Union Budget 2026: ಬೆಂಗಳೂರಿನಿಂದ ಹೈದರಾಬಾದ್, ಚೆನ್ನೈಗೆ ಹೈಸ್ಪೀಡ್ ರೈಲು ಕಾರಿಡಾರ್: ದೆಹಲಿ, ವಾರಣಾಸಿಗೂ ಬಂಪರ್
ನವದೆಹಲಿ: ಇಂದಿನ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರು ಸೇರಿದಂತೆ ದೇಶದ ಏಳು ಮಹಾನಗರಗಳಿಗೆ ಹೈಸ್ಪೀಡ್ ರೈಲು ಘೋಷಣೆ ಮಾಡಿದ್ದಾರೆ. ಈ ಮೂಲಕ ಕರ್ನಾಟಕಕ್ಕೂ ಬಂಪರ್ ನೀಡಿದ್ದಾರೆ.
ಈ ಹೈಸ್ಪೀಡ್ ರೈಲು ಯೋಜನೆ ಘೋಷಣೆಯಿಂದ ಕರ್ನಾಟಕದ ಪ್ರಮುಖ ಬೆಂಗಳೂರು ನಗರ, ತೆಲಂಗಾಣ ರಾಜ್ಯದ ಪ್ರಮುಖ, ಮಹಾರಾಷ್ಟ್ರದ ಮುಂಬೈ ಸೇರಿದಂತೆ ವಿವಿಧ ರಾಜ್ಯಗಳ ಮಹಾನಗರಗಳ ಮಧ್ಯ ರೈಲು ಸಾರಿಗೆ ಸುಧಾರಿಸಲಿದೆ. ಪ್ರಮುಖ ನಗರಗಳನ್ನು ಜೋಡಿಸುವ ಉದ್ದೇಶದಿಂದ ಈ ಏಳು ಹೈಸ್ಪೀಡ್ ರೈಲು ಯೋಜನೆ ಘೋಷಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಈ ಯೋಜನೆ ಮೂಲಕ ಪ್ರಮುಖ ಮಾರ್ಗಗಳ ಪ್ರಯಾಣ ಸಮಯ ಕಡಿಮೆ ಮಾಡಲಿದೆ. ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡಲಿದೆ. ಮಹಾರಾಷ್ಟ್ರ ಜೊತೆಗೆ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ಕರ್ನಾಟದ ಬೆಂಗಳೂರು, ತಮಿಳುನಾಡಿನ ಚೆನ್ನೈ, ತೆಲಂಗಾಣದ ಹೈದರಾಬಾದ್, ದೆಹಲಿ ಹಾಗೂ ವಾರಣಾಸಿ ಮಧ್ಯೆ ಭವಿಷ್ಯದಲ್ಲಿ ಹೈಸ್ಪೀಡ್ ರೈಲುಗಳು ಸಂಚಾರ ಸೇವೆ ಸಿಗಲಿದೆ.
ಏಳು ಪ್ರಮುಖ ಹೈಸ್ಪೀಡ್ ರೈಲು ಕಾರಿಡಾರ್ ಮಾರ್ಗಗಳು/ನಗರ
1) ಮುಂಬೈ-ಪುಣೆ
2) ಪುಣೆ-ಹೈದರಾಬಾದ್
3) ಹೈದರಾಬಾದ್-ಬೆಂಗಳೂರು
4) ಹೈದರಾಬಾದ್-ಚನ್ನೈ
5) ಚೆನ್ನೈ-ಬೆಂಗಳೂರು
6) ದೆಹಲಿ-ವಾರಣಾಸಿ
7) ವಾರಣಾಸಿ-ಸಿಲಿಗುರಿ
ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಕ ಸುಧಾರಣೆ
ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಈಗಾಗಲೇ ಕ್ರಾಂತಿ ಸೃಷ್ಟಿಸಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ಅಮೃತ್ ಭಾರತ್ ರೈಲುಗಳ ಬೆನ್ನಲ್ಲೆ ದೇಶದ ಏಳು ನಗರಗಳು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಪಡೆದಿವೆ. ಇದರಿಂದ ಸುದೀರ್ಘ ಪ್ರಯಾಣವು ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಇದಕ್ಕೆ ತಕ್ಕಂತೆ ಈಗಾಗಲೇ ವಂದೇ ಭಾರತ್ ಸ್ಲೀಪರ್ ರೈಲುಗಳ ಕಾರ್ಯಾಚರಣೆ ಆರಂಭಿಸಿದೆ. ಪೂರಕವಾಗಿ ರೈಲ್ವೆ ಹಳಿ, ದ್ವಿಪಥ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಒಟ್ಟಾರೆ ರೈಲ್ವೆ ಮೂಲಸೌಕರ್ಯ ಸುಧಾರಿಸಲಾಗಿದೆ. ಅದರ ಬೆನ್ನಲ್ಲೆ ಹೊಸ ರೈಲ್ವೆ ಯೋಜನೆ ಘೋಷಣೆ ಆಗಿರುವುದು ದೇಶದ ಜನರಲ್ಲಿ ಸಂತಸ ಮೂಡಿಸಿದೆ.
ಉತ್ತರ ಭಾರತದ ಮೂರು ರಾಜ್ಯಗಳಿಗೆ ಬಂಪರ್
ದೆಹಲಿ-ವಾರಣಾಸಿ, ಪೂಣೇ ಹೈದರಾಬಾದ್ ಚೆನ್ನೈ ಮಹಾನಗರಳಿಗೆ ಡೆಡಿಕೇಟೆಡ್ ರೇರ್ ಅರ್ಥ್ ಕಾರಿಡಾರ್ ಆರಂಭಿಸುವುದಾಗಿ ವಿತ್ತ ಸಚಿವರು ಘೋಷಿಸಿದ್ದಾರೆ. ಉತ್ತರ ಭಾರತದ ಮೂರು ರಾಜ್ಯಗಳಿಗೆ ಹೊಸ ರೈಲ್ವೆ ಯೋಜನೆ ಸಿಕ್ಕಂತಾಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಹೊಸ ರೈಲು ಯೋಜನೆ ಜಾರಿ ಆಗಲಿದೆ. ಹಿಮ ಪ್ರದೇಶಗಳಲ್ಲಿ ಮೌಂಟೇನ್ ರೈಲು ಯೋಜನೆ ಘೋಷಣೆ ಮಾಡಲಾಗಿದ್ದು, ಇದರಿಂದ ಆ ಭಾಗದ ಜನರಿಗೆ ಸಾರಿಗೆ ಅನುಕೂಲ ಸಿಗಲಿದೆ ಎಂದು ಕೇಂದ್ರ ಸಚಿವೆ ಮಾಹಿತಿ ಕೊಟ್ಟರು.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.











Click it and Unblock the Notifications