ಕೇಂದ್ರ ಬಜೆಟ್‌ 2025; ಕಡಿಮೆಯಾದ ಮಧ್ಯಮ ವರ್ಗದ ಹೊರೆ! ಬಜೆಟ್‌ ಪ್ರಮುಖ ಅಂಶಗಳು

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2025ರಂದು ಕೇಂದ್ರ ಬಜೆಟ್‌ ಮಂಡನೆ ಮಾಡಿದ್ದಾರೆ. ಅವರು ಮಂಡನೆ ಮಾಡಿರುವ 8ನೇ ಬಜೆಟ್‌ ಆಗಿದೆ. ಈ ಮೂಲಕ ಅತೀ ಹೆಚ್ಚು ಬಜೆಟ್‌ ಮಂಡನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದ್ದಾದಾರೆ.

ಈ ಬಜೆಟ್‌ನಲ್ಲಿ ಮಧ್ಯಮ ವರ್ಗದವರ ಕೃಷಿ ಕ್ಷೇತ್ರ, ದಿನನಿತ್ಯ ಬಳಕೆ ವಸ್ತುಗಳು ಸೇರಿದಂತೆ ಇನ್ನಿತರೆ ಪ್ರಮುಖ ವಸ್ತುಗಳ ಮೇಲಿನ ದರ ಇಳಿಸುವ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅದರಂತೆಯೇ ಕೆಲವು ವಸ್ತುಗಳ ದರಗಳನ್ನು ಇಳಿಕೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

Union Budget 2025 Live Updates  Karnataka Impact Income Tax  GST  Railway budget in kannada

ನಿರ್ಮಲಾ ಸೀತಾರಾನ್‌ ಅವರು ಇಂದು (ಫೆಬ್ರುವರಿ 1) ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡನೆ ಭಾಷಣವನ್ನು ಆರಂಭಿಸಿದರು. ಸಂಸತ್ತಿನಲ್ಲಿ ಬಜೆಟ್ ಮಂಡನೆ ಮಂಡನೆ ಮಾಡಿದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರದ 3ನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ನಿರ್ಮಲಾ ಸೀತಾರಾಮನ್‌ ಅವರು ಮಂಡನೆ ಮಾಡಿರುವ 8ನೇ ಕೇಂದ್ರ ಬಜೆಟ್‌ ಆಗಿದೆ. ಈ ಪೈಕಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು ಸೇರಿವೆ. ಇನ್ನು ಬಜೆಟ್‌ನ ಕ್ಷಣ ಕ್ಷಣದ ಅಪ್ಡೇಟ್‌ ಮಾಹಿತಿಯನ್ನು ಒನ್‌ ಇಂಡಿಯಾ ಕನ್ನಡದಲ್ಲಿ ಪಡೆಯಬಹುದಾಗಿದೆ.

Feb 01, 2025, 3:43 pm IST

ಕೇಂದ್ರ ಸರ್ಕಾರದ ಬಜೆಟ್‌ ಷೇರು ಮಾರುಕಟ್ಟೆಗೆ ಉತ್ತೇಜನ ಕೊಟ್ಟಿದೆ. ಬಿಎಸ್‌ಇ ಸೆನ್ಸೆಕ್ಸ್ ಶನಿವಾರ 915 ಅಂಕಗಳಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ 285 ಅಂಕಗಳು ಏರಿಕೆ ಕಂಡಿದೆ. ಕಳೆದ ಆರು ತಿಂಗಳಿನಿಂದ ಸತತ ಕುಸಿತದಿಂದ ಕಂಗಾಲಾಗಿದ್ದ ಹೂಡಿಕೆದಾರರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.
Feb 01, 2025, 3:02 pm IST

