Union Budget 2026: ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ..ಆರಂಭಿಕ ಪ್ರಕ್ರಿಯೆಗಳ ಸಂಕ್ಷಿಪ್ತ ಮಾಹಿತಿ

ನವದೆಹಲಿ: ಇಂದು ಭಾನುವಾರ ಇತಿಹಾಸದಲ್ಲೇ ಎರಡನೇ ಬಾರಿಗೆ ಭಾನುವಾರ ಕೇಂದ್ರ ಬಜೆಟ್ ಮಂಡನೆ ಆಗುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಒಂಬತ್ತನೆ ಬಜೆಟ್ ಮಂಡನೆ ಇದಾಗಿದ್ದು, ಇದರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಬಜೆಟ್ ಮಂಡನೆಗೂ ಮುನ್ನ ಏನೆಲ್ಲ ನಡೆಯುತ್ತದೆ. ಆ ಪ್ರಕ್ರಿಯೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ

ಬೆಳಗ್ಗೆ 11 ಗಂಟೆಯಲ್ಲಿ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣ ಆರಂಭಿಸಲಿದ್ದಾರೆ. ಅದಕ್ಕು ಮೊದಲು ಕರ್ತವ್ಯ ಭವನದಿಂದ ಸುಮಾರು 09 ಗಂಟೆಗೆ ತೆರಳಿದ ವಿತ್ತ ಸಚಿವೆ ಬಜೆಟ್ ಮಂಡನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನುಮತಿ ಪಡೆದರು. ಈ ವೇಳೆ ರಾಷ್ಟ್ರಪತಿಗಳು ಸಚಿವೆಗೆ ಸಿಹಿ ತಿನ್ನಿಸಿ ಶುಭ ಹಾರೈಸಿ ಕಳುಹಿಸಿದ್ದು ವಿಶೇಷವಾಗಿತ್ತು. ಅಲ್ಲಿಂದ ನಾರ್ತ್ ಬ್ಲಾಕ್ ನಲ್ಲಿರುವ ಹಣಕಾಸು ಸಚಿವಾಲಯಕ್ಕೆ ಅವರು ಭೇಟಿ ನೀಡಿದರು.

Union Budget 2026

ಸಂಸತ್ ಭವನದತ್ತ ಬರುವ ನಿರ್ಮಲಾ ಸೀತಾರಾಮನ್ ಅವರು, ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡು ಬಜೆಟ್ ಮಂಡನೆಗೆ ಸಂಪುಟ ಸರ್ವ ಸದಸ್ಯರಿಂದ ಅಧಿಕೃತ ಅನುಮೋದನೆ ಪಡೆಯಲಿದ್ದಾರೆ. ನಂತರ ಅಧಿವೇಶನ ಹಾಲ್‌ಗೆ ಬಂದು ಸರಿಯಾಗಿ 11 ಗಂಟೆಗೆ ಬಜೆಟ್ ಭಾಷಣ ಶುರು ಮಾಡಲಿದ್ದಾರೆ. ಅಲ್ಲಿಂದ ಬಜೆಟ್ ಮಂಡನೆ ಆರಂಭವಾಗಲಿದೆ.

ವಿಶೇಷ ಸೀರೆಯಲ್ಲಿದ್ದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ತವ್ಯ ಭವನದಿಂದ ತೆರಳುವ ಮೊದಲು ಕೆಂಪು ಬಣ್ಣದ ಕವರ್‌ನಲ್ಲಿದ್ದ ಟ್ಯಾಬ್‌ ಅನ್ನು ಪ್ರದರ್ಶಿಸಿದರು. ಈ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಇವೆ. ಅನ್ನದಾತರಿಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ. ಒಂಬತ್ತನೇ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರಿಗೆ ರಾಜಕೀಯ ಸಹೋದ್ಯೋಗಿಗಳು, ಸಂಸದರು ಶುಭಕೋರಿದ್ದು ಕಂಡು ಬಂತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+