೀಕಿಸುವ ಮತ್ತು ರೈತರ ಪ್ರತಿಭಟನೆಗಳ ಕುರಿತು ವರದಿ ಮಾಡುವ ಖಾತೆಗಳನ್ನು ಸೆನ್ಸಾರ್ ಮಾಡಲು ಭಾರತದಿಂದ "ಹಲವು ವಿನಂತಿಗಳನ್ನು" ಬಂದಿದ್ದವು. ಇದನ್ನು ಮಾಡದಿದ್ದರೇ ಟ್ವಿಟ್ಟರ್ ಅನ್ನು ಭಾರತದಲ್ಲಿ ಮುಚ್ಚುವ ಬೆದರಿಕೆ ಹಾಕಲಾಗಿತ್ತು ಎಂದು ಟ್ವಿಟರ್ ಸಹ ಸಂಸ್ಥಾಪಕ ಜಾಕ್ ಡಾರ್ಸೆ ಹೇಳಿದ್ದು, ಅವರ ಆರೋಪವನ್ನು ಸರ್ಕಾರ ಕಟುವಾಗಿ ತಳ್ಳಿಹಾಕಿದೆ.
ಟ್ವೀಟ್‌ನಲ್ಲಿ, ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ತೀವ್ರವಾಗಿ ಕಿಡಿಕಾರಿದ್ದು, "ಜಾಕ್ ಡಾರ್ಸೆಯವರ ಹೇಳಿಕೆ ಸಂಪೂರ್ಣ ಸುಳ್ಳು, ಬಹುಶಃ ಟ್ವಿಟರ್‌ನ ಇತಿಹಾಸದ ಸಂಶಯಾಸ್ಪದ ಅವಧಿಯನ್ನು ಹೊರಹಾಕುವ ಪ್ರಯತ್ನ" ಎಂದಿದ್ದಾರೆ. ಸೋಮವಾರ ಯೂಟ್ಯೂಬ್ ಚಾನೆಲ್ ಬ್ರೇಕಿಂಗ್ ಪಾಯಿಂಟ್ಸ್‌ನಲ್ಲಿ ನೀಡಿದ ಸಂದರ್ಶನದಲ್ಲಿ, ಜಾಕ್ ಡಾರ್ಸೆ ಅವರು ವಿದೇಶಿ ಸರ್ಕಾರಗಳಿಂದ ಯಾವುದೇ ಒತ್ತಡವನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸುವಾಗ ಹೇಳಿಕೆ ನೀಡಿದ್ದರು.

"ಉದಾಹರಣೆಗೆ ಭಾರತದಲ್ಲಿ ರೈತರ ಪ್ರತಿಭಟನೆ ವೇಳೆ ಹಲವಾರು ವಿನಂತಿಗಳನ್ನು ಸ್ವೀಕರಿಸಿ ದೇಶಗಳಲ್ಲಿ ಒಂದಾಗಿದೆ. ನಿರ್ದಿಷ್ಟವಾಗಿ ಸರ್ಕಾರವನ್ನು ಟೀಕಿಸುವ ಪತ್ರಕರ್ತರು, ರೈತರ ಪ್ರತಿಭಟನೆಯ ಟ್ವೀಟ್‌ಗಳನ್ನು ಮುಚ್ಚಲು (ಬ್ಲಾಕ್) ಮಾಡಲು ಭಾರತ ಸರ್ಕಾರ ಟ್ವಿಟರ್‌ಗೆ ತಿಳಿಸಿದೆ. ಇದನ್ನು ಅನುಸರಿಸದಿದ್ದರೆ ಭಾರತದಲ್ಲಿ ಟ್ವಿಟರ್ ಅನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದರು. ಟ್ವಿಟರ್ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುತ್ತೇವೆ ಎಂದರು, ದಾಳಿಯನ್ನು ಮಾಡಿದರು. ಮತ್ತೆ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ!" ಎಂದು ಜಾಕ್ ಡಾರ್ಸೆ ಹೇಳಿದ್ದರು.