ರಾಜ್ಯಗಳಿಗೆ 50 ವರ್ಷಗಳ ವರೆಗೆ ಬಡ್ಡಿ ಇಲ್ಲದೆ 1.5 ಲಕ್ಷ ಕೋಟಿ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ಹೊಸ ಯೋಜನೆಗಾಗಿ ಕೇಂದ್ರ ಬಿಜೆಪಿ ಸರ್ಕಾರವು ಬರೋಬ್ಬರಿ 10 ಲಕ್ಷ ಕೋಟಿ ಮೀಸಲಿರಿಸಿದೆ.
Feb 01, 2025, 2:40 pm IST

ಈ ಬಾರಿಯ ಕೇಂದ್ರ ಬಜೆಟ್ ಬಳಿಕ ಟಿವಿ ಡಿಸ್​ಪ್ಲೆ, ಬಟ್ಟೆಗಳು, ಫ್ಲಾಟ್​ ಪ್ಯಾನಲ್ ಡಿಸ್​​ಪ್ಲೆಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಟೆಕ್ ಮತ್ತು ಉತ್ಪಾದನಾ ವಲಯ ದುಬಾರಿಯಾಗಲಿದ್ದು, ಆಮದು ಮತ್ತು ರಫ್ತು ವ್ಯವಹಾರ ಹೊಂದಿರುವ ಕೆಲವು ಕೈಗಾರಿಕೆಗಳ ಮೇಲೆ ಈ ಬಜೆಟ್‌ ಪರಿಣಾಮ ಬೀರಲಿದೆ.
Feb 01, 2025, 2:23 pm IST

ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸುವ ದೂರದೃಷ್ಟಿಯ ಬಜೆಟ್ ಅನ್ನು ಮಂಡಿಸಿದ್ದಕ್ಕಾಗಿ ನಾನು ಆದರಣೀಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಮತ್ತು ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಪ್ರಮುಖವಾಗಿ ನಮ್ಮ ರೈತರು, ಮಧ್ಯಮ ವರ್ಗ, ಸಣ್ಣ ಮತ್ತು ಮಾಧ್ಯಮ ವಲಯದ ಉದ್ಯಮಗಳ ಸಬಲೀಕರಣದ ಸಾಕಾರದ ಗುರಿ ಸಾಧಿಸಲು ಈ ಬಜೆಟ್ ಉಪಯುಕ್ತವಾಗಲಿದೆ. ಇದು ಉದ್ಯಮಸ್ನೇಹಿ ಬಜೆಟ್ ಆಗಿದ್ದು, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಪ್ರಾಮುಖ್ಯತೆ ಒದಗಿಸಿದೆ ಎಂದಿದ್ದಾರೆ.
Feb 01, 2025, 2:06 pm IST

ಕೇಂದ್ರ ಗೃಹ ಸಚಿವ ಅಮಿತ್ ಶಾ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮಧ್ಯಮ ವರ್ಗದವರು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ ಅವರ ಹೃದಯದಲ್ಲಿದ್ದಾರೆ. 12 ಲಕ್ಷದ ತನಕ ಯಾವುದೇ ಆದಾಯ ತೆರಿಗೆ ಇಲ್ಲದಿರುವುದು, ಮಧ್ಯಮ ವರ್ಗದ ಜನರ ಮುಂದಿನ ದಿನಗಳ ಆರ್ಥಿಕ ಶಕ್ತಿಯನ್ನು ಇನ್ನಷ್ಟು ಸಶಕ್ತಗೊಳಿಸಲು ಸಹಾಯಕವಾಗಿದೆ ಎಂದು ಹೇಳಿದ್ದಾರೆ.
Feb 01, 2025, 1:50 pm IST

