'ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಜೋಡಣೆ ಶೀಘ್ರದಲ್ಲೇ ಕಡ್ಡಾಯ'
ವಾಹನ ಚಾಲನ ಪರವಾನಗಿಗೆ (ಡ್ರೈವಿಂಗ್ ಲೈಸೆನ್ಸ್) ಆಧಾರ್ ಜೋಡಣೆ ಮಾಡುವುದನ್ನು ಕೇಂದ್ರ ಸರಕಾರವು ಸದ್ಯದಲ್ಲೇ ಕಡ್ಡಾಯ ಮಾಡಲಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಲವ್ಲಿ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಅವರು, ಡ್ರೈವಿಂಗ್ ಲೈಸೆನ್ಸ್ ಜತೆಗೆ ಆಧಾರ್ ಜೋಡಣೆ ಕಡ್ಡಾಯ ಮಾಡಿ, ಕಾನೂನು ತರುತ್ತೇವೆ ಎಂದಿದ್ದಾರೆ.
ಸದ್ಯಕ್ಕೆ ಏನಾಗುತ್ತಿದೆ ಎಂದರೆ, ಅಪಘಾತ ಮಾಡಿದ ವ್ಯಕ್ತಿಯು ಆ ಸ್ಥಳದಿಂದ ನಾಪತ್ತೆಯಾಗಿ, ನಕಲಿ ಲೈಸೆನ್ಸ್ ಪಡೆಯಲು ಸಾಧ್ಯವಾಗುತ್ತಿದೆ. ಆಧಾರ್ ಜೋಡಣೆ ಮಾಡುವುದರಿಂದ ಹೆಸರು ಬದಲಿಸಿಕೊಳ್ಳಬಹುದು. ಆದರೆ ಬಯೋಮೆಟ್ರಿಕ್ಸ್ ಬದಲಾವಣೆ ಸಾಧ್ಯವಿಲ್ಲ. ಐರಿಸ್, ಬೆರಳಚ್ಚು ಬದಲಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಡೂಪ್ಲಿಕೇಟ್ ಲೈಸೆನ್ಸ್ ಗೆ ಅರ್ಜಿ ಹಾಕಿಕೊಂಡಾಗ ಅದಾಗಲೇ ದಾಖಲಾಗಿರುವ ಮಾಹಿತಿಯು ಈ ವ್ಯಕ್ತಿ ಬಳಿ ಲೈಸೆನ್ಸ್ ಇದೆ ಎಂಬುದನ್ನು ತೋರಿಸುತ್ತದೆ. ಜತೆಗೆ ಹೊಸದನ್ನು ನೀಡಬಾರದು ಎಂದು ಸೂಚಿಸುವುದಾಗಿ ಆಧಾರ್ ಜೋಡಣೆಯ ಮಹತ್ವವನ್ನು ತಿಳಿಸಿದ್ದಾರೆ. ಈಚೆಗೆ ಡಿಜಿಟಲ್ ಪಾವತಿ ವ್ಯವಹಾರಗಳು ಹಲವು ಪಟ್ಟು ಹೆಚ್ಚಾಗಿವೆ ಎಂದು ತಿಳಿಸಿದ್ದಾರೆ.












Click it and Unblock the Notifications