2021 ರಲ್ಲಿ ಟ್ವಿಟರ್ ಸಿಇಒ ಸ್ಥಾನವನ್ನು ತ್ಯಜಿಸಿದ ಜ್ಯಾಕ್ ಡಾರ್ಸೆ, ಟರ್ಕಿ ಮತ್ತು ನೈಜೀರಿಯಾದಲ್ಲಿನ ಸರ್ಕಾರಗಳನ್ನು ಉಲ್ಲೇಖಿಸಿದ್ದಾರೆ. ಈ ಹೇಳಿಕೆಗಳನ್ನು ಹಲವು ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದಾರೆ. ಇದನ್ನು ವಿರೋಧಿಸಿ ಸಚಿವ ರಾಜೀವ್ ಚಂದಶೇಖರ್ ಟ್ವೀಟರ್‌ನಲ್ಲಿ ಸುದೀರ್ಘ ಪೋಸ್ಟ್‌ನಲ್ಲಿ ಜ್ಯಾಕ್ ಡಾರ್ಸೆ ವಿರುದ್ಧ ಮಾತನಾಡಿದ್ದಾರೆ.
This is an outright lie by @jack - perhaps an attempt to brush out that very dubious period of twitters history
— Rajeev Chandrasekhar 🇮🇳 (@Rajeev_GoI) June 13, 2023
Facts and truth@twitter undr Dorsey n his team were in repeated n continuous violations of India law. As a matter of fact they were in non-compliance with law… https://t.co/SlzmTcS3Fa
ಸುದೀರ್ಘ ಪೋಸ್ಟ್‌ನಲ್ಲಿ, ರಾಜೀವ್ ಚಂದಶೇಖರ್ "ಜಾಕ್ ಡಾರ್ಸೆ ಮತ್ತು ಅವರ ತಂಡವು ಭಾರತದ ಕಾನೂನಿನ ಪುನರಾವರ್ತಿತ ಮತ್ತು ನಿರಂತರ ಉಲ್ಲಂಘನೆಯಲ್ಲಿದೆ. ವಾಸ್ತವವಾಗಿ, ಅವರು 2020 ರಿಂದ 2022 ರವರೆಗೆ ಪದೇ ಪದೇ ಕಾನೂನನ್ನು ಉಲ್ಲಂಘಿಸಿದ್ದಾರೆ. ಅಂತಿಮವಾಗಿ ಅವರು ನಮ್ಮ ಕಾನೂನು ಅನುಸರಿಸಿದ್ದು, ಜೂನ್ 2022 ಮಾತ್ರ ಎಂದಿದ್ದಾರೆ.

"ಯಾರೂ ಜೈಲಿಗೆ ಹೋಗಲಿಲ್ಲ ಅಥವಾ ಟ್ವಿಟ್ಟರ್ ಅನ್ನು "ಸ್ಥಗಿತಗೊಳಿಸಲಿಲ್ಲ". ಡಾರ್ಸೆ ಟ್ವಿಟರ್ ಆಡಳಿತವು ಭಾರತೀಯ ಕಾನೂನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಲ್ಲಿ ಸಮಸ್ಯೆಯನ್ನು ಹೊಂದಿತ್ತು. ಭಾರತದ ಕಾನೂನುಗಳು ತನಗೆ ಅನ್ವಯಿಸುವುದಿಲ್ಲ ಎಂಬಂತೆ ವರ್ತಿಸಿತು. ಭಾರತವು ಸಾರ್ವಭೌಮ ರಾಷ್ಟ್ರವಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಂಪನಿಗಳು ತನ್ನ ಕಾನೂನುಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವ ಹಕ್ಕನ್ನು ಹೊಂದಿದೆ. 2021 ರ ಜನವರಿಯಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ, ಸಾಕಷ್ಟು ತಪ್ಪು ಮಾಹಿತಿಗಳು ಮತ್ತು ನರಮೇಧದ ವರದಿಗಳು ಖಂಡಿತವಾಗಿಯೂ ನಕಲಿಯಾಗಿದ್ದವು" ಎಂದು ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರವು "ಪ್ಲಾಟ್‌ಫಾರ್ಮ್‌ನಿಂದ ತಪ್ಪು ಮಾಹಿತಿಯನ್ನು ತೆಗೆದುಹಾಕಲು ಬದ್ಧವಾಗಿದೆ. ಏಕೆಂದರೆ ಅದು ನಕಲಿ ಸುದ್ದಿಗಳ ಆಧಾರದ ಮೇಲೆ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಜಾಕ್ ಆಡಳಿತದಲ್ಲಿ ಟ್ವಿಟರ್‌ನಲ್ಲಿ ಪಕ್ಷಪಾತದ ನಡವಳಿಕೆ ಇದ್ದವು. ಭಾರತದಲ್ಲಿನ ವೇದಿಕೆಯಿಂದ ತಪ್ಪು ಮಾಹಿತಿಯನ್ನು ತೆಗೆದುಹಾಕುವಲ್ಲಿ ಅವರು ಸಮಸ್ಯೆಯನ್ನು ಹೊಂದಿದ್ದರು. ಅಮೆರಿಕಾದಲ್ಲಿ ಇದೇ ರೀತಿಯ ಘಟನೆಗಳು ನಡೆದಾಗ ಅವರೇ ಅದನ್ನು ಮಾಡಿದರು. ನಮ್ಮ ಗಮನವು ಭಾರತೀಯ ಕಾನೂನುಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಮಾತ್ರ ಇತ್ತು" ಎಂದು ತಿಳಿಸಿದ್ದಾರೆ.
ಆ ಅವಧಿಯಲ್ಲಿ "ಜಾಕ್ ಡಾರ್ಕೆ ಟ್ವಿಟರ್‌ನ ಅನಿಯಂತ್ರಿತ, ಸ್ಪಷ್ಟವಾಗಿ ಪಕ್ಷಪಾತ ಮತ್ತು ತಾರತಮ್ಯದ ನಡವಳಿಕೆ ಮತ್ತು ಅದರ ಅಧಿಕಾರದ ದುರುಪಯೋಗ ಕುರಿತು ಸಾರ್ವಜನಿಕ ಡೊಮೇನ್‌ನಲ್ಲಿ ಸಾಕಷ್ಟು ಪುರಾವೆಗಳು ಇವೆ. ಡಾರ್ಸೆ ಅವರ ಅಡಿಯಲ್ಲಿ ಟ್ವಿಟರ್ ಕೇವಲ ಭಾರತೀಯ ಕಾನೂನನ್ನು ಉಲ್ಲಂಘಿಸುತ್ತಿಲ್ಲ, ಆದರೆ ಅದು ನಮ್ಮ ಸಂವಿಧಾನದ 14,19 ನೇ ವಿಧಿಯನ್ನು ಉಲ್ಲಂಘಿಸಿದೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಧ್ಯವರ್ತಿಗಳಿಗೆ ನಮ್ಮ ಸರ್ಕಾರದ ನೀತಿಗಳು ಸ್ಪಷ್ಟವಾಗಿವೆ" ಎಂದಿದ್ದಾರೆ.
ನವೆಂಬರ್ 2020 ರಿಂದ ದೇಶದಲ್ಲಿ ನಡೆದ ಐತಿಹಾಸಿಕ ರೈತ ಪ್ರತಿಭಟನೆಯಲ್ಲಿ ಸಾವಿರಾರು ರೈತರು ದೆಹಲಿ ಗಡಿ ಬಿಂದುಗಳಲ್ಲಿ ಧರಣಿ ಮಾಡಿದ್ದರು, ಇದರಲ್ಲಿ 750ಕ್ಕೂ ಹೆಚ್ಚು ರೈತರು ತಮ್ಮ ಜೀವ ಕಳೆದುಕೊಂಡರು. ಇದಾದ ನಂತರ ನವೆಂಬರ್ 2021 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು.












Click it and Unblock the Notifications