ಬಜೆಟ್ ಕುರಿತು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈ ವರೆಗೂ ನಡೆದು ಬಂದ ಹಾದಿ ಬಡತನ ನಿರ್ಮೂಲನೆಗಾಗಿ ಸುಧಾರಣೆ ಹಾಗೂ ಅಭಿವೃದ್ದಿಯ ಆರ್ಥಿಕ ಹೆಜ್ಜೆ ಗುರುತುಗಳು. ಮುಂದಿನ ಹೆಗ್ಗುರಿ ಸದೃಢ ಭಾರತ ಕಟ್ಟುವ ಮಹಾಸಂಕಲ್ಪ, 2047ರ ವೇಳೆಗೆ ವಿಶ್ವ ಮುಂಚೂಣಿಯಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವ ಭಾರತ ನಿರ್ಮಾಣದ ಯೋಜನೆ ರೂಪಿಸಲು ಇಂದು ಸಂಸತ್ತಿನಲ್ಲಿ ಮಂಡನೆಯಾಗಿರುವ ಬಜೆಟ್ ಆತ್ಮವಿಶ್ವಾಸ ತುಂಬುವ ಭರವಸೆಯಾಗಿದೆ ಎಂದು ಹೇಳಿದ್ದಾರೆ.
Feb 01, 2025, 1:32 pm IST

ಕೇಂದ್ರ ಬಜೆಟ್‌ PDF ಪ್ರತಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಕೇಂದ್ರ ಬಜೆಟ್‌ PDF ಪ್ರತಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
2025ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಏನಿದೆ? ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಇರುವವರು ಸಂಸತ್ತಿನಲ್ಲಿ ಬಜೆಟ್ ಭಾಷಣ ಮುಗಿದ ನಂತರ ಅಧಿಕೃತ ವೆಬ್‌ಸೈಟ್ indiabudget.gov.in ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. indiabudget.gov.in ವೆಬ್‌ಸೈಟ್‌ನಲ್ಲಿ ಬಜೆಟ್‌ಗೆ ಸಂಬಂಧಿಸಿದ ದಾಖಲೆಗಳು ಲಭ್ಯವಿರುತ್ತವೆ. ಕೇಂದ್ರ ಬಜೆಟ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಕೇಂದ್ರ ಬಜೆಟ್ ವೆಬ್ ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಬಹುದು. ಇದು ಎಲ್ಲಾ Android ಮತ್ತು iOS ಪ್ಲಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ.
Feb 01, 2025, 1:28 pm IST

12 ಲಕ್ಷ ರೂಪಾಯಿಗಳವರೆಗೆ ಆದಾಯ ಹೊಂದಿರುವವರು ಯಾವುದೇ ಆದಾಯ ತೆರಿಗೆ ಕಟ್ಟುವಂತಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋ‍ಷಿಸಿದ್ದಾರೆ
Feb 01, 2025, 12:17 pm IST

ಆದಾಯ ತೆರಿಗೆದಾರರಿಗೆ ಬಂಪರ್‌ ಗಿಫ್ಟ್‌ ಸಿಕ್ಕಿದ್ದು, ಹನ್ನೆರಡು ಲಕ್ಷದವರೆಗೆ ತೆರಿಗೆ ವಿನಾಯತಿ ನೀಡಲಾಗಿದೆ. ಹನ್ನೆರಡು ಲಕ್ಷದವರೆಗೆ ವಾರ್ಷಿಕ ಆದಾಯ ಇರುವವರು ತೆರಿಗೆ ಕಟ್ಟುವಂತಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
Feb 01, 2025, 12:09 pm IST

ಬಜೆಟ್ 2025: ಯಾವೆಲ್ಲ ವಸ್ತುಗಳು ಅಗ್ಗ

ಬಜೆಟ್ 2025: ಯಾವೆಲ್ಲ ವಸ್ತುಗಳು ಅಗ್ಗ
ಕೇಂದ್ರ ಬಜೆಟ್‌ನಲ್ಲಿ ಮೊಬೈಲ್, ದೇಶಿ ಚರ್ಮದ ಉತ್ಪನ್ನಗಳು, ಎಲೆಕ್ಟ್ರಿಕ್ ವಾಹನಗಳು, ಎಲ್‌ಇಡಿ ಟಿವಿ, ಕ್ಯಾನ್ಸರ್ ಔ‍ಷಧಗಳ ಬೆಳೆ ಇಳಿಕೆ ಮಾಡಿದ್ದರ ಬಗ್ಗೆ ಘೋಷಣೆ ಆಗಿದೆ. ಈ ಮೂಲಕ ದೇಶಿ ವಸ್ತುಗಳಿಗೂ ಕೇಂದ್ರ ಬಜೆಟ್‌ನಲ್ಲಿ ಆದ್ಯತೆ ಸಿಕ್ಕಿದೆ. ಇವಿ ವಾಹನಗಳ ಬಳಕೆ ಉತ್ತೇಜನ ದೊರೆತಿದೆ.
Feb 01, 2025, 12:08 pm IST

ಬಜೆಟ್ 2025: ಯಾವುದೆಲ್ಲಾ ಅಗ್ಗವಾಗಲಿದೆ?

ಬಜೆಟ್ 2025: ಯಾವುದೆಲ್ಲಾ ಅಗ್ಗವಾಗಲಿದೆ?
ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಎಂಟನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಎಲ್‌ಇಡಿ ಟಿವಿ, ಮೊಬೈಲ್, ಎಲೆಕ್ಟ್ರಿಕ್ ಕಾರು, ಚರ್ಮದ ಉತ್ಪನ್ನಗಳು ಹಾಗೂ ಕ್ಯಾನ್ಸರ್‌ ಔಷಧಿ ಅಗ್ಗವಾಗಲಿದೆ.
Feb 01, 2025, 12:07 pm IST

ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಭಾರತ ಸರ್ಕಾರ 120 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದೆ. ಈ ವಿಮಾನ ನಿಲ್ದಾಣಗಳು ಮುಂದಿನ 10 ವರ್ಷಗಳಲ್ಲಿ 4 ಕೋಟೆ ಹೆಚ್ಚುವರಿ ಪ್ರಯಾಣಿಕರನ್ನು ನಿರ್ವಹಣೆ ಮಾಡಲಿವೆ. ಹೊಸ ಉಡಾನ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಎರಡು ಮತ್ತು 3ನೇ ಹಂತದ ನಗರಗಳಿಗೆ ಸಹ ವಿಮಾನ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಘೋಷಿಸಿದರು.
Feb 01, 2025, 11:50 am IST

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜಿನಲ್ಲಿ 10,000 ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಿದರು.
Feb 01, 2025, 11:47 am IST

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಎಸ್‌ಸಿ/ಎಸ್‌ಟಿ ಸಮುದಾಯಗಳ 5 ಲಕ್ಷ ಮಹಿಳೆಯರಿಗೆ 5 ವರ್ಷಗಳ ಅವಧಿಯೊಂದಿಗೆ ಟರ್ಮ್ ಲೋನ್‌ಗಳನ್ನು ನೀಡಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಣೆ ಮಾಡಿದರು.
Feb 01, 2025, 11:42 am IST

ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ

ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಕೃಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ. ಸರ್ಕಾರ ರಾಜ್ಯಗಳೊಂದಿಗೆ ಸಹಭಾಗಿತ್ವದಲ್ಲಿ 100 ಜಿಲ್ಲೆಗಳನ್ನು ಒಳಗೊಂಡಿರುವಂತೆ ಯೋಜನೆ ಜಾರಿಗೊಳಿಸುತ್ತದೆ.
Feb 01, 2025, 11:37 am IST

ಭಾರತೀಯ ಅಂಚೆಯನ್ನು ಬೃಹತ್‌ ಸಾರ್ವಜನಿಕ ಸರಕು ಸೇವೆಗಳ ಸಂಸ್ಥೆಯಾಗಿ ಪರಿವರ್ತಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ ಮಂಡನೆ ವೇಳೆ ಘೋಷಿಸಿದ್ದಾರೆ.
Feb 01, 2025, 11:32 am IST

ವೈದ್ಯಕೀಯ ಕಾಲೇಜುಗಳಲ್ಲಿ ಹತ್ತು ಸಾವಿರ ಹೆಚ್ಚುವರಿ ಸೀಟುಗಳನ್ನು ಸೇರಿಸಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಿ ಮೋದಿ ಸರ್ಕಾರದ 3.0 ಸರ್ಕಾರದ ಮೊದಲ ಬಜೆಟ್‌ ಮಂಡನೆ ವೇಳೆ ಘೋಷಿಸಿದ್ದಾರೆ.
Feb 01, 2025, 11:21 am IST

ದೇಶದಲ್ಲಿ ಕೃಷಿ ಯೋಜನೆಗಳಿಗೆ ಒತ್ತು ನೀಡುವ ಬಜೆಟ್‌ ಮಂಡನೆ. ದೇಶದಲ್ಲಿ ಕಡಿಮೆ ಇಳುವರಿ ಬರುವ 100 ಪ್ರದೇಶಗಳನ್ನು ಗುರುತಿಸಲಾಗಿದ್ದು. ಇಲ್ಲಿ ಬೆಳೆ ಇಳುವರಿ ಹೆಚ್ಚಳ ಮಾಡುವುದಕ್ಕೆ ಕ್ರಮ. ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಧನ್‌ ಧಾನ್ಯ ಕೃಷಿ ಯೋಜನೆಯನ್ನು ಪರಿಚಯಿಸಲಾಗಿದ್ದು, ಇದರಿಂದ 1.7 ಕೋಟಿಗೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ.
Feb 01, 2025, 11:20 am IST

ಈ ಬಾರಿಯ ಬಜೆಟ್ ದೇಶದ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು, ಒಟ್ಟಾರೆ ಅಭಿವೃದ್ಧಿಯನ್ನು ಸಾಧಿಸಲು, ಖಾಸಗಿ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲು, ದೇಶೀಯ ಸೂಕ್ಷ್ಮತೆಗಳನ್ನು ಬಲಪಡಿಸಲು ಮತ್ತು ಮಧ್ಯಮ ವರ್ಗದ ವೆಚ್ಚದ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Feb 01, 2025, 11:19 am IST

ಬಡತನ ನಿರ್ಮೂಲನೆಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು

ಬಡತನ ನಿರ್ಮೂಲನೆಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 8ನೇ ಬಾರಿಗೆ ಬಜೆಟ್ ಮಂಡನೆ ಶುರು ಮಾಡಿದ್ದಾರೆ. ಬಡತನ ನಿರ್ಮೂಲನೆಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಮಧ್ಯಮವರ್ಗ ಹಾಗೂ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ರೈತರಿಗೆ ನೆರವು ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
Feb 01, 2025, 11:17 am IST

2025ರ ಬಜೆಟ್ ಭಾಷಣದಲ್ಲಿ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 10 ಕ್ಷೇತ್ರಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಬಡವರು, ಯುವಕರು, ರೈತರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.
Feb 01, 2025, 11:16 am IST

ಹಣಕಾಸು ಸಚಿವೆ ನಿರ್ಮಲಾ ಬಜೆಟ್ ಮಂಡಿಸಲು ಆರಂಭಿಸಿದ್ದಾರೆ. ಇದೇ ವೇಳೆ ಕುಂಭ ಮೇಳದಲ್ಲಿ ಸಂಭವಿಸಿದ ಸಾವುಗಳ ಕುರಿತು ಚರ್ಚೆಯಾಗಬೇಕೆಂದು ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗುತ್ತಿವೆ. ಈ ಗದ್ದಲದ ನಡುವೆಯೇ ಅವರು ಬಜೆಟ್ ಮಂಡಿಸಲು ಮಂದಾಗಿದ್ದಾರೆ.
Feb 01, 2025, 11:14 am IST

ಕೇಂದ್ರ ಬಜೆಟ್ ಮಂಡನೆ ಆರಂಭ

ಕೇಂದ್ರ ಬಜೆಟ್ ಮಂಡನೆ ಆರಂಭ
ಮುಂದಿನ ಐದು ವರ್ಷದ ಗುರಿಯೊಂದಿಗೆ ಸಬ್‌ ಕಾ ವಿಕಾಸ್ ಬಜೆಟ್ ಮಂಡನೆ ಎಂದ ವಿತ್ತ ಸಚಿವೆ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭದಲ್ಲೇ ಸದನದಲ್ಲಿ ಗದ್ದಲ. ಗದ್ದಲ ನಡುವೆ ಬಜೆಟ್ ಮಂಡನೆ.ಬಜೆಟ್ ಮುನ್ನವೇ ವಿಪಕ್ಷಗಳಿಂದ ಆಕ್ರೋಶ.
Feb 01, 2025, 11:01 am IST

ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಇದೀಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.
Feb 01, 2025, 10:58 am IST

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್‌ ಮಂಡನೆ ಮಂಡಿಸುತ್ತಿದ್ದು, ಈ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ಆಗಮಿಸಿದರು.
Feb 01, 2025, 10:56 am IST

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದೇನು?
Feb 01, 2025, 10:50 am IST

ಇಂದು ನಿರ್ಮಲಾ ಸೀತಾರಾಮನ್‌ ಕೇಂದ್ರ ಬಜೆಟ್‌ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮೊಸರು ಮತ್ತು ಸಕ್ಕರೆ ತಿನ್ನಿಸಿದರು.
Feb 01, 2025, 10:41 am IST

ಬಜೆಟ್ ದಿನವೇ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಕುಸಿತ ಕಂಡಿದ್ದು, ಆರಂಭಿಕ ಆಘಾತದ ನಂತರ ಒಂದಷ್ಟು ಚೇತರಿಕೆ ಕಂಡಿದೆ. 2025-26ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಭಾರಿ ಕುತೂಹಲ ಕೆರಳಿಸಿದ್ದು, ಹೂಡಿಕೆದಾರರು ಬಜೆಟ್ ಮಂಡನೆಯ ನಂತರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
Feb 01, 2025, 10:19 am IST

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡಿಸುತ್ತಿದ್ದಾರೆ. ಹಲವು ವರ್ಷಗಳಿಂದ ಅವರು ಟ್ಯಾಬ್ ಮೂಲಕ ಬಜೆಟ್ ಭಾಷಣವನ್ನು ಲೋಕಸಭೆಯಲ್ಲಿ ಓದುತ್ತಾರೆ. ಫೆಬ್ರವರಿ 1ರ ಶನಿವಾರ 2025-26ನೇ ಸಾಲಿನ ಬಜೆಟ್ 11 ಗಂಟೆಗೆ ಮಂಡನೆಯಾಗಲಿದೆ.
Feb 01, 2025, 10:12 am IST

ಹಣದುಬ್ಬರ ದರದ ಮೇಲೆ 2025ರ ಬಜೆಟ್‌ನ ಪರಿಣಾಮ ದೇಶದ ಪ್ರತಿ ಬಜೆಟ್ ಅದರ ಸಮಯದ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ. ಕೋವಿಡ್ -19 ಬಿಕ್ಕಟ್ಟಿನ ಸಮಯದಲ್ಲಿ, ಬಜೆಟ್ ಸಾಂಕ್ರಾಮಿಕ ರೋಗದ ಪರಿಣಾಮವನ್ನು ನಿರ್ವಹಿಸುವತ್ತ ಗಮನಹರಿಸಿತು, ಆದರೆ 2011 ರ ಬಜೆಟ್ ಯುರೋಜೋನ್ ಸಾಲ ಬಿಕ್ಕಟ್ಟನ್ನು ನಿಭಾಯಿಸಿತು. 2025 ರ ಬಜೆಟ್ ದೇಶೀಯ ಮತ್ತು ಜಾಗತಿಕ ಎರಡೂ ಸವಾಲುಗಳನ್ನು ